Job Description: * ಪ್ರಸ್ತುತ ನ್ಯಾಟೋ ಪಡೆಗಳು ಉಕ್ರೇನ್‌ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಿಳಿಸಿದ್ದಾರೆ. ಈ ಮಾಹಿತಿಯನ್ನು ರಷ್ಯಾ-ಫ್ರೆಂಚ್ ರಾಷ್ಟ್ರಗಳ ಚರ್ಚೆಯ ನಂತರ ಸುದ್ದಿಗೋಷ್ಟಿಯ ಜೊತೆ ವ್ಲಾಡಿಮಿರ್ ಪುಟಿನ್ ಅವರು ಮಾತಾಡಿದರು, ಇದೀಗ ಉಕ್ರೇನ್ಗೆ ನ್ಯಾಟೋದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ನ್ಯಾಟೋ ಮಿಲಿಟರಿ ತಜ್ಞರನ್ನು ಉಕ್ರೇನ್'ಗೆ ರವಾನಿಸಿದೆ ಎಂದು ಆರೋಪ ಮಾಡಿದ್ದಾರೆ. * ಇದೀಗ ಉಕ್ರೇನ್ ಸೈನ್ಯದ ಆಧುನೀಕರಣಕ್ಕೆ ನ್ಯಾಟೋ ಪ್ರಯತ್ನ ಪಡುತ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜೊತೆಗೆ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಯೂರೋಪ್ ಹಾಗೂ ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ನಾವಿಬ್ಬರು ಮಾತುಕತೆಯನ್ನು ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಡೊನ್ಬಾಸ್ನಲ್ಲಿನ ಸಮಸ್ಯೆಯ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉಕ್ರೇನ್ ರಾಷ್ಟ್ರವು ನಿರಾಕರಿಸಿದೆ. ಹಾಗೂ ಮಿನ್ಸ್ಕ್ ಒಪ್ಪಂದದ ನಿಯಮಗಳನ್ನು ಉಕ್ರೇನ್ ಪಾಲಿಸುತ್ತಿಲ್ಲ, ಇದೀಗ ಉಕ್ರೇನ್ ಈ ಎಲ್ಲ ಒಪ್ಪಂದಗಳನ್ನು ರದ್ದು ಮಾಡಲು ಸಿದ್ಧವಾಗಿದೆ ಎಂದು ಪುಟಿನ್ ಅವರು ಆರೋಪಿಸಿದ್ದಾರೆ. * ಇದೀಗ ಅಮೆರಿಕದ ಗುಪ್ತಚರ ಪಡೆಗಳು ನೀಡಿರುವ ಮಾಹಿತಿಯ ಪ್ರಕಾರ ರಷ್ಯಾ ತನ್ನ ನೆರೆಯ ಉಕ್ರೇನ್‌ ಮೇಲೆ ದಾಳಿಯನ್ನು ನಡೆಸಲು ಸಿದ್ಧವಾಗಿದೆ, ಆ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ, ಹಾಗೂ ತನ್ನ ಸೇನೆಯ ಶೇ.70 ರಷ್ಟ ಪಡೆಯನ್ನು ರಷ್ಯಾ ಉಕ್ರೇನ್‌ ಗಡಿಯಲ್ಲಿ ನಿಯೋಜಿಸಿದೆ. ಇದೀಗ ರಷ್ಯಾ ದೇಶದ ಪ್ರತಿಯಾಗಿ ಅಮೆರಿಕ ರಾಷ್ಟ್ರವು 2000 ಸೈನಿಕರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ಕಳುಹಿಸಿದೆ. * ಸದ್ಯ ರಷ್ಯಾ ಸೇನೆ ಉಕ್ರೇನ್‌ ಗಡಿಯಲ್ಲಿ ಸುಮಾರು 1 ಲಕ್ಷದಷ್ಟು ಸೈನಿಕರು ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ. ಈಗಿನ ಪ್ರಕಾರ ದಾಳಿಗೆ ಅಗತ್ಯವಾದ ಸೇನೆಯ ಪೈಕಿ ಶೆ.70ರಷ್ಟನ್ನು ರಷ್ಯಾ ಗಡಿಯಲ್ಲಿ ಸಿದ್ಧಪಡಿಸಿದೆ. ಇದೀಗ ಈ ಪ್ರದೇಶದಲ್ಲಿ ಯುದ್ಧ ನಡೆದರೆ ಕನಿಷ್ಠ ಪಕ್ಷ 50 ಸಾವಿರ ನಾಗರಿಕರು ಸಾವನ್ನಪ್ಪಲಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿದೆ. * ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಈ ಯುದ್ಧದ ವೇಳೆ ರಷ್ಯಾದ ಮೇಲೆ ಪ್ರತಿದಾಳಿ ನಡೆಸಲು ಉಕ್ರೇನ್'ಗೆ ಸೇನೆಯನ್ನು ಕಳುಹಿಸುವುದಿಲ್ಲ ಎಂದು ತಿಳಿಸದೆ, ಆದರೂ ನ್ಯಾಟೋ ಪಡೆಯ ನೆರವಿಗೆ 2000 ಯೋಧರನ್ನು ಯುರೋಪ್‌ಗೆ ರವಾನಿಸಿದೆ. * ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳು ಸೋವಿಯತ್ ಒಕ್ಕೂಟದ ಭಾಗಗಳಾಗಿವೆ, ಸದ್ಯ ಈ ಎರಡು ಪ್ರದೇಶಗಳ ಗಡಿಯುದ್ದಕ್ಕೂ ಲಕ್ಷಾಂತರ ಸೈನಿಕರನ್ನು ನಿಯೋಜಿಸಿವೆ. * * ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳ ಬಿಕ್ಕಟ್ಟು : - ಇದೀಗ ನ್ಯಾಟೋ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಹಾಗೂ ಮಿಲಿಟಿ ನೆರವು ನೀಡುತ್ತಿರುವುದನ್ನು ರಷ್ಯಾ ತೀವ್ರವಾಗಿ ವಿರೋಧಿಸುತ್ತಿದೆ - ರಷ್ಯಾ ಉಕ್ರೇನ್‌ಗೆ ನ್ಯಾಟೋದ ಪಾಲುದಾರ ಸ್ಥಾನಮಾನ ಪ್ರಸ್ತಾಪಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ. - ಸದ್ಯ ಸೋವಿಯತ್‌ ಒಕ್ಕೂಟದ ಭಾಗವಾಗಿರುವ ಉಕ್ರೇನ್‌ ಇದೀಗ ಯುರೋಪ್‌ ಒಕ್ಕೂಟದತ್ತ ಹೆಚ್ಚು ಬೆಳವಣಿಗೆಗಳನ್ನು ಬೆಳೆಸುತ್ತಿದೆ ಇದಕ್ಕೂ ರಷ್ಯಾ ಆಕ್ರೋಶವನ್ನು ವ್ಯಕ್ತಪಡಿಸಿದೆ.