Job Description: * ಇತ್ತೀಚಿಗೆ ಅರುಣಾಚಲ ಪ್ರದೇಶದಲ್ಲಿ ಸಂಭವಿಸಿರುವ ಹಿಮಪಾತದಲ್ಲಿ ಭಾರತೀಯ ಸೇನೆಯ '7' ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಈ ಸೇನಾ ಸಿಬ್ಬಂದಿಗಳು ಗಸ್ತು ತಂಡದ ಭಾಗವಾಗಿದ್ದರು. ಇದೀಗ ಭಾರತೀಯ ಸೇನೆಯು ಅವರಿಗಾಗಿ ಹುಡುಕಾಟದ ಕಾರ್ಯಾಚರಣೆಯನ್ನು ಆರಂಭಿಸಿದೆ. * ಈ ಹಿಂದೆ ಇದೇ ರೀತಿಯಲ್ಲಿ ಅದೆಷ್ಟೋ ದುರ್ಘಟನೆಗಳು ಸಂಭವಿಸಿವೆ. ಇತ್ತೀಚಿಗೆ 2020 ರ ಮೇ ನಲ್ಲಿ ಸಂಭವಿಸಿರುವ ಹಿಮ ತೆರವು ಪಡೆಯ ಇಬ್ಬರು ಸೇನಾ ಸಿಬ್ಬಂದಿ ಸಿಕ್ಕಿಂನಲ್ಲಿ ಜರುಗಿದ ಹಿಮಪಾತದಲ್ಲಿ ಸಾವನ್ನಪ್ಪಿದರು, ಈ ಹಿಮಕುಸಿತದಿಂದಾಗಿ ಭಾರತೀಯ ಸೇನೆಯು ಅನೇಕ ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿತು. * ಈ ಹಿಂದೆ 2019 ರಲ್ಲಿ ಸಿಯಾಚಿನ್ ಹಿಮನದಿಯಲ್ಲಿ ಹಿಮಕುಸಿತದಿಂದ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ '6' ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಈ ಸಿಯಾಚಿನ್ ಹಿಮನದಿ ಸಾಲ್ಟೊರೊ ಪರ್ವತ, ಲಡಾಖ್ ಹಾಗೂ ಚೀನಾ ಗಡಿಯ ಕೆಲವು ಪ್ರದೇಶಗಳು ನಿಷೇಧಿತ ಭೂಪ್ರದೇಶಗಳಾಗಿವೆ. 1984 ರಿಂದ ಇಲ್ಲಿಯವರೆಗೆ 1000 ಸೈನಿಕರು ಹಾಗೂ 35 ಅಧಿಕಾರಿಗಳು ಸಿಯಾಚಿನ್ ಹಿಮನದಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. * ಪಾಕಿಸ್ತಾನ ಹಾಗೂ ಚೀನಾ ದೇಶಗಳು ತಮ್ಮ ಸೇನೆಯನ್ನು ಆ ಪ್ರದೇಶದಲ್ಲಿ ಜಮಾ ಮಾಡುತ್ತಿದೆ. ಇತ್ತೀಚೆಗೆ LOC ಹಾಗೂ LAC ಉದ್ದಕ್ಕೂ ಬೆದರಿಕೆಗಳು ಹೆಚ್ಚಾಗಿವೆ. ಈ ಬೆದರಿಕೆಗಳನ್ನು ವಿರುದ್ಧ ಹೋರಾಡಲು ಭಾರತೀಯ ಸೇನೆಯು ಪ್ಯಾಂಗೊಂಗ್ ತ್ಸೋ ಹಾಗೂ ಆರ್ಟಿಕಲ್ 370 ರದ್ದತಿಯ ನಂತರ ಈ ಪ್ರದೇಶದಲ್ಲಿ ಹೆಚ್ಚಾಗಿ ಗಸ್ತು ತಿರುಗುತ್ತಿದೆ. * ಆ ಪ್ರದೇಶಗಳಲ್ಲಿ ಭಾರತೀಯ ಸೈನಿಕರು ಎದುರಿಸುತ್ತಿರುವ ಸವಾಲುಗಳೆಂದರೆ ಸೀಮಿತ ರಸ್ತೆ ಮೂಲಸೌಕರ್ಯ, ಹೆಚ್ಚಿನ ಗಾಯಗಳ ಸಾಧ್ಯತೆ, ಕುಡಿಯುವ ನೀರಿನ ಕೊರತೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಶೀತ ಸಂಬಂಧಿತ ಕಾಯಿಲೆಗಳು, ಹಿಮಕುಸಿತಗಳು ಸಂಭವಿಸುತ್ತವೆ. ಇದೀಗ ಈ ಪ್ರದೇಶದಲ್ಲಿ ತಾಪಮಾನವು -5 ಡಿಗ್ರಿ ಸೆಲ್ಸಿಯಸ್‌ ಆಗಿರುತ್ತದೆ. ಈ ವಾತಾವರಣದಿಂದ ಹೈಪೋಥರ್ಮಿಯಾ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. * ಈ ಪ್ರದೇಶದಲ್ಲಿ ಆಮ್ಲಜನಕದ ಕುಸಿತ. ಈ ಪರಿಸ್ಥಿತಿಗಳಲ್ಲಿ ಸೇನಾ ಪಡೆಗಳು ಆ ಪ್ರದೇಶದಲ್ಲಿ ಬದುಕಲು 14 ದಿನಗಳ ಕಾಲ ಮೂರು ಹಂತದ ತರಬೇತಿಯನ್ನು ಪಡೆಯುತ್ತವೆ. ಮೊದಲನೇ ಹಂತದಲ್ಲಿ 12,000 ಅಡಿಗಳಲ್ಲಿ '6' ದಿನಗಳ ತರಬೇತಿ, ನಂತರ 15,000 ಅಡಿಗಳಲ್ಲಿ '4' ದಿನಗಳ ತರಬೇತಿ ಪಡೆಯುತ್ತವೆ, ಹಾಗೂ ಇದಕ್ಕಿಂತ ಹೆಚ್ಚಿನ ಎತ್ತರದಲ್ಲಿ '4' ದಿನಗಳ ತರಬೇತಿಯನ್ನು ಪಡೆದುಕೊಳ್ಳುತ್ತವೆ.