Job Description: * ಪ್ರಸ್ತುತ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿರುವ ಪೆಮಾ ಖಂಡು ಅವರು ತವಾಂಗ್‌ನ ನ್ಗಾಂಗ್ಪಾ ನಾಟ್ಮೆ (ಬುದ್ಧ ಪಾರ್ಕ್) ಯಲ್ಲಿ ಸುಮಾರು 104 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಹಾಗೂ ಈ ರಾಷ್ಟ್ರಧ್ವಜವನ್ನು ಅರುಣಾಚಲದ ದೇಶಪ್ರೇಮಿಗಳಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. * * ಅರುಣಾಚಲ ಪ್ರದೇಶ : ಇದೊಂದು ಈಶಾನ್ಯ ಭಾರತದ ರಾಜ್ಯವಾಗಿದೆ. ಈ ರಾಜ್ಯವು ಈ ಹಿಂದಿನ ಈಶಾನ್ಯ ಫ್ರಾಂಟಿಯರ್ ಏಜೆನ್ಸಿ ಪ್ರದೇಶದಿಂದ ರೂಪುಗೊಂಡಿತು, ಹಾಗೂ ಇದು 1987 ರ ಫೆಬ್ರವರಿ. 20 ರಂದು ಅಧಿಕೃತವಾಗಿ ರಾಜ್ಯವಾಯಿತು. * ಈ ಅರುಣಾಚಲ ಪ್ರದೇಶ ರಾಜ್ಯವು ದಕ್ಷಿಣಕ್ಕೆ ಅಸ್ಸಾಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಈ ರಾಜ್ಯವು ಪಶ್ಚಿಮದಲ್ಲಿ ಭೂತಾನ್ ರಾಷ್ಟ್ರ, ಪೂರ್ವದಲ್ಲಿ ಮ್ಯಾನ್ಮಾರ್ ರಾಷ್ಟ್ರ, ಉತ್ತರದಲ್ಲಿ ಚೀನಾ ದೇಶದ ಜೊತೆಗೆ ಮ್ಯಾಕ್ ಮಹೊನ್ ಲೈನ್‌ನಲ್ಲಿ ವಿವಾದಿತ ಗಡಿಯನ್ನು ಹೊಂದಿದೆ. * ಪ್ರಸ್ತುತ ಇಟಾನಗರವು ಅರುಣಾಚಲ ಪ್ರದೇಶದ ರಾಜ್ಯದ ರಾಜಧಾನಿಯಾಗಿದೆ. ಈ ರಾಜ್ಯವು ವಿಸ್ತೀರ್ಣದಲ್ಲಿ ಈಶಾನ್ಯ ಭಾರತದ '7' ಸಹೋದರಿಯ ರಾಜ್ಯಗಳಲ್ಲಿ ದೊಡ್ಡ ರಾಜ್ಯವಾಗಿದೆ. ಅಷ್ಟೇ ಅಲ್ಲದೆ ಈ ರಾಜ್ಯವು ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ಜೊತೆಗೆ ಸರಿ ಸುಮಾರು 1,129 ಕಿಮೀ ಗಡಿಯನ್ನು ಹೊಂದಿದೆ. * ಪ್ರಸ್ತುತ ಅರುಣಾಚಲ ಪ್ರದೇಶ ರಾಜ್ಯವು ಜನಾಂಗೀಯವಾಗಿ ವೈವಿಧ್ಯಮಯ ರಾಜ್ಯವಾಗಿದೆ, ಪಶ್ಚಿಮದಲ್ಲಿ ಪ್ರಧಾನವಾಗಿ ಮೊನ್ಪಾ ಜನಾಂಗದ ಜನರು, ಮಧ್ಯದಲ್ಲಿ ತಾನಿ ಜನಾಂಗದ ಜನರು, ಪೂರ್ವದಲ್ಲಿ ಮಿಶ್ಮಿ ಹಾಗೂ ತೈ ಜನಾಂಗದ ಜನರು ಹಾಗೂ ರಾಜ್ಯದ ಆಗ್ನೇಯ ಪ್ರದೇಶದಲ್ಲಿ ನಾಗಾ ಜನಾಂಗದ ಜನರನ್ನು ಹೊಂದಿದೆ. ಇದೀಗ ಈ ರಾಜ್ಯದಲ್ಲಿ ಸುಮಾರು 45 ಬುಡಕಟ್ಟು ಜನಾಂಗದ ಜನರು ವಾಸಿಸುತ್ತಿದ್ದಾರೆ. ಅರುಣಾಚಲ ಪ್ರದೇಶ ರಾಜ್ಯದ ಮುಖ್ಯ ಬುಡಕಟ್ಟು ಜನಾಂಗಗಳು ಆದಿ, ನೈಶಿ, ಗಲೋ, ಟ್ಯಾಗಿನ್, ಅಪತಾನಿ, ಇನ್ನು ಹೀಗೆ ಹಲವು. * ಇತ್ತೀಚಿಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಹಾಗೂ ರಿಪಬ್ಲಿಕ್ ಆಫ್ ಚೀನಾ ಈ ಅರುಣಾಚಲ ಪ್ರದೇಶದ ಒಂದು ಭಾಗವನ್ನು ದಕ್ಷಿಣ ಟಿಬೆಟ್ ಪ್ರದೇಶದ ಭಾಗವಾಗಿ ಹೇಳಿಕೆ ನೀಡಿದೆ. ಈ ಹಿಂದೆ 1962 ರ ಸಿನೋ-ಇಂಡಿಯನ್ ಯುದ್ಧದ ಸಂಧರ್ಭದಲ್ಲಿ ಅರುಣಾಚಲ ಪ್ರದೇಶದ ಅತ್ಯಧಿಕ ಭಾಗವನ್ನು ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ ವಶಪಡಿಸಿಕೊಂಡಿತು ಹಾಗೂ ಅ ಪ್ರದೇಶವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗಿತ್ತು.