Job Description: * ಪಶ್ಚಿಮ ರೈಲ್ವೆಯ ಮುಂಬೈ ಕೇಂದ್ರ ವಿಭಾಗವು ಸೂರತ್ ಪ್ರದೇಶದ ಚಲತಾನ್‌ನಿಂದ ಖರಗ್‌ಪುರ ವಿಭಾಗದ ಸಂಕ್ರೈಲ್‌ಗೆ ತನ್ನ '100 ನೇ ಜವಳಿ ರೈಲು' ನ್ನು ಲೋಡ್ ಮಾಡುವ ಮೈಲಿಗಲ್ಲನ್ನು ಸಾಧಿಸಿದೆ. * ಪ್ರಸ್ತುತ ಈ ಟೆಕ್ಸ್‌ಟೈಲ್ ಎಕ್ಸ್‌ಪ್ರೆಸ್ ರೈಲ್ವೇಗೆ ಒಟ್ಟಾರೆ 10.2 ಕೋಟಿ ರೂ. ಆದಾಯ ತಂದಿದೆ. ರೈಲ್ವೆ ಮತ್ತು ಜವಳಿ ಖಾತೆಯ ರಾಜ್ಯ ಸಚಿವ ದರ್ಶನ ಜರ್ದೋಶ್ ಅವರು 2021 ರ ಸೆಪ್ಟೆಂಬರ್. 01 ರಂದು ಈ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು. ಪ್ರಸ್ತುತ ರೈಲ್ವೇಯಲ್ಲಿ ಸೂರತ್ ಜವಳಿ ವಲಯದಲ್ಲಿ ಹೆಚ್ಚಾಗುತ್ತಿರುವ ವಿಶ್ವಾಸವನ್ನು ಬಿಂಬಿಸುವ '5' ತಿಂಗಳಿನೊಳಗೆ ರೈಲೇ ಇಲಾಖೆ 100 ನೇ ಜವಳಿ ರೈಲಿನ ಮೈಲಿಗಲ್ಲು ಸಾಧಿಸಿದೆ. * ಮೊಟ್ಟ ಮೊದಲ "ಜವಳಿ ಪಾರ್ಸೆಲ್" ವಿಶೇಷ ರೈಲನ್ನು 2021 ರಲ್ಲಿ ಫ್ಲ್ಯಾಗ್ ಆಫ್ ಮಾಡಲಾಗಿದೆ. ಈ ರೈಲು 25 ಹೊಸ ಮಾರ್ಪಡಿಸಿರುವ ಸರಕುಗಳ ವ್ಯಾಗನ್‌ಗಳನ್ನು ಹೊಂದಿದೆ, ಈ ಜವಳಿ ವಸ್ತುಗಳ ಸರಕುಗಳನ್ನು ಗುಜರಾತ್‌ನಿಂದ ಬಿಹಾರಕ್ಕೆ ಸಾಗಿಸಲು ಕಸ್ಟಮೈಸ್ ಮಾಡಲಾಗಿದೆ. ಇದೀಗ ಈ ಕ್ರಮವು ವೇಗವಾದ, ಆರ್ಥಿಕ ಹಾಗೂ ಸುರಕ್ಷಿತ ಸಾರಿಗೆ ವಿಧಾನದ ಮೂಲಕ ಸೂರತ್‌ನ ಜವಳಿ ಮಾರುಕಟ್ಟೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಹೊಸದಾಗಿ ಮಾರ್ಪಡಿಸಿದ ಸರಕುಗಳ ವ್ಯಾಗನ್‌ಗಳುನ್ನು ಉಧ್ನಾ ನ್ಯೂ ಗೂಡ್ಸ್ ಶೆಡ್‌ನಲ್ಲಿ ಮೊದಲ ಬಾರಿಗೆ ಕಸ್ಟಮೈಸ್ ಮಾಡಲಾಗಿರುವ ಸರಕುಗಳಲ್ಲಿ ಜವಳಿ ಸಂಚಾರವನ್ನು ಲೋಡ್ ಮಾಡಲಾಗಿದೆ. ಈ ಜವಳಿ ಪಾರ್ಸೆಲ್ ವಿಶೇಷ ರೈಲು 25 NMG ವ್ಯಾಗನ್‌ಗಳನ್ನು ಹೊಂದಿದೆ. * ಈ ಜವಳಿ ರೈಲುಗಳು ಸೂರತ್'ನ ಜವಳಿ ಮಾರುಕಟ್ಟೆಗೆ ಆರ್ಥಿಕ, ವೇಗವಾದ ಹಾಗೂ ಸುರಕ್ಷಿತ ಸಾರಿಗೆ ವಿಧಾನವಾಗಿದೆ. ಇದೀಗ ಇದು ಜವಳಿ ಮಾರುಕಟ್ಟೆಯ ಬೃಹತ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ಇದರಿಂದಾಗಿ ಸೂರತ್ ನಗರ ಪ್ರದೇಶದಲ್ಲಿನ ಜವಳಿ ಉದ್ಯಮದ ಗೋಡೌನ್ ಹಬ್‌ಗಳ ಸಾರಿಗೆಗಳ ಅಗತ್ಯವನ್ನು ಪೂರೈಕೆ ಮಾಡುತ್ತದೆ. * ಪ್ರಸ್ತುತ ಪಶ್ಚಿಮ ರೈಲ್ವೇಯು ಮುಂಬೈ ವಿಭಾಗದಲ್ಲಿ ಚಲತಾನ್, ಗಂಗಾಧರ, ಸೂರತ್ ಹಾಗೂ ಉಧ್ನಾ ನ್ಯೂ ಗೂಡ್ಸ್ ಶೆಡ್, ಎಂಬ '4' ಟರ್ಮಿನಲ್‌ಗಳನ್ನು ಲಭ್ಯಗೊಳಿಸಿದೆ, ಇವುಗಳನ್ನು NMG ವ್ಯಾಗನ್‌ಗಳನ್ನು ಲೋಡ್ ಮಾಡಲು ಈ ರೀತಿಯ ದಟ್ಟಣೆಯನ್ನು ನಿರ್ವಹಿಸಲು ಸಹಾಯಕಾರಿಯಾಗಿವೆ. * ಪಶ್ಚಿಮ ರೈಲ್ವೆ (WR) ಇದೊಂದು ಭಾರತೀಯ ರೈಲ್ವೆಯ 18 ವಲಯಗಳಲ್ಲಿ ಒಂದು ವಲಯವಾಗಿದೆ. ಈ ವಲಯವು ಭಾರತದ ಅತ್ಯಂತ ಜನನಿಬಿಡ ರೈಲ್ವೆ ಜಾಲವಾಗಿದೆ. ಪಶ್ಚಿಮ ರೈಲ್ವೇ ವ್ಯವಸ್ಥೆಯನ್ನು ಅಹಮದಾಬಾದ್, ರಾಜ್‌ಕೋಟ್, ವಡೋದರಾ, ರತ್ಲಾಮ್, ಭಾವನಗರ ಹಾಗೂ ಮುಂಬೈ WR ಎಂಬ '6' ಕಾರ್ಯಾಚರಣಾ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿಯೂ ಸೂರತ್ ರೈಲು ನಿಲ್ದಾಣವು ಈ ವಲಯವು ಅತ್ಯಂತ ಹೆಚ್ಚಿನ ಜನನಿಬಿಡ ರೈಲು ನಿಲ್ದಾಣವಾಗಿದೆ. * ಪ್ರಸ್ತುತ ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆಯ ಅಡಿಯಲ್ಲಿನ ಪ್ರಮುಖ ರೈಲ್ವೆ ಮಾರ್ಗಗಳು: - ಮುಂಬೈ ಸೆಂಟ್ರಲ್-ರತ್ಲಂ, - ಮುಂಬೈ ಸೆಂಟ್ರಲ್-ಅಹಮದಾಬಾದ್, - ಪಾಲನ್ಪುರ್-ಅಹಮದಾಬಾದ್.