Job Description: * 2022 ರ ಜನವರಿ. 26 ರಂದು ದೆಹಲಿಯ ಇಂಡಿಯಾ ಗೇಟ್‌ನಿಂದ ರಾಜಪಥದವರಗೆ ನಡೆದಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರಕ್ಕೆ ಅತ್ಯುತ್ತಮ ಸ್ತಬ್ಧಚಿತ್ರ ವಿಭಾಗದ ಅಡಿಯಲ್ಲಿ 2 ನೇ ಸ್ಥಾನ ಲಭಿಸಿದೆ. * ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ಘೋಷಣೆ ಮಾಡಿದೆ. ಕರ್ನಾಟಕದ ಈ ಸ್ತಬ್ಧಚಿತ್ರವು ಕರಕುಶಲ ಕಲೆಯ ವೈಭವವನ್ನು ತೋರಿಸಿರುವ ಹಿನ್ನಲೆಯಿಂದಾಗಿ ಈ ಸ್ತಬ್ಧಚಿತ್ರಕ್ಕೆ 2 ನೇ ಸ್ಥಾನ ದೊರಕಿದೆ ಎಂದು ತಿಳಿಸಿದ್ದಾರೆ. * ಉತ್ತರ ಪ್ರದೇಶ ರಾಜ್ಯದ ಕಾಶಿ ವಿಶ್ವನಾಥ ಕಾರಿಡಾರ್ ಬಗೆಗಿನ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿಯು ಪ್ರಥಮ ಸ್ಥಾನವನ್ನು ನೀಡಿದೆ. * ಮೇಘಾಲಯ ರಾಜ್ಯದ ಸ್ತಬ್ಧಚಿತ್ರವು ಅಲ್ಲಿನ ಮಹಿಳೆಯರ ಸಹಕಾರ ಸಂಘ ಮತ್ತು ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮವನ್ನು ತೋರಿಸಿರುವ ಸ್ತಬ್ಧಚಿತ್ರ 3 ನೇ ಸ್ಥಾನವನ್ನು ಪಡೆದುಕೊಂಡಿದೆ. - "ವಂದೇ ಭಾರತಮ್" ನೃತ್ಯ ತಂಡವು ವಿಶೇಷ‌ ಬಹುಮಾನವನ್ನು ಪಡೆದುಕೊಂಡಿದೆ. ಈ ನೃತ್ಯ ತಂಡದಲ್ಲಿ ಹುಬ್ಬಳ್ಳಿಯ ಮಯೂರ ಭರತ ನೃತ್ಯ ಅಕಾಡೆಮಿಯ ನೃತ್ಯಪಟುಗಳು ಪಾಲ್ಗೊಂಡಿದ್ದರು. - ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ವಿಭಾಗದಲ್ಲಿ ಶಿಕ್ಷಣ ಹಾಗೂ ನಾಗರಿಕ ವಿಮಾನಯಾನ ಸಚಿವಸಲಯಗಳ ಸ್ತಬ್ಧಚಿತ್ರಗಳು ವಿಶೇಷ ಬಹುಮಾನ ಪಡೆದುಕೊಂಡಿವೆ. - ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಹಾಗೂ ನೌಕಾದಳದ ಸಿಬ್ಬಂದಿಗೆ ವಿಶೇಷ‌ ಬಹುಮಾನವನ್ನು ಪ್ರಧಾನ ಮಾಡಲಾಗಿದೆ. - ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸುಭಾಷ್-125 ಸ್ತಬ್ಧಚಿತ್ರಕ್ಕೂ ಕೂಡ ವಿಶೇಷ ಬಹುಮಾನವನ್ನು ಪ್ರಧಾನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿಯು ತಿಳಿಸಿದೆ. * ಪ್ರಸ್ತುತ ಭಾರತದಲ್ಲಿ ಗಣರಾಜ್ಯೋತ್ಸವವನ್ನು ಗುರುತಿಸುವ ಪರೇಡ್‌ಗಳಲ್ಲಿ ದೆಹಲಿ ಗಣರಾಜ್ಯೋತ್ಸವ ಪರೇಡ್ ಅತಿ ದೊಡ್ಡದಾಗಿದೆ, ಹಾಗೂ ಮುಖ್ಯವಾಗಿದೆ. ಈ ಪರೇಡ್ ಪ್ರತಿ ವರ್ಷ ಜನವರಿ. 26 ರಂದು ನವದೆಹಲಿಯ ರಾಜಪಥದಲ್ಲಿ ನಡೆಯುತ್ತದೆ. ಈ ಮೆರವಣಿಗೆಯು '3' ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಇದರ ಮೊದಲ ಮೆರವಣಿಗೆಯನ್ನು ಈ ಹಿಂದೆ 1950 ರಲ್ಲಿ ಆರಂಭಿಸಲಾಗಿದೆ, ಅಂದಿನಿಂದಲೂ ಪ್ರತಿ ವರ್ಷ ಜನವರಿ. 26 ರಂದು ನಡೆಸಲಾಗುತ್ತದೆ. * ಪ್ರತಿ ವರ್ಷ ಜನವರಿ. 26 ರಂದು ನಡೆಯುವ ಮೆರವಣಿಗೆಯು ರಾಷ್ಟ್ರಪತಿ ಭವನದಿಂದ ರಾಜಪಥದ ಉದ್ದಕ್ಕೂ ಹಾಗೂ ಇಂಡಿಯಾ ಗೇಟ್‌ಗೆ ಮತ್ತು ಅಲ್ಲಿಂದ ಕೆಂಪು ಕೋಟೆಗೆ ಮೆರವಣಿಗೆಯನ್ನು ನಡೆಸಲಾಗುತ್ತದೆ. ತದನಂತರ ಭಾರತದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಈ ಮೆರವಣಿಗೆಗೆ ತೆರೆ ಎಳೆಯುತ್ತಾರೆ. ಇದಾದ ಬಳಿಕ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಹಲವಾರು ರೆಜಿಮೆಂಟ್‌ಗಳು ತಮ್ಮ ಬ್ಯಾಂಡ್‌ಗಳ ಜೊತೆಗೆ ಮೆರವಣಿಗೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳ ಸಂಸ್ಕೃತಿಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.