Job Description: * ಪ್ರಸ್ತುತ ಇಲ್ಕರ್‌ ಐಸಿ ಅವರು ಟಾಟಾ ಸನ್ಸ್‌ ಸಂಸ್ಥೆಯು ಏರ್‌ ಇಂಡಿಯಾಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ(MD) ನೇಮಕವಾಗಿದ್ದಾರೆ. * ಇಲ್ಕರ್‌ ಐಸಿ ಅವರು ಈ ಹಿಂದೆ ಟರ್ಕಿಷ್‌ ಏರ್‌ಲೈನ್‌ನ ಮುಖ್ಯಸ್ಥರಾಗಿದ್ದರು, ಇದೀಗ ಇವರು ಏಪ್ರಿಲ್.1 ರಂದು ಟಾಟಾ ಸನ್ಸ್‌ ಸಂಸ್ಥೆಯು ಏರ್‌ ಇಂಡಿಯಾದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಇವರು ಟರ್ಕಿಯ ಇಸ್ತಾನ್‌ಬುಲ್‌ ಮೂಲದವರಾಗಿದ್ದಾರೆ, ರಾಜ್ಯಶಾಸ್ತ್ರ ಹಾಗೂ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಯಲ್ಲಿ ಅಂತಾರಾಷ್ಟ್ರೀಯ ಸಂಬಂಧ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದುಕೊಂಡಿದ್ದಾರೆ. * ಪ್ರಸ್ತುತ ಇಲ್ಕರ್‌ ಐಸಿ ಅವರು ರಿಪಬ್ಲಿಕ್‌ ಆಫ್ ಟರ್ಕಿಯ ಹೂಡಿಕೆ ಹಾಗೂ ಬೆಂಬಲದ ಜೊತೆಗೆ ಉತ್ತೇಜನ ಏಜೆನ್ಸಿಯ ಅಧ್ಯಕ್ಷರಾಗಿದ್ದಾರೆ, ಹಾಗೂ ಇವರು ಹೂಡಿಕೆ ಉತ್ತೇಜನ ಸಂಸ್ಥೆಗಳ ವಿಶ್ವ ಒಕ್ಕೂಟಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. * ಏರ್‌ ಇಂಡಿಯಾ ಮುಖ್ಯಸ್ಥ ಎನ್‌.ಚಂದ್ರಶೇಖರನ್‌ ಅವರು ಇಲ್ಕರ್‌ ಐಸಿ ಅವರನ್ನು ಟಾಟಾ ಸನ್ಸ್‌ ಸಂಸ್ಥೆಗೆ ಸ್ವಾಗತಿಸಿದರು, ಪ್ರಸ್ತುತ 'ಇಲ್ಕರ್‌' ಅವರು ವಿಮಾನಯಾನ ಉದ್ಯಮದ ನಾಯಕರಾಗಿದ್ದಾರೆ, ಇವರು ಟರ್ಕಿಯ ಏರ್‌ಲೈನ್‌ ಯಶಸ್ಸಿಯಾಗಲು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಇದೀಗ ಇವರು ಏರ್‌ ಇಂಡಿಯಾವನ್ನು ಯಶಸ್ಸಿಹಾದಿಯತ್ತ ಒಯ್ಯಲಿದ್ದಾರೆ ಎಂದು ಎನ್‌.ಚಂದ್ರಶೇಖರನ್‌ ಅವರು ಅಭಿಪ್ರಾಯಪಟ್ಟಿದ್ದಾರೆ. * ಮೆಹ್ಮೆತ್ ಇಲ್ಕರ್ ಐಸಿ ಇವರೊಬ್ಬ ಒಬ್ಬ ಟರ್ಕಿಷ್ ಉದ್ಯಮಿ. ಇವರು 2015 ರಿಂದ 2022 ರವರೆಗೆ ಟರ್ಕಿಶ್ ಏರ್‌ಲೈನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇದೀಗ 2022 ಏಪ್ರಿಲ್ ನಿಂದ ಏರ್ ಇಂಡಿಯಾದ ನೂತನ CEO ಮತ್ತು MD ಆಗಿ ಕಾರ್ಯ ನಿರ್ವಹಿಸಲಿದ್ದಾರೆ. * ಇಲ್ಕರ್ ಐಸಿ 2011 ರ ಜನವರಿಯಲ್ಲಿ ಟರ್ಕಿಯ ಪ್ರಧಾನ ಸಚಿವಾಲಯದ ಹೂಡಿಕೆ ಬೆಂಬಲ ಮತ್ತು ಪ್ರಚಾರ ಏಜೆನ್ಸಿಯ ಅಧ್ಯಕ್ಷರಾಗಿ ನೇಮಕಗೊಡಿದ್ದರು. ಮತ್ತೇ ಇವರನ್ನು 2013 ರ ಫೆಬ್ರವರಿಯಲ್ಲಿ ವರ್ಲ್ಡ್ ಅಸೋಸಿಯೇಶನ್ ಆಫ್ ಇನ್ವೆಸ್ಟ್‌ಮೆಂಟ್ ಪ್ರಮೋಷನ್ ಏಜೆನ್ಸಿಗಳ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು, ಮತ್ತೇ ನಂತರ 2014 ರ ಜನವರಿಯಲ್ಲಿ ಇವರನ್ನು ಅಧ್ಯಕ್ಷರಾಗಿ ನೇಮಿಸಲಾಯಿತು. ಇವರು 2022 ರ ಜನವರಿ. 26 ರಂದು ಟರ್ಕಿಶ್ ಏರ್‌ಲೈನ್ಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇದೀಗ ಇವರ ಈ ಸ್ಥಾನಕ್ಕೆ ಅಹ್ಮತ್ ಬೋಲಾಟ್ ಅವರನ್ನು ನೇಮಿಸಲಾಗಿದೆ.