Job Description: * ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜರುಗಿದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜಿ20 ಸಚಿವಾಲಯ ಹಾಗೂ ಅದರ ವರದಿ ರಚನೆ ಗಳನ್ನ ಸ್ಥಾಪಿಸಲು ಅನುಮೋದನೆಯನ್ನು ನೀಡಲಾಗಿದೆ. * ಈ ಜಿ20 ಸಚಿವಾಲಯವು ವಿಶ್ವದ ಪ್ರಮುಖ ಆರ್ಥಿಕತೆಗಳನ್ನ ಹೊಂದಿಸುವ ಪ್ರಭಾವಶಾಲಿ ಗುಂಪಾಗಿದೆ ಹಾಗೂ ಮುಂದಿನ ಅಧ್ಯಕ್ಷ ಸ್ಥಾನವನ್ನ ನಡೆಸಲು ಅಗತ್ಯವಾಗಿರುವ ನೀತಿ ನಿರ್ಧಾರಗಳು ಹಾಗೂ ವ್ಯವಸ್ಥೆಗಳ ಅನುಷ್ಠಾನಕ್ಕೆ ಬದ್ಧವಾಗಿರುತ್ತದೆ. * ಪ್ರಸ್ತುತ ಭಾರತ ದೇಶವು 2022 ರ ಡಿಸೆಂಬರ್. 1 ರಿಂದ 2023 ರ ನವೆಂಬರ್ 30 ರವರೆಗೆ ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಭಾರತದ ಅಧ್ಯಕ್ಷ ಸ್ಥಾನವು 2023ರಲ್ಲಿ ಜಿ20 ಶೃಂಗಸಭೆಯೊಂದಿಗೆ ಕೊನೆಯಾಗುತ್ತದೆ ಎಂದು ತಿಳಿಸಲಾಗಿದೆ. * ಜಿ20 ಸಚಿವಾಲಯವನ್ನ ಗಣನೀಯ, ಜ್ಞಾನ, ವಿಷಯ, ತಾಂತ್ರಿಕ, ಮಾಧ್ಯಮ, ಭದ್ರತೆ ಮತ್ತು ಸಾರಿಗೆ ಅಂಶಗಳಿಗೆ ಸಂಬಂಧಪಟ್ಟಿರುವ ಕೆಲಸವನ್ನು ನಿರ್ವಹಣೆ ಮಾಡಲು ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಹಣಕಾಸು ಸಚಿವಾಲಯ ಹಾಗೂ ಇನ್ನಿತರ ಲೈನ್ ಸಚಿವಾಲಯಗಳ ಇಲಾಖೆಗಳು ಹಾಗೂ ಡೊಮೇನ್ ಜ್ಞಾನ ತಜ್ಞರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದನ್ನು ನಿರ್ವಹಿಸಲಿದ್ದಾರೆ. ಪ್ರಸ್ತುತ ಈ ಸಚಿವಾಲಯವು 2024 ಫೆಬ್ರವರಿ ತಿಂಗಳಿನ ರವರೆಗೆ ತನ್ನ ಕಾರ್ಯವನ್ನು ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. * G20 ಅಥವಾ ಗ್ರೂಪ್ ಆಫ್ ಟ್ವೆಂಟಿಯು 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್'ನ್ನು ಒಳಗೊಂಡಿರುವ ಅಂತರಸರ್ಕಾರಿ ವೇದಿಕೆಯಾಗಿದೆ. ಹಾಗೂ ಇದೊಂದು ಅಂತಾರಾಷ್ಟ್ರೀಯ ಆರ್ಥಿಕ ಸ್ಥಿರತೆ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತದೆ. * ಅನೇಕ ವಿಶ್ವ ಆರ್ಥಿಕ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯಾಗಿ G20 ಯನ್ನು ಈ ಹಿಂದೆ 1999 ರಲ್ಲಿ ಸ್ಥಾಪನೆ ಮಾಡಲಾಗಿದೆ. ಇದು 2008 ರಿಂದ ರಾಜ್ಯದ ಮುಖ್ಯಸ್ಥರು, ಹಣಕಾಸು ಸಚಿವರು, ವಿದೇಶಾಂಗ ಸಚಿವರು ಹಾಗೂ ಉನ್ನತ-ಶ್ರೇಣಿಯ ಅಧಿಕಾರಿಗಳನ್ನು ಸೇರಿಸಿ ಶೃಂಗಸಭೆಯನ್ನು ಕನಿಷ್ಠ ವರ್ಷಕ್ಕೊಮ್ಮೆ ಸಭೆಯನ್ನು ನಡೆಸಲಾಗುತ್ತದೆ. ಹಾಗೂ ಈ ಹಿಂದೆ 2009 ರ ಶೃಂಗಸಭೆಯಲ್ಲಿ, G20 ಅಂತರಾಷ್ಟ್ರೀಯ ಆರ್ಥಿಕ ಹಾಗೂ ಆರ್ಥಿಕ ಸಹಕಾರದ ಪ್ರಾಥಮಿಕ ಸ್ಥಳ ಎಂದು ಘೋಷಣೆ ಮಾಡಲಾಗಿದೆ.