Job Description: * ಜಮ್ಮು-ಕಾಶ್ಮೀರದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಓಯೊ ಜೊತೆ ಜಮ್ಮು-ಕಾಶ್ಮೀರ ಸರ್ಕಾರವು ಸಹಯೋಗಕ್ಕೆ ಮುಂದಾಗಿದೆ. ಅಲ್ಲಿನ ಸರ್ಕಾರದ ಇದರ ಜೊತೆ ಜೊತೆಗೆ "ಮಿಶನ್ ಯೂತ್" ಕಾರ್ಯಕ್ರಮದ ಮೂಲಕ ಜಮ್ಮು-ಕಾಶ್ಮೀರದಲ್ಲಿನ 75 ಹಳ್ಳಿಗಳಲ್ಲಿ ಹೋಮ್ ಸ್ಟೇ ಆರಂಭಿಸಲಿದೆ, ಹಾಗೂ ಸ್ವ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ವೃದ್ಧಿಸಲು ಓಯೊ ಹಾಗೂ ಜಮ್ಮು ಸರ್ಕಾರ ಮುಂದಾಗಿದೆ. * ಪ್ರಸ್ತುತ ಈ ಯೋಜನೆಯನ್ನು ಜಮ್ಮು-ಕಾಶ್ಮೀರ ಸರ್ಕಾರವು ಜಾರಿಗೆ ತಂದಿದೆ ಎಂದು ಜಮ್ಮು-ಕಾಶ್ಮೀರದ ಲೆ. ಗವರ್ನರ್ ಮನೋಜ್ ಸಿನ್ಹಾ ಅವರು ತಿಳಿಸಿದ್ದಾರೆ. ಹಾಗೂ ಹೋಮ್ ಸ್ಟೇ ಪ್ರಾರಂಭಿಸುವ ಯುವಕರಿಗೆ 50,000 ರೂ. ವಿಶೇಷ ಸಹಾಯಧನವನ್ನು ನೀಡುವದಾಗಿ ಲೆ. ಗವರ್ನರ್ ಅವರು ಘೋಷಣೆ ಮಾಡಿದ್ದಾರೆ. * OYO ಕೊಠಡಿಗಳನ್ನು ಓಯೋ ಹೋಟೆಲ್‌ಗಳು ಹಾಗೂ ಮನೆಗಳು ಎಂದು ಕರೆಯುತ್ತಾರೆ, ಇದೊಂದು ಭಾರತೀಯ ಬಹುರಾಷ್ಟ್ರೀಯ OTA, ಮನೆಗಳು ಹಾಗೂ ವಾಸಿಸುವ ಸ್ಥಳವಾಗಿದೆ. ಇದನ್ನು ರಿತೇಶ್ ಅಗರ್ವಾಲ್ ಅವರು 2012 ರಲ್ಲಿ ಸ್ಥಾಪನೆ ಮಾಡಿದ್ದಾರೆ. ಈ ಮೊದಲು OYO ಪ್ರಾರಂಭದಲ್ಲಿ ಬಜೆಟ್ ಹೋಟೆಲ್‌ಗಳನ್ನು ಹೊಂದಿತ್ತು. ಭಾರತ, ಮಲೇಷ್ಯಾ, UAE, ನೇಪಾಳ, ಚೀನಾ, ಬ್ರೆಜಿಲ್, ಮೆಕ್ಸಿಕೋ, UK, ಫಿಲಿಪೈನ್ಸ್, ಇನ್ನು 80 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸಾವಿರಾರು ಹೋಟೆಲ್‌ಗಳು, ರಜೆಯ ಮನೆಗಳು ಹಾಗೂ ಲಕ್ಷಾಂತರ ಕೊಠಡಿಗಳ ಜೊತೆಗೆ ಜಾಗತಿಕವಾಗಿ ಆರಂಭಿಸಿದೆ. ಜಪಾನ್, ಸೌದಿ ಅರೇಬಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ಯುನೈಟೆಡ್ ಸ್ಟೇಟ್ಸ್ ಹಾಗೂ ಇನ್ನು ಅನೇಕ ರಾಷ್ತ್ರಗಳಲ್ಲಿ ತನ್ನ ನೆಟ್ ವರ್ಕ್ ನ್ನು ವಿಸ್ತರಿಸಿದೆ. * OYO ಜಾಗತಿಕವಾಗಿ 2019 ರಲ್ಲಿ ಸುಮಾರು 17,000 ಉದ್ಯೋಗಿಗಳನ್ನು ಹೊಂದಿತ್ತು, ಅದರಲ್ಲಿ ಸರಿಸುಮಾರು 8000 ಉದ್ಯೋಗಿಗಳು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿದೆ. OYO ಹೋಟೆಲ್ಸ್ & ಹೋಮ್ಸ್ ಒಂದು ಪೂರ್ಣ ಪ್ರಮಾಣದ ಹೋಟೆಲ್ ಸರಪಳಿಯಾಗಿದೆ. 2019 ರಲ್ಲಿ ಓಯೋ ಭಾರತದಾದ್ಯಂತ ಆತಿಥ್ಯ ಉತ್ಸಾಹಿಗಳಿಗಾಗಿ 26 ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿದೆ. * 2021 ರ ಅಕ್ಟೋಬರ್ ನಲ್ಲಿ OYO ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿ ಪ್ಯಾರಾಲಿಂಪಿಯನ್ ದೀಪಾ ಮಲಿಕ್ ರನ್ನು ನೇಮಕ ಮಾಡಿದೆ. * 2021 ರ ಡಿಸೆಂಬರ್ ನಲ್ಲಿ SBI ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಅವರನ್ನು ತನ್ನ ಕಾರ್ಯತಂತ್ರದ ಗುಂಪಿನ ಸಲಹೆಗಾರರನ್ನಾಗಿ ನೇಮಕ ಮಾಡಿದೆ.