Job Description: * ಪ್ರಸ್ತುತ ಚೀನಾದ ಬೀಜಿಂಗ್‌'ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಅಮೇರಿಕದ ಎರಿನ್ ಜಾಕ್ಸನ್‌ ಅವರು ಮಹಿಳೆಯರ 500 ಮೀ. ಸ್ಪೀಡ್‌ ಸ್ಕೇಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಈ ಸಾಧನೆ ಮಾಡಿರುವ ಕಪ್ಪು ಜನಾಂಗದ ಮೊದಲ ಮಹಿಳೆ ಇವರಾಗಿದ್ದಾರೆ. * ಎರಿನ್ ಜಾಕ್ಸನ್‌ ಅವರು ರಾಷ್ಟ್ರೀಯ ಸ್ಪೀಡ್‌ ಸ್ಕೇಟಿಂಗ್‌ ಓವಲ್‌ನಲ್ಲಿ ಜರುಗಿದ ಸ್ಪರ್ಧೆಯಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಪ್ರಸ್ತುತ ಒಲಿಂಪಿಕ್ಸ್‌ನ ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಅಮೆರಿಕ ತಂಡಕ್ಕೆ ಲಭಿಸಿರುವ ಮೊದಲ ಚಿನ್ನದ ಪದಕ ಇದಾಗಿದೆ. * ಎರಿನ್ ಜಾಕ್ಸನ್‌ ಅವರು ಚಿನ್ನದ ಪದಕವನ್ನು ಗೆದಿದ್ದಾರೆ. ಜಪಾನ್‌ನ ಮಿಹೊ ತಕಾಗಿ ಅವರು ಬೆಳ್ಳಿ ಪದಕವನ್ನು ಜಯಿಸಿಕೊಂಡಿದ್ದಾರೆ. ರಷ್ಯಾ ಒಲಿಂಪಿಕ್ಸ್ ಸಮಿತಿಯ ಎಂಜೆಲಿನಾ ಗೋಲಿಕೊವ ಅವರು ಈ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಕ್ರೀಡಾ ನ್ಯಾಯಾಲಯ ರಷ್ಯಾದ ಯುವ ಅಥ್ಲೀಟ್‌ ಉದ್ದೀಪನ ಮದ್ದು ಸೇವಿಸಿ ಸಿಕ್ಕಿದ್ದಾರೆ ಆದರೆ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲವಾದ ಕಾರಣಕ್ಕೆ ಅವರನ್ನು ಅಮಾನತು ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿಕೆ ನೀಡಿದೆ, ಈ ಹಿನ್ನಲೆಯಿಂದಾಗಿ ರಷ್ಯಾದ ಯುವ ಅಥ್ಲೀಟ್‌ ಗೆ ವೇಲಿವಾ ಸ್ಪರ್ಧೆಗೆ ಅನುಮತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ 15 ವರ್ಷದ ಅಥ್ಲೀಟ್‌ ಭಾಗವಹಿಸಬಹುದು ಎಂದು ಕೋರ್ಟ್ ಆದೇಶ ನೀಡಿದೆ.