Job Description: * ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯು ಸಕಾಲ ಯೋಜನೆಯಡಿ ಅರ್ಜಿಗಳನ್ನು ವಿಲೇವಾರಿ ವಿಚಾರವಾಗಿ 47 ನೇ ಬಾರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯ ಸರ್ಕಾರವು 2022 ರ ಜನವರಿ ತಿಂಗಳನಲ್ಲಿ ಈ ಸಕಾಲ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಪ್ರಕಟಿಸಿದೆ. * ಈ ಸಕಾಲ ಯೋಜನೆ ಅಡಿಯಲ್ಲಿ ಅರ್ಜಿಗಳ ವಿಲೇವಾರಿ ಬಗ್ಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ರ‍್ಯಾಂಕ್ ಪಟ್ಟಿ ಬಿಡುಗಡೆಗೊಳಿಸುತ್ತದೆ. ಆಯಾ ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ಮಾನವನ್ನು ನೀಡಲಾಗುತ್ತದೆ. * ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೇ ಜನವರಿಯಲ್ಲಿ ಒಟ್ಟು 68,667 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಲಾಗಿತ್ತು ಅದರಲ್ಲಿ 67,722 ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲಾಗಿದೆ. ಹಾಗೂ ಇನ್ನಉಳಿದ ಅರ್ಜಿಗಳನ್ನು ಸೂಕ್ತ ದಾಖಲೆಗಳಿಲ್ಲದ ಕಾರಣದಿಂದಾಗಿ ತಿರಸ್ಕೃರಿಸಲಾಗಿದೆ, ಹಾಗೂ ಇನ್ನು ಕೆಲವು ಅರ್ಜಿಗಳು ವಿಲೇವಾರಿ ಆಗುವ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಮಾಹಿತಿ ನೀಡಿದ್ದಾರೆ. * ಈ ಸಕಾಲ ಯೋಜನೆಯಿಂದಾಗಿ ನಿರ್ದಿಷ್ಟ ಸಮಯದೊಳಗೆ ಅರ್ಜಿಗಳು ವಿಲೇವಾರಿ ಮಾಡುವದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ಕಡಿಮೆಯಾಗುತ್ತದೆ, ಹಾಗೂ ಸರ್ಕಾರದ ಆಡಳಿತವ ಪಾರದರ್ಶಕವಾಗುತ್ತದೆ ಇದಕ್ಕೆ ಈ ಸಕಾಲ ಯೋಜನೆ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. * ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯು ಸಕಾಲ ಯೋಜನೆ ಅನುಷ್ಠಾನದಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇದೆ. ಈ ಯೋಜನೆಯು 2012 ರಿಂದ ಆರಂಭವಾಗಿದೆ ಅಂದಿನಿಂದಲೂ ಇಲ್ಲಿಯವರೆಗೆ ಈ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿಯೇ 47 ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಈ ಸಕಾಲ ಯೋಜನೆಯಡಿ ಇಲ್ಲಿಯವರೆಗೆ ಒಟ್ಟಾರೆ 20,98,381 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ 20,76,286 ಅರ್ಜಿಗಳನ್ನು(ಶೇ 98.94 ರಷ್ಟು) ವಿಲೇವಾರಿ ಮಾಡಿದೆ. ಈ ಜಿಲ್ಲೆಯು 47 ಬಾರಿ ಪ್ರಥಮ, 14 ಬಾರಿ 2 ನೇ, ಹಾಗೂ 10 ಬಾರಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. * ಈ ಸಕಾಲ ಯೋಜನೆಯನ್ನು ಕರ್ನಾಟಕ ಸಕಾಲ ಸೇವೆಗಳ ಕಾಯಿದೆಯನ್ನು 2011 ರಲ್ಲಿ ಅಂಗೀಕರಿಸಲಾಗಿದೆ. ಈ ಯೋಜನೆಯು ಭಾರತದ ಕರ್ನಾಟಕ ರಾಜ್ಯದಲ್ಲಿ ನಾಗರಿಕರಿಗೆ ಸೇವೆಗಳನ್ನು ಒದಗಿಸಲು ನಾಗರಿಕ ಸಂಬಂಧಿತ ಸೇವೆಗಳಿಗೆ ನಿಗದಿತ ಸಮಯವನ್ನು ಗೊತ್ತುಪಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಕಾಯಿದೆಯನ್ನು 2012 ರ ನವೆಂಬರ್'ನಿಂದ ಸಕಾಲ ಕಾಯಿದೆ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಈ ಕಾಯಿದೆಯನ್ನು ಸಾರ್ವಜನಿಕ ಸೇವೆಗಳ ಹಕ್ಕು ಶಾಸನದ ಅಡಿಯಲ್ಲಿ ಸಂಯೋಜಿಸಿದ 10 ನೇ ರಾಜ್ಯ ಕರ್ನಾಟಕವಾಗಿದೆ. * ಪ್ರಸ್ತುತ ಸಕಾಲ ಯೋಜನೆಯ ಕಾರ್ಯಕ್ರಮಗಳು ಸಮಗ್ರ ಮಾಹಿತಿ ತಂತ್ರಜ್ಞಾನ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ, ಪರಿಹಾರಗಳು ಹಾಗೂ ಸೇವೆಗಳನ್ನು ಕಲ್ಪಿಸಲು ಹಾಗೂ ಸೇವೆಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದೆ.