Job Description: * ಪ್ರಸ್ತುತ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿರುವ ಮಾಹಿತಿಯ ಪ್ರಕಾರ 2018 ರಿಂದ 2020 ರ ನಡುವೆ ಭಾರತದಲ್ಲಿ ನಿರುದ್ಯೋಗ, ಹಾಗೂ ಸಾಲದ ಸಮಸ್ಯೆಗಳಿಂದ 25,000 ಕ್ಕೂ ಅಧಿಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. * ಈ 2018 ರಿಂದ 2020 ರ ನಡುವೆ 9,140 ಜನರು ನಿರುದ್ಯೋಗದಿಂದ, ಹಾಗೂ 16,091 ಜನರು ಸಾಲದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರವು ಇತ್ತೀಚಿಗೆ ಮೇಲ್ಮನೆಗೆ ವರದಿ ಮಾಡಿದೆ. * ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ವಿಷಯದ ಬಗ್ಗೆ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ನೀಡಿರುವ ಮಾಹಿತಿಯನ್ನು ಆಧರಿಸಿ ಅದರ ಅಂಕಿ ಅಂಶಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಇತ್ತೀಚಿಗೆ ತಿಳಿದು ಬಂದಿರುವ ಅಂಕಿ ಅಂಶಗಳ ಪ್ರಕಾರ, 2020 ರ ಸಾಂಕ್ರಾಮಿಕ ವರ್ಷದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ 3,548 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ 2018 ರಲ್ಲಿ 2,741 ಜನರು, ಮತ್ತೇ 2019 ರಲ್ಲಿ 2,851 ಜನರು ನಿರುದ್ಯೋಗದಿಂದ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. * * National Crime Records Bureau (NCRB) : ಇದು ಭಾರತೀಯ ದಂಡ ಸಂಹಿತೆ ಹಾಗೂ ವಿಶೇಷ ಮತ್ತು ಸ್ಥಳೀಯ ಕಾನೂನುಗಳು ಅಡಿಯಲ್ಲಿ ಅಪರಾಧದ ಡೇಟಾವನ್ನು ಸಂಗ್ರಹಿಸುವ ಹಾಗೂ ವಿವರಣೆ ನೀಡುವ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ಸರ್ಕಾರಿ ಸಂಸ್ಥೆಯಾಗಿದೆ. NCRBಯು ಇದು ತನ್ನ ಪ್ರಧಾನ ಕಛೇರಿಯನ್ನು ನವದೆಹಲಿಯಲ್ಲಿ ಹೊಂದಿದೆ. ಈ NCRB ಸಂಸ್ಥೆಯು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಭಾಗವಾಗಿದೆ. * ಪ್ರಸ್ತುತ NCRB ನ ನಿರ್ದೇಶಕ ರಾಂಫಾಲ್ ಪವಾರ್ ಆಗಿದ್ದಾರೆ. * NCRB ಯನ್ನು ಈ ಹಿಂದೆ 1986 ರಲ್ಲಿ ಸ್ಥಾಪನೆ ಮಾಡಲಾಗಿದೆ, ಇದು ಅಪರಾಧ ಹಾಗೂ ಅಪರಾಧಿಗಳ ಮಾಹಿತಿಯ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ, ಅಷ್ಟೇ ಅಲ್ಲದೇ ಅಪರಾಧಿಗಳ ಅಪರಾಧವನ್ನು ತನಿಖಾಧಿಕಾರಿಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ. ಈ ಸಂಸ್ಥೆಯನ್ನು 1985 ರ ಟಾಸ್ಕ್ ಫೋರ್ಸ್, ಹಾಗೂ 1977 ರ ರಾಷ್ಟ್ರೀಯ ಪೊಲೀಸ್ ಆಯೋಗದ ಶಿಫಾರಸಿನ ಮೇಲೆ ಸಮನ್ವಯ ನಿರ್ದೇಶನಾಲಯ ಹಾಗೂ ಪೊಲೀಸ್ ಕಂಪ್ಯೂಟರ್, CBI ಯ ಇಂಟರ್ ಸ್ಟೇಟ್ ಕ್ರಿಮಿನಲ್ ಡೇಟಾ ಶಾಖೆ ಮತ್ತು CBI ಕೇಂದ್ರ ಫಿಂಗರ್ ಪ್ರಿಂಟ್ ಬ್ಯೂರೋವನ್ನು ಇದರಲ್ಲಿ ವಿಲೀನಗೊಳಿಸುವ ಮೂಲಕ ಸ್ಥಾಪನೆ ಮಾಡಲಾಗಿದೆ.