Job Description: * ಪ್ರಸ್ತುತ ವಿದೇಶಾಂಗ ಸಚಿವರಾಗಿರುವ ಎಸ್‌.ಜೈಶಂಕರ್‌ ಅವರು ಇದೇ ಫೆಬ್ರುವರಿ.10 ರಿಂದ 15 ರ ವರೆಗೆ ಆಸ್ಟ್ರೇಲಿಯಾ ಹಾಗೂ ಫಿಲಿಪ್ಪೀನ್ಸ್‌ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಜೈಶಂಕರ್‌ ಅವರು ವಿದೇಶಾಂಗ ಸಚಿವರಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ. * ಫೆಬ್ರುವರಿ. 10 ರಿಂದ 13 ರವರೆಗೆ ಆಸ್ಟ್ರೇಲಿಯಾ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಹಾಗೂ ಫೆಬ್ರುವರಿ. 13 ರಿಂದ 15 ರವರೆಗೆ ಫಿಲಿಪ್ಪೀನ್ಸ್‌ ರಾಷ್ಟ್ರಕ್ಕೆ ಪ್ರಯಾಣವನ್ನು ಬೆಳೆಸಲಿದ್ದಾರೆ. ಇತ್ತೀಚಿಗೆ ಫಿಲಿಪ್ಪೀನ್ಸ್‌ ರಾಷ್ಟ್ರವು ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಮೂರು ಬ್ಯಾಟರಿಗಳನ್ನು ಖರೀದಿಸಲು 375 ದಶಲಕ್ಷ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಿದೆ. * ಜೈಶಂಕರ್‌ ಅವರು ಇದೇ ಫೆಬ್ರವರಿ. 11 ರಂದು ಮೆಲ್ಬರ್ನ್‌ನಲ್ಲಿ ನಡೆಯಲಿರುವ 4 ನೇ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಆಸ್ಟ್ರೇಲಿಯಾ, ಜಪಾನ್ ಹಾಗೂ ಅಮೆರಿಕದ ವಿದೇಶಾಂಗ ಸಚಿವರ ಜೊತೆಗೆ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. * ಸುಬ್ರಹ್ಮಣ್ಯಂ ಜೈಶಂಕರ್ ಅವರು ರಾಜತಾಂತ್ರಿಕ ಹಾಗೂ ರಾಜಕಾರಣಿಯಾಗಿದ್ದಾರೆ, ಪ್ರಸ್ತುತ ಇವರು 2019 ರ ಮೇ. 31 ರಿಂದ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ ಹಾಗೂ ರಾಜ್ಯಸಭೆಯಲ್ಲಿ 2019 ರ ಜುಲೈ. 05 ರಿಂದ ಸಂಸತ್ ಸದಸ್ಯರಾಗಿದ್ದಾರೆ. ಇವರು ಗುಜರಾತ್ ನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಈ ಮೊದಲು 2015 ರ ಜನವರಿ ಯಿಂದ 2018 ರ ಜನವರಿ ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. * ಜೈಶಂಕರ್ ಅವರು 1977 ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿಕೊಂಡಿದ್ದಾರೆ. ಇವರು 2009-2013 ರ ನಡುವೆ ಚೀನಾ, ಹಾಗೂ 2014-2015 ರ ನಡುವೆ USA. ಮತ್ತು ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. * ಜೈಶಂಕರ್ ಅವರಿಗೆ 2019 ರಲ್ಲಿ ಭಾರತದ 4 ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2019 ರ ಮೇ. 30 ರಂದು ಅವರು 2 ನೇ ಮೋದಿ ಸಚಿವಾಲಯದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಇವರನ್ನು 2019 ರ ಮೇ. 31 ರಂದು ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ನೇಮಕ ಮಾಡಲಾಗಿದೆ.