Job Description: * ಖಗೋಳಶಾಸ್ತ್ರಜ್ಞರು ಮುಖ್ಯ ಪಟ್ಟಿಯ ಕ್ಷುದ್ರಗ್ರಹ ಎಲೆಕ್ಟ್ರಾವನ್ನು ಸುತ್ತುವ 3 ನೇ ಚಂದ್ರನನ್ನು ಪತ್ತೆ ಹಚ್ಚಿದ್ದಾರೆ. ಇದು ಪತ್ತೆಯಾಗಿರುವ ಮೊದಲ ಕ್ವಾಡ್ರುಪಲ್ ಕ್ಷುದ್ರಗ್ರಹವಾಗಿದೆ. * ಈ ಎಲೆಕ್ಟ್ರಾ ಕ್ಷುದ್ರಗ್ರಹವನ್ನು ಮೊದಲು ಬಾರಿ 1873 ರ ಫೆಬ್ರವರಿ. 17 ರಂದು ಲಿಚ್‌ಫೀಲ್ಡ್ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ ಕ್ರಿಶ್ಚಿಯನ್ ಪೀಟರ್ಸ್ ಪತ್ತೆ ಹಚ್ಚಿದ್ದರು. ಪ್ರಸ್ತುತ ಈ ಎಲೆಕ್ಟ್ರಾ 199 ಕಿಮೀ ಪರಿಣಾಮಕಾರಿ ವ್ಯಾಸವನ್ನು ಹೊಂದಿದೆ ಹಾಗೂ ಸರಿ ಸುಮಾರು 7*1018 ದ್ರವ್ಯರಾಶಿಯನ್ನು ಹೊಂದಿದೆ ಎನ್ನಲಾಗಿದೆ. * ಈ ಹಿಂದೆ 2003 ರಲ್ಲಿ ಡಾ. ವಿಲಿಯಂ ಮೆರ್ಲೈನ್ ಹಾಗೂ ಅವರ ತಂಡವು ಎಲೆಕ್ಟ್ರಾ ಮೊದಲ ಚಂದ್ರನನ್ನು ಪತ್ತೆ ಹಚ್ಚಿದ್ದಾರೆ. ಮೌನಾ ಕೀ ವೀಕ್ಷಣಾಲಯದಲ್ಲಿ 'ಕೆಕ್ II ದೂರದರ್ಶಕ'ವನ್ನು ಬಳಸಿ ಇದನ್ನು ಪತ್ತೆ ಹಚ್ಚಲಾಗಿದೆ. * ಎಲೆಕ್ಟ್ರಾ ಮೊದಲ ಚಂದ್ರನನ್ನು S/2003 (130) 1 ಅಥವಾ S1 ಎಂದು ಗುರುತಿಸಲಾಗಿದೆ. ಈ ಚಂದ್ರ 6 ಕಿಮೀ ವ್ಯಾಸವನ್ನು ಹೊಂದಿದೆ. * * ಎಲೆಕ್ಟ್ರಾನ 2 ನೇ ಚಂದ್ರ : ಇದನ್ನು S/2014 (130) 1 ಅಥವಾ S2 ಎಂದು ಗುರುತಿಸಲಾಗಿದೆ. ಇದನ್ನು 2014 ರ ಡಿಸೆಂಬರ್. 6 ರಂದು ಡಾ. ಬಿನ್ ಯಾಂಗ್ ಅವರ ತಂಡವು ESO ನ ದೂರದರ್ಶಕದಲ್ಲಿ ಸ್ಫರ ಸೌಲಭ್ಯವನ್ನು ಬಳಕೆ ಮಾಡಿ ಪತ್ತೆ ಹಚ್ಚಿದ್ದಾರೆ. ಇದು 2 ಕಿಮೀ ವ್ಯಾಸವನ್ನು ಹೊಂದಿದೆ. * * ಎಲೆಕ್ಟ್ರಾನ 3 ನೇ ಚಂದ್ರ : ಖಗೋಳಶಾಸ್ತ್ರಜ್ಞರು ಈಗ 3 ನೇ ಚಂದ್ರನನ್ನು ಪತ್ತೆ ಹಚ್ಚಿದ್ದಾರೆ, ಹಾಗೂ ಎಲೆಕ್ಟಾವನ್ನು ಸುತ್ತುತ್ತಿದ್ದಾರೆ ಇದಕ್ಕೆ S/2014 (130) 2 ಅಥವಾ S3 ಎಂದು ಗುರುತಿಸಲಾಗಿದೆ. ಗೊತ್ತುಪಡಿಸಲಾಗಿದೆ. ಇದೀಗ ಇದು 1.6 ಕಿಮೀ ವ್ಯಾಸವನ್ನು ಹೊಂದಿದೆ ಹಾಗೂ 0.679 ದಿನಗಳ ಕಕ್ಷೆಯ ಅವಧಿಯನ್ನು ಹೊಂದಿದೆ.