Job Description: * ಪ್ರಸ್ತುತ ಚೀನಾದ ಬೀಜಿಂಗ್‌ ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾದ ಆನ್ನಾ ಗ್ಯಾಸೆರ್‌ ಅವರು ಸ್ನೋ ಬೋರ್ಡಿಂಗ್‌ ಸ್ಪರ್ಧಿಯಲ್ಲಿ ಚಿನ್ನದ ಪದಕವನ್ನು ಗೆದಿದ್ದಾರೆ. ಇವರು ಈ ಕ್ರೀಡೆಯಲ್ಲಿ ಸರಿ ಸುಮಾರು 12 ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. * ಆನ್ನಾ ಗ್ಯಾಸೆರ್‌ ಅವರು ನಾಲ್ಕು ವರ್ಷಗಳ ಹಿಂದೆ ಪಿಯೊಂಗ್‌ಚಾಂಗ್‌ ಕ್ರೀಡಾಕೂಟದಲ್ಲಿ ಈ ವಿಭಾಗವನ್ನು ಮೊದಲ ಬಾರಿಗೆ ಸೇರಿಸಲಾಗಿತ್ತು, ಆ ವರ್ಷದಲ್ಲಿ ಆನ್ನಾ ಅವರು ಚಾಂಪಿಯನ್ ಪಟ್ಟವನ್ನು ಪಡೆದಿದ್ದರು. * ಆನ್ನಾ ಗ್ಯಾಸೆರ್‌ ಅವರು ಈ ಕ್ರೀಡೆಯಲ್ಲಿ ಚಿನ್ನದ ಪದಕ, ನ್ಯೂಜಿಲೆಂಡ್‌ನ ಜೊಯಿ ಸ್ಯಾಡೊವಸ್ಕಿ ಸಿನಾಟ್‌ ಅವರಿಗೆ ಬೆಳ್ಳಿ ಪದಕ, ಹಾಗೂ ಜಪಾನ್‌ನ ಮುರಾಸೆ ಕೊಕೊಮೊ ಅವರಿಗೆ ಕಂಚಿನ ಪದಕ ಲಭಿಸಿವೆ. * ಮಹಿಳೆಯರ ಸ್ಕೀಯಿಂಗ್‌ನ ಡೌನ್‌ಹಿಲ್‌ ವಿಭಾಗದಲ್ಲಿ ಇಟಲಿಯ ಸೋಫಿಯಾ ಅವರಿಗೆ 2 ನೇ ಸ್ಥಾನ ಲಭಿಸಿದೆ ಅಂದರೆ ಬೆಳ್ಳಿ ಪದಕ ಲಭಿಸಿದೆ. ಈ ಹಿಂದೆ 2018 ರಲ್ಲಿಯು ಸೋಫಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಮಹಿಳೆಯರ ಸ್ಕೀಯಿಂಗ್‌ನ ಡೌನ್‌ಹಿಲ್‌ ವಿಭಾಗದಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಯುಟರ್‌ ಕೊರಿನ್‌ ಅವರಿಗೆ ಚಿನ್ನದ ಪದಕ ಲಭಿಸಿದೆ, ಹಾಗೂ ಇಟಲಿಯ ನಾದಿಯಾ ಡಿಲಾಗೊ ಅವರಿಗೆ ಕಂಚಿನ ಪದಕ ಲಭಿಸಿದೆ.