Job Description: * ಸ್ಪೀಡ್‌ ಸ್ಕೇಟಿಂಗ್‌ನಲ್ಲಿ ಈ ಮೊದಲು ತಾವೇ ನಿರ್ಮಿಸಿರುವ ವಿಶ್ವದಾಖಲೆ ನಿರ್ಮಿಸಿದ ಸ್ವೀಡನ್‌ ದೇಶದ ನಿಲ್ಸ್ ವ್ಯಾನ್ ಡರ್‌ ಪೋಯಲ್‌ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 2 ನೇ ಚಿನ್ನದ ಪದಕ ಜಯಿಸಿಕೊಂಡಿದ್ದಾರೆ. * ಸ್ವೀಡನ್‌ ದೇಶದ ನಿಲ್ಸ್ ವ್ಯಾನ್ ಡರ್‌ ಪೋಯಲ್‌ ಅವರು 10 ಸಾವಿರ ಮೀ. ವಿಭಾಗದಲ್ಲಿ ಸ್ಪರ್ಧಿಸಿ ಕೇವಲ 12 ನಿಮಿಷ 30.74 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿದ್ದಾರೆ. ಈ ಹಿಂದಿನ ವರ್ಷದಲ್ಲಿ ನೆದರ್ಲೆಂಡ್ಸ್‌ನಲ್ಲಿ ಕೇವಲ 12 ನಿಮಿಷ 32.95 ನಿಮಿಷಗಳಲ್ಲಿ ಗುರಿಯನ್ನು ತಲುಪಿದ್ದಾರೆ. * ಸ್ವೀಡನ್‌ ದೇಶಕ್ಕೆ ಸುಮಾರು 34 ವರ್ಷಗಳ ಬಳಿ ಈ ವಿಭಾಗದಲ್ಲಿ ಮೊದಲ ಪದಕ ಲಭಿಸಿದೆ. ಈ ಹಿಂದೆ 1988 ರ ಕ್ಯಾಲ್ಗರಿ ಒಲಿಂಪಿಕ್ಸ್‌ನಲ್ಲಿ ಥಾಮಸ್‌ ಗುಸ್ತಾಫ್ಸನ್‌ ಅವರು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. * ಸ್ಪೀಡ್‌ ಸ್ಕೇಟಿಂಗ್‌ನ ವಿಭಾಗದಲ್ಲಿ ನೆದರ್ಲೆಂಡ್ಸ್‌ನ ಪ್ಯಾಟ್ರಿಕ್ ರೊಯಿಸ್ಟ್ ಅವರು ಬೆಳ್ಳಿ ಪದಕವನ್ನು ಜಯಿಸಿಕೊಂಡಿದ್ದಾರೆ, ಹಾಗೂ ಇಟಲಿಯ ಡೇವಿಡ್‌ ಗಿಯಟ್ಟೊ ಅವರು ಕಂಚಿನ ಪದಕವನ್ನು ಗೆದಿದ್ದಾರೆ. ಇದೇ ಕ್ರೀಡಾ ಕೂಟದ 5000 ಮೀ. ವಿಭಾಗದಲ್ಲಿ ನಿಲ್ಸ್ ವ್ಯಾನ್ ಡರ್‌ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಫಿನ್ಲೆಂಡ್‌ನ ಇವೊ ನಿಸ್ಕಾನೆನ್‌ ಅವರು ಪುರುಷರ 15 ಕಿ.ಮೀ. ಕ್ಲಾಸಿಕ್ ಸ್ಕೀಯಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದಿದ್ದಾರೆ. ಈ ಹಿಂದೆ 2018 ರಲ್ಲಿ ಪ್ಯಾಯೊಂಚಾಂಗ್‌ ಕ್ರೀಡಾಕೂಟದಲ್ಲೂ ಅವರು ಅಗ್ರಸ್ಥಾನವನ್ನು ಪಡೆದುಕೊಂಡಿದ್ದರು. ಹಾಗೂ ರಷ್ಯಾ ಒಲಿಂಪಿಕ್ಸ್ ಸಮಿತಿಯ ಅಲೆಕ್ಸಾಂಡರ್‌ ಬೊಲ್ಷುನೊವ್‌ ಬೆಳ್ಳಿ ಪದಕ ಹಾಗೂ ನಾರ್ವೆಯ ಜೋಹಾನ್ನಸ್‌ ಕ್ಲಾಬೊ ಅವರು ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ.