Job Description: * ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಇದೀಗ ಪಾಕಿಸ್ತಾನ ರಾಷ್ಟ್ರಕ್ಕೆ 1 ಬಿಲಿಯನ್ ಡಾಲರ್ ಸಾಲದ ಕಂತನ್ನು ನೀಡಲು ಅನುಮೋದನೆ ನೀಡಿದೆ. ಈ ಹಿಂದೆ ಪಾಕಿಸ್ತಾನ ರಾಷ್ಟ್ರಕ್ಕೆ ತಡೆಹಿಡಿಯಲಾಗಿರುವ 6 ಬಿಲಿಯನ್ ಡಾಲರ್ ಮೌಲ್ಯದ ಸಾಲದ ಮೊತ್ತದ ಕಂತಿನ ಭಾಗವಾಗಿದೆ ಎಂದು ತಿಳಿಸಲಾಗಿದೆ. * ಇದೀಗ IMF ನಿಂದ ಪಾಕಿಸ್ತಾನ ರಾಷ್ಟ್ರಕ್ಕೆ ಸಾಲದ ನೆರವು ಸಿಕ್ಕಂತಾಗಿದೆ. ಪ್ರಸ್ತುತ IMF ನ ಕಾರ್ಯಕಾರಿಣಿ ಮಂಡಳಿಯು ಇದೇ ಫೆಬ್ರುವರಿ. 02 ರಂದು ವಾಷಿಂಗ್ ಟನ್ ಡಿಸಿಯಲ್ಲಿ ಸಭೆಯನ್ನು ನಡೆಸುವ ಮೂಲಕ ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡುವ ಮನವಿಯನ್ನು ಸ್ವೀಕರಿಸಿದೆ. * ಪ್ರಸ್ತುತ ಪಾಕಿಸ್ತಾನದ ಹಣಕಾಸು ಸಚಿವ ಶೌಕತ್ ತರೈನ್ ಅವರು IMF ನಿಂದ ಸಾಲ ಮಂಜೂರಾಗಿದ್ದನ್ನು ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * * ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) : ಇದೊಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ. ಸುಮಾರು 190 ದೇಶಗಳನ್ನು ಒಳಗೊಂಡಿರುವ ಈ ಸಂಸ್ಥೆಯು ವಾಷಿಂಗ್ಟನ್, D.C. ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಇದರ ಧ್ಯೇಯವು ಅಂತರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುವುದು, ಹಾಗೂ ಹೆಚ್ಚಿನ ಉದ್ಯೋಗ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವದು ಜೊತೆಗೆ ಪ್ರಪಂಚದಾದ್ಯಂತ ಬಡತನವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಈ ಸಂಸ್ಥೆಯು 1944 ರಲ್ಲಿ ರೂಪುಗೊಂಡು, 1945 ರ ಡಿಸೆಂಬರ್. 27 ರಂದು ಆರಂಭವಾಗಿದೆ. ಈ ಸಂಸ್ಥೆಯು ದೇಶಗಳು ಕೋಟಾ ವ್ಯವಸ್ಥೆಗಳ ಮೂಲಕ ಪೂಲ್‌ಗೆ ಹಣವನ್ನು ಕೊಡುಗೆಯಾಗಿ ನೀಡುತ್ತದೆ, ಹಾಗೂ ಪಾವತಿಗಳ ಸಮತೋಲನ ಸಮಸ್ಯೆಗಳು ಉಂಟಾಗಿರುವ ದೇಶಗಳು ಹಣವನ್ನು ಸಾಲದ ರೂಪದಲ್ಲಿ ಪಡೆಯಬಹುದು ಎಂದು ತಿಳಿಸಿದ್ದಾರೆ. * ಪ್ರಸ್ತುತ ಬಲ್ಗೇರಿಯನ್ ಅರ್ಥಶಾಸ್ತ್ರಜ್ಞ ಕ್ರಿಸ್ಟಲಿನಾ ಜಾರ್ಜಿವಾ ಅವರು IMF ನ ಅಧ್ಯಕ್ಷೆ ಹಾಗೂ MD ಯಾಗಿದ್ದಾರೆ. ಇವರು ಈ ಹುದ್ದೆಯನ್ನು 2019 ರ ಅಕ್ಟೋಬರ್. 01 ರಿಂದ ಅಲಂಕರಿಸಿದ್ದಾರೆ. ಇತ್ತೀಚಿಗೆ 2022 ರ ಜನವರಿ. 21 ರಿಂದ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ ಗೀತಾ ಗೋಪಿನಾಥ್ ಅವರನ್ನು ಈ ಸಂಸ್ಥೆಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಗೋಪಿನಾಥ್ ಅವರು ಭಾರತದ ಕೇರಳ ರಾಜ್ಯದ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.