Job Description: * ಇತ್ತೀಚಿಗೆ ವಿಜ್ಞಾನಿಗಳು ಅರುಣಾಚಲ ಪ್ರದೇಶದಲ್ಲಿ ಬಿಳಿ ಕೆನ್ನೆಯ ಕೋತಿ (ಮಕಾಕ್)ಯನ್ನು ಕಂಡಿಹಿಡಿದಿದ್ದಾರೆ. ಇದೀಗ ಇದು ಭಾರತದ ಸಸ್ತನಿ ಪಟ್ಟಿಗೆ ಹೊಸ ಜಾತಿಯನ್ನು ಸೇರಿಸಿದೆ. ಬಿಳಿ ಕೆನ್ನೆಯ ಮಕಾಕ್(ಕೋತಿ)ಯನ್ನು ಮೊದಲು ಆಗ್ನೇಯ ಟಿಬೆಟ್‌ನಲ್ಲಿ ಪತ್ತೆಹಚ್ಚಲಾಗಿದೆ. * ಈ ಕೋತಿಗಳು ಇತರ ಕೋತಿಗಳಿಗಿಂತ ಮುಖ್ಯವಾಗಿ ಬಿಳಿ ಕೆನ್ನೆಗಳಿಂದ ವಿಭಿನ್ನವಾಗಿವೆ. ಹಾಗೂ ಅವು ಉದ್ದವಾದ ಬಾಲ, ಕುತ್ತಿಗೆಯ ಪ್ರದೇಶದಲ್ಲಿ ಉದ್ದ ಹಾಗೂ ದಪ್ಪ ಕೂದಲುಗಳಿಂದ ಕೂಡಿವೆ. ಇನ್ನೂ ಈ ಕೋಟಿಯನ್ನು ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಸೇರಿಸಲಾಗಿಲ್ಲ. * ಪ್ರಸ್ತುತ ಭಾರತದಲ್ಲಿ ಅರುಣಾಚಲ ಬಿಳಿ ಕೆನ್ನೆಯ ಕೋತಿಗಳು, ಅಸ್ಸಾಮಿ ಕೋತಿ (ಮಕಾಕ್), ರೀಸಸ್ ಕೋತಿ (ಮಕಾಕ್)ಗಳಿವೆ. * ಈ ಕೋತಿಗಳು ಉಷ್ಣವಲಯದ ಅರಣ್ಯ, ನಿತ್ಯಹರಿದ್ವರ್ಣ ಅಗಲವಾದ ಎಲೆಗಳ ಕಾಡು, ಮಿಶ್ರ ವಿಶಾಲ ಎಲೆಗಳ ಕೋನಿಫರ್ ಕಾಡುಗಳಲ್ಲಿ ವಾಸಿಸುತ್ತವೆ. ಈ ಪ್ರದೇಶಗಳು ಸಾಮಾನ್ಯವಾಗಿ 1395 ಮೀಟರ್ ನಿಂದ 2420 ಮೀ. ಎತ್ತರದಲ್ಲಿವೆ. ಇಲ್ಲಿ ಬಹು-ಪುರುಷ ಹಾಗೂ ಬಹು-ಹೆಣ್ಣು ಗುಂಪಿನಲ್ಲಿ ವಾಸಿಸುತ್ತಾರೆ. * ಇದೀಗ ಭಾರತದಲ್ಲಿ ಒಟ್ಟು 438 ಸಸ್ತನಿಗಳ ಸಂಖ್ಯೆಗಳಿವೆ. * ಮಕಾಕ್‌ಗಳು ಹಳೆಯ ಪ್ರಪಂಚದ ಕೋತಿಗಳು. ಜಗತ್ತಿನಲ್ಲಿ 23 ಜಾತಿಯ ಮಕಾಕ್ಗಳಿವೆ(ಕೋತಿ). ಇವುಗಳು ಮುಖ್ಯವಾಗಿ ಏಷ್ಯಾ, ಉತ್ತರ ಆಫ್ರಿಕಾ, ಜಿಬ್ರಾಲ್ಟರ್‌ನಲ್ಲಿ ಕಾಣಸಿಗುತ್ತವೆ. ಇವುಗಳು ತಮ್ಮ ಆಹಾರಕ್ಕಾಗಿ ಎಲೆಗಳು, ಬೀಜಗಳು, ಹೂವುಗಳು ಮತ್ತು ಮರದ ತೊಗಟೆಗಳನ್ನು ತಿನ್ನುತ್ತವೆ. ಈ ಮಕಾಕ್‌ಗಳನ್ನು ಅತೀ ಹೆಚ್ಚಾಗಿ ಪ್ರಾಣಿಗಳ ಪರೀಕ್ಷೆಯಲ್ಲಿ ಬಳಕೆ ಮಾಡುತ್ತಾರೆ. ಅದರಲ್ಲಿಯೂ ನರವಿಜ್ಞಾನದಲ್ಲಿ ಬಳಕೆ ಮಾಡಲಾಗುತ್ತದೆ. ಈ ಮಕಾಕ್ಗಳು(ಕೋತಿ) 'ಹರ್ಪಿಸ್ ಬಿ' ವೈರಸ್ ನ ವಾಹಕಗಳಾಗಿವೆ. ಕೆಲ ಜಾತಿಯ ಕೋತಿಗಳು ಮನುಷ್ಯರಿಗೆ ತೊಂದರೆಯಾಗದಂತೆ ಬದುಕಲು ಕಲಿತುಕೊಂಡಿವೆ.