Job Description: * ಇತ್ತೀಚಿಗೆ ನಡೆದ ಐತಿಹಾಸಿಕ ವಿಶ್ವ ದಾಖಲೆಯ ಪುಸ್ತಕದಲ್ಲಿ 10 ಸಾವಿರ ಅಡಿ ಎತ್ತರದ ಅಟಲ್ ಸುರಂಗ ಮಾರ್ಗವನ್ನು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎಂದು ಪ್ರಮಾಣೀಕರಿಸಲಾಗಿದೆ ಕೇಂದ್ರ ರಕ್ಷಣಾ ಸಚಿವಾಲಯ ವರದಿ ಮಾಡಿದೆ. * ಪ್ರಸ್ತುತ ಗಡಿ ರಸ್ತೆಗಳ ಸಂಸ್ಥೆಯ ಮಹಾನಿರ್ದೇಶಕ ಲೆಫ್ಟಿನಂಟ್ ಜನರಲ್ ರಾಜೀವ್ ಚೌಧರಿ ಅವರು ಮನಾಲಿಯನ್ನು ಲಾಹೌಲ್ - ಸ್ಪಿತಿಗೆ ಸಂಪರ್ಕಿಸುವ ಈ ಹೆದ್ದಾರಿಯನ್ನು ನಿರ್ಮಿಸಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * 2020 ರ ಅಕ್ಟೋಬರ್ '3' ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಈ ಹೆದ್ದಾರಿಯು ಮನಾಲಿ - ಲೇಹ್ ನಲ್ಲಿದೆ, ಈ ಅಟಲ್ ಸುರಂಗವು ರೋಹ್ಡಾಂಟ್ ಪಾಸ್ ಅಡಿಯಲ್ಲಿ ಸಾಗುವ 9.02 ಕಿ. ಮೀ. ಸುರಂಗ ಮಾರ್ಗವಾಗಿದೆ. ಈ ಸುರಂಗ ಮಾರ್ಗವನ್ನು ಘನೀಕರಿಸುವ ತಾಪಮಾನದಂತಹ ಸವಾಲಿನ ಪರಿಸ್ಥಿತಿಯ ಮಧ್ಯೆಯೇ ನಿರ್ಮಾಣ ಮಾಡಲಾಗಿದೆ. * ಈ ಅಟಲ್ ಟನಲ್ ಸುರಂಗ ನಿರ್ಮಾಣದ ಪ್ರಯುಕ್ತ ಚಳಿಗಾಲದ ಅವಧಿಯಲ್ಲಿ ಹೆದ್ದಾರಿಯನ್ನು '6' ತಿಂಗಳುಗಳವರೆಗೆ ಮುಚ್ಚಲಾಗಿತ್ತು. ಈ ಕಾರಣದಿಂದ ಲಾಹೌಲ್ ಮತ್ತು ಸ್ಪಿತಿ '6' ತಿಂಗಳುಗಳ ಕಾಲ ಭಾರತದ ಜೊತೆಗೆ ಸಂಪರ್ಕವನ್ನು ಕಡಿದುಕೊಂಡಿದೆ. * ಅಟಲ್ ಸುರಂಗ ಇದನ್ನು ರೋಹ್ಟಾಂಗ್ ಟನಲ್ ಎಂದು ಕರೆಯುತ್ತಾರೆ. ಭಾರತದ ಹಿಮಾಚಲ ಪ್ರದೇಶದ ಲೇಹ್-ಮನಾಲಿ ಹೆದ್ದಾರಿಯಲ್ಲಿ ಹಿಮಾಲಯದ ಪೂರ್ವ ಪೀರ್ ಪಂಜಾಲ್ ಶ್ರೇಣಿಯಲ್ಲಿ ರೋಹ್ಟಾಂಗ್ ಪಾಸ್ ಅಡಿಯಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗಿದೆ. ಇದು 9.02 ಕಿಮೀ ಉದ್ದದಲ್ಲಿ, 10,000 ಅಡಿ ಗಿಂತ ಹೆಚ್ಚಿನ ಉದ್ದದ ಹೆದ್ದಾರಿ ಏಕ-ಟ್ಯೂಬ್ ಸುರಂಗ ಮಾರ್ಗ ಇದಾಗಿದೆ. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಈ ಸುರಂಗ ಮಾರ್ಗಕ್ಕೆ ಇಡಲಾಗಿದೆ. * ಈ ಸುರಂಗ ಮಾರ್ಗವು ಲೇಹ್‌ಗೆ ಹೋಗುವ ಮಾರ್ಗದಲ್ಲಿ ಮನಾಲಿ ಹಾಗೂ ಕೀಲಾಂಗ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಈ ಸುರಂಗ ಮಾರ್ಗವು ರಸ್ತೆ ತಡೆಗಳು, ಹಿಮಕುಸಿತಗಳು ಹಾಗೂ ಸಂಚಾರ ದಟ್ಟಣೆಗಳಿಗೆ ಒಳಗಾಗುವ ಹೆಚ್ಚಿನ ಸೈಟ್‌ಗಳನ್ನು ಬೈಪಾಸ್ ಮಾಡುತ್ತದೆ.