Job Description: * ಪ್ರಸ್ತುತ ಭಾರತದಲ್ಲಿನ ಎಲ್ಲಾ ವಾಹನಗಳನ್ನು 2030 ರ ವೇಳೆಗೆ ವಿದ್ಯುತ್ ವಾಹನಗಳಾಗಿ ಬದಲಾಯಿಸುವ ಆಶಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಇದೀಗ ದೇಶದಲ್ಲಿ ಹೈಬ್ರಿಡ್ ಹಾಗೂ ವಿದ್ಯುತ್ ವಾಹನಗಳು ಅತೀ ಹೆಚ್ಚಾಗಿ ಬಳಕೆಯಾಗುತ್ತಿವೆ, ಅಲ್ಲದೇ ಬೇಡಿಕೆಯು ಹೆಚ್ಚಾಗುತ್ತಿದೆ. * ಪ್ರಧಾನಮಂತ್ರಿ ಮೋದಿಯವರ ಆಶಯದಂತೆ ನೈಋತ್ಯ ರೈಲ್ವೆಯ ರಾಜಧಾನಿ ಬೆಂಗಳೂರು ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕವು, ರೈಲ್ವೆ ವಿಭಾಗೀಯ ವ್ಯಸ್ಥಾಪಕರಾದ ಶ್ರೀ ಶ್ಯಾಮ್ ಸಿಂಗ್ ಅವರ ನೇತೃತ್ವದಲ್ಲಿ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ ಕಂಪನಿಯ ಸಹಯೋಗದೊಂದಿಗೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ನ ಉತ್ಪಾದನಾ ಘಟಕದಿಂದ ಎಲೆಕ್ಟ್ರಿಕ್ ವಾಹನಗಳನ್ನು ತ್ರಿಪುರ ರಾಜ್ಯಕ್ಕೆ ರವಾನಿಸಲು ಸಿದ್ಧತೆಗಳನ್ನು ನಡೆಸಿದೆ. * ಬೆಂಗಳೂರು ವಿಭಾಗದ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್'ನ ಜೊತೆಗೆ ಮಹೀಂದ್ರಾದ ಟ್ರೀಯೊ ಬ್ರಾಂಡ್‌'ನ 150 ಎಲೆಕ್ಟ್ರಿಕ್ ರಿಕ್ಷಾಗಳನ್ನು ರಾಮನಗರ ಜಿಲ್ಲೆಯ ಬಿಡದಿಯ ಕೈಗಾರಿಕಾ ಪ್ರದೇಶದಿಂದ ತ್ರಿಪುರ ರಾಜ್ಯದ ಜಿರಾನಿಯಗೆ ರವಾನಿಸುವ ಮೂಲಕ 24.79 ಲಕ್ಷ ರೂ. ಆದಾಯವನ್ನು ಪಡೆದಿದೆ. * ತ್ರಿಪುರಾ ರಾಜ್ಯವು ಈಶಾನ್ಯ ಭಾರತದ ಒಂದು ರಾಜ್ಯವಾಗಿದೆ. ದೇಶದ 3ನೇ-ಚಿಕ್ಕ ರಾಜ್ಯವಾಗಿದೆ. ಈ ರಾಜ್ಯವು ಉತ್ತರ, ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿಗೆ ಬಾಂಗ್ಲಾದೇಶ ಹಾಗೂ ಪೂರ್ವಕ್ಕೆ ಅಸ್ಸಾಂ & ಮಿಜೋರಾಂ ರಾಜ್ಯಗಳ ಜೊತೆ ಗಾಡಿಯನ್ನು ಹಂಚಿಕೊಂಡಿದೆ. * ಸ್ವತಂತ್ರ ತ್ರಿಪುರಾ ಸಾಮ್ರಾಜ್ಯವನ್ನು ಹಿಲ್ ಟಿಪ್ಪೆರಾ ಎಂದು ಕರೆಯುತ್ತಾರೆ, ಹಾಗೂ ಈ ರಾಜ್ಯವು 1949 ರಲ್ಲಿ ಹೊಸ ರಾಜ್ಯವಾಗಿ ಭಾರತ ದೇಶವನ್ನು ಸೇರಿಕೊಂಡಿದೆ. * 2011 ರ ಜನಗಣತಿಯ ಪ್ರಕಾರ ತ್ರಿಪುರಾ ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವಾಗಿದೆ. ಒಟ್ಟಾರೆ ಆ ರಾಜ್ಯದಲ್ಲಿ 87.75% ಸಾಕ್ಷರತೆಯ ಪ್ರಮಾಣವಿದೆ. ಪುರಾತತ್ತ್ವ ಶಾಸ್ತ್ರದ ಸ್ಥಳಗಳಾಗಿರುವ ಉನಕೋಟಿ, ಪಿಲಾಕ್ ಹಾಗೂ ದೇವತಾಮುರಾದಲ್ಲಿನ ಶಿಲ್ಪಗಳು ಸಂಘಟಿತ ಹಾಗೂ ಸ್ಥಳೀಯ ಧರ್ಮಗಳ ಜೊತೆ ಕಲಾತ್ಮಕ ಬೆಸುಗೆಯ ಐತಿಹಾಸಿಕ ಪುರಾವೆಗಳನ್ನು ಕಲ್ಪಿಸಿವೆ.