Job Description: * ಪ್ರಸ್ತುತ JNU ಉಪಕುಲಪತಿ ಎಂ. ಜಗದೀಶ್ ಕುಮಾರ್ ಅವರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಈ ಹಿಂದೆ 2018 ರಲ್ಲಿ ಅಧಿಕಾರ ವಹಿಸಿಕೊಂಡಿರುವ ಪ್ರೊ.ಡಿ.ಪಿ.ಸಿಂಗ್ ಅವರು ರಾಜೀನಾಮೆ ನೀಡಿರುವ ಹಿನ್ನಲೆಯಿಂದಾಗಿ ಎಂ. ಜಗದೀಶ್ ಕುಮಾರ್ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. * ಎಂ. ಜಗದೇಶ್ ಕುಮಾರ್ ಅವರು ಶಿಕ್ಷಣ ತಜ್ಞ, ನಿರ್ವಾಹಕರು ಹಾಗೂ ಲೇಖಕರಾಗಿದ್ದಾರೆ, ಇವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ 2016 ಜನವರಿಯಲ್ಲಿ ಸುಧೀರ್ ಕುಮಾರ್ ಸೊಪೋರಿ ಅವರಿಂದ JNU ನ VC ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇತ್ತೀಚಿಗೆ ಇವರು 2022 ಫೆಬ್ರವರಿ. 04 ರಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿದ್ದಾರೆ. * JNU ಉಪಕುಲಪತಿಯಾಗಿರುವ ಜಗದೀಶ್ ಕುಮಾರ್ ಅವರ '5' ವರ್ಷಗಳ ಅವಧಿಯು ಇದೇ ಜನವರಿ. 26 ರಂದು ಕೊನೆಗೊಂಡಿದೆ. ಜಗದೀಶ್ ಕುಮಾರ್ ಅವರು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಹಾಗೂ ಅದಕ್ಕೆ ಸಬಂಧಪಟ್ಟಿರುವ ಕ್ಷೇತ್ರಗಳಲ್ಲಿ ಅನುಭವವನ್ನು ಹೊಂದಿದ್ದಾರೆ. ಇವರು ಮದ್ರಾಸ್‌ ನ IIT ಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಎಂಎಸ್ ಹಾಗೂ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.