Job Description: * ಪ್ರಸ್ತುತ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ಹೇಳಿಕೆ ನೀಡಿರುವ ಪ್ರಕಾರ ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಯಾವತ್ತಿಗೂ ಕಾನೂನುಬದ್ಧ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ ಡಿಜಿಟಲ್ ರೂಪಾಯಿ ಮಾತ್ರ ಕಾನೂನುಬದ್ಧ ಆಗಿರುತ್ತದೆ ಹಾಗೂ 'ಡಿಜಿಟಲ್ ರೂಪಾಯಿ'ಯನ್ನು RBI ಬೆಂಬಲಿಸುತ್ತದೆ ಮತ್ತು ಈ ಡಿಜಿಟಲ್ ರೂಪಾಯಿ ಕಾನೂನುಬದ್ಧವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. * ಇದೀಗ RBI ನೀಡುವ ಡಿಜಿಟಲ್ ರೂಪಾಯಿಯನ್ನು ಜನರು(ನಾವು) ಖರೀದಿ ಮಾಡಬಹುದು. ಈ ಡಿಜಿಟಲ್ ರೂಪಾಯಿಂದ ನಾವುಗಳು ಐಸ್ ಕ್ರೀಮ್ ಅಥವಾ ಇನ್ನಿತರ ವಸ್ತುಗಳನ್ನು ನಮ್ಮ ವ್ಯಾಲೆಟ್ ಬಳಸಿ ಅಥವಾ UPI ಪ್ಲಾಟ್‌ಫಾರ್ಮ್ ಬಳಸಿಕೊಂಡು ಖರೀದಿ ಮಾಡಬಹುದಾಗಿದೆ ಎಂದಿದ್ದಾರೆ. ಆದರೆ ಈ ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಯಾವತ್ತಿಗೂ ಕಾನೂನುಬದ್ಧವಾಗುವದಿಲ್ಲ ಎಂದು ತಿಳಿಸಿದ್ದಾರೆ. * ಈ ಖಾಸಗಿ ಕ್ರಿಪ್ಟೋ ಮೇಲೆ ಹೂಡಿಕೆ ಮಾಡಿ ಹಣ ನಷ್ಟವಾದರೆ ಸರ್ಕಾರವು ಯಾವುದೇ ಕಾರಣಕ್ಕೂ ಜವಾಬ್ದಾರಿಯಾಗಿರುವದಿಲ್ಲ ಎಂದು ತಿಳಿಸಿದೆ. ಈ ಕ್ರಿಪ್ಟೋ ಸ್ವತ್ತುಗಳು ಆಸ್ತಿಗಳಾಗಿವೆ, ಆದರೆ ಇವುಗಳ ಮೌಲ್ಯವನ್ನು ಎರಡು ಜನರ ಮಧ್ಯೆ ನಿರ್ಧರಿಸಲಾಗುತ್ತದೆ. ಜನರು ಚಿನ್ನ, ವಜ್ರ ಹಾಗೂ ಕ್ರಿಪ್ಟೋ ಆಸ್ತಿಗಳನ್ನು ಖರೀದಿಸಬಹುದು. ಆದರೆ ಆ ಮೌಲ್ಯಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಜವಾಬ್ದಾರಿಯಾಗಿರುವದಿಲ್ಲ ಎಂದು ತಿಳಿಸಲಾಗಿದೆ. * ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ತಿಳಿಸಿರುವ ಪ್ರಕಾರ ಖಾಸಗಿ ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಜನರು ಸರ್ಕಾರದ ಅಧಿಕಾರವನ್ನು ಹೊಂದಿರುವದಿಲ್ಲ ಇದನ್ನು ಜನರು ಗಮನದಲ್ಲಿ ಇಟ್ಟುಕೊಳ್ಳಬೇಕು, ಒಂದು ವೇಳೆ ನಿಮ್ಮ ಹೂಡಿಕೆಗಳು ಯಶಸ್ವಿಯಾಗಬಹುದು ಹಾಗೂ ಯಶಸ್ವಿಯಾಗದೇ ಇರಬಹುದು ಇದಕ್ಕೆ ಯಾವುದೇ ಗ್ಯಾರಂಟಿ ಇರುವದಿಲ್ಲ ಎಂದು ತಿಳಿಸಿದೆ. * ಪ್ರಸ್ತುತ ಕಾನೂನುಬದ್ಧವಾಗಿರದ ವಿಷಯಗಳು ಕಾನೂನುಬಾಹಿರ ಎಂದು ಅರ್ಥವಲ್ಲ, ಹಾಗೆಯೇ ಬಿಟ್‌ಕಾಯಿನ್ ಅಥವಾ ಎಥೆರಿಯಮ್ ಕಾನೂನುಬಾಹಿರ ಎಂದು ಹೇಳಿಕೆ ನೀಡುತ್ತಿಲ್ಲ, ಆದರೆ ಕಾನೂನುಬದ್ಧ ಅಲ್ಲ ಎಂದು ಮಾತ್ರ ಹೇಳಬಹುದಾಗಿದೆ.ಇದು ಎಂದಿಗೂ ಕಾನೂನುಬದ್ಧವಾಗುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. * ಈ ಡಿಜಿಟಲ್ ರೂಪಾಯಿ ಮೂಲಕ, ಜನರು(ನಾವು) ನಮ್ಮ ಡಿಜಿಟಲ್ ವ್ಯಾಲೆಟ್‌ಗಳಾಗಿರುವ ಪೇಟಿಎಂ, UPI ಮೂಲಕ ಮಾಡುತ್ತಿರುವ ಹಾಗೆಯೇ ನಮ್ಮ ವ್ಯವಹಾರವನ್ನು ಮಾಡಬಹುದು. ಈ ಡಿಜಿಟಲ್ ರೂಪಾಯಿ ಕಾನೂನುಬದ್ಧ ಹಾಗೂ ಇದು ನಗದು ಪಾವತಿಗೆ ಸಮಾನವಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಅವರು ತಿಳಿಸಿದ್ದಾರೆ.