Job Description: * ಇತ್ತೀಚಿಗೆ ಕೇಂದ್ರ ಸರಕಾರವು ಬಿಡುಗಡೆ ಮಾಡಿರುವ ಸಂಸದ್ ಟಿವಿಯ ಯೂಟ್ಯೂಬ್ ಚಾನಲ್ ನ್ನು ಯೂಟ್ಯೂಬ್ ತೆಗೆದುಹಾಕಿತ್ತು. ಆದರೆ ಕೆಲ ಗಂಟೆಗಳ ನಂತರ ಮರುಸ್ಥಾಪಿಸಿದೆ. ಪ್ರಸ್ತುತ ಈ ಸಂಸದ್ ಟಿವಿಯ ರಾಜ್ಯಸಭೆ, ಲೋಕಸಭೆಗಳ ಕಲಾಪಗಳ ನೇರ ಪ್ರಸಾರ ಮಾಡುವ ಯೂಟ್ಯೂಬ್ ಚಾನಲ್ ಆಗಿದೆ. ಕಮ್ಯುನಿಟಿ ಗೈಡ್ ಲೈನ್ಸ್'ನ್ನು ಉಲ್ಲಂಘಿಸಿರುವ ಹಿನ್ನಲೆಯಿಂದಾಗಿ ಈ ಯೂಟ್ಯೂಬ್ ಚಾನಲ್ ನ್ನು ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. * ಕೆಲ ಹ್ಯಾಕ್'ರಗಳು ಸಂಸದ್ ಟಿವಿ ಖಾತೆ ಹ್ಯಾಕ್ ಮಾಡಿ ಚಾನಲ್ ನ ಹೆಸರನ್ನು ಎಥೆರಿಯಮ್ ಎಂದು ಬದಲಾವಣೆ ಮಾಡಿದ್ದರು. * ಈ ಘಟನೆ ನಡೆದ ಬಳಿಕ ಯೂಟ್ಯೂಬ್ ಸದ್ಯದಲ್ಲೇ ಭದ್ರತಾ ಲೋಪವನ್ನು ಶಾಶ್ವತವಾಗಿ ಬಗೆಹರಿಸುತ್ತೇವೆ ಹಾಗೂ ವೇದಿಕೆಯಲ್ಲಿನ ಚಾನಲ್ ನ್ನು ಸಾಧ್ಯವಾದಷ್ಟೂ ಶೀಘ್ರವೇ ಮರುಸ್ಥಾಪಿಸಲಾಗುತ್ತದೆ ಎಂದು ತಿಳಿಸಿದೆ. ಪ್ರಸ್ತುತ ಸಂಸದ್ ಟಿವಿಯ ಸಾಮಾಜಿಕ ಜಾಲತಾಣ ತಂಡವು ಬೆಳಿಗ್ಗೆ 3.45 ರ ವೇಳೆಗೆ ಚಾನಲ್'ನ್ನು ಮರುಸ್ಥಾಪನೆ ಮಾಡಿದೆ. * ಪ್ರಸ್ತುತ ಭಾರತದಲ್ಲಿನ ಸೈಬರ್ ಭದ್ರತಾ ಘಟನೆಗಳ ಬಗ್ಗೆ ಸ್ಪಂದಿಸುವ ಭಾರತ ಕಂಪ್ಯೂಟರ್ ತುರ್ತು ಕ್ರಮ ಕೈಗೊಳ್ಳುವ ತಂಡವು ಸಂಸದ್ ಟಿವಿಯ ಚಾನಲ್'ನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿರುವದಾಗಿ ವರದಿ ಮಾಡಿದೆ. * ಸಂಸದ್ ಟಿವಿ (Sansad TV) ಇದೊಂದು ಭಾರತೀಯ ಸರ್ಕಾರದ ದೂರದರ್ಶನ ಚಾನೆಲ್ ಆಗಿದೆ, ಈ ಚಾನಲ್ ಭಾರತೀಯ ಸಂಸತ್ತಿನ ಉಭಯ ಸದನಗಳ ಕಾರ್ಯಕ್ರಮ ಹಾಗೂ ಇನ್ನಿತರ ಸಾರ್ವಜನಿಕ ವ್ಯವಹಾರಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮನೆ ಚಾನೆಲ್‌ಗಳು, ಲೋಕಸಭೆ ಟಿವಿ ಹಾಗೂ ರಾಜ್ಯಸಭಾ ಟಿವಿಯನ್ನು ಒಟ್ಟುಗೂಡಿಸಿ 2021 ರ ಮಾರ್ಚ್'ನಲ್ಲಿ ಈ ಸಂಸದ್ ಟಿವಿಯನ್ನು ರಚಿಸಲಾಗಿದೆ. ಇದರ ಹೊರತಾಗಿಯೂ ಪ್ರತಿ ಸದನಕ್ಕೂ ಪ್ರತ್ಯೇಕ ಉಪಗ್ರಹ ಚಾನೆಲ್‌ಗಳನ್ನು ಪ್ರಸಾರ ಮಾಡಲಾಗುತ್ತದೆ. * ಈ ಸಂಸದ್ ಟಿವಿ ತಾತ್ಕಾಲಿಕವಾಗಿ ಸುಮಾರು 35 ಥೀಮ್‌ಗಳನ್ನು ಒಳಗೊಂಡಿದೆ, ಈ ಥೀಮ್‌ಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಹಾಗೂ ಆ ಕಾರ್ಯಕ್ರಮಗಳು ಎಲ್ಲವು ಒಂದೇ ಆಗಿರುತ್ತವೆ, ಆದರೆ ಆ ಎಲ್ಲ ಕಾರ್ಯಕ್ರಮಗಳು ಎರಡು ಭಾಷೆಗಳಲ್ಲಿ ಇರುತ್ತವೆ ಒಂದು ಹಿಂದಿ ಮತ್ತೊಂದು ಇಂಗ್ಲಿಷ್. ಭಾರತೀಯ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು 2021 ರ ಸೆಪ್ಟೆಂಬರ್. 15 ರಂದು ಚಾನೆಲ್ ನ್ನು ಆರಂಭಿಸಿದ್ದಾರೆ.