Job Description: * ಇತ್ತೀಚಿಗಷ್ಟೇ ಆರಂಭಿಸಿರುವ ಕಾವೇರಿ ಕೂಗು ಅಭಿಯಾನವು ಯಶಸ್ವಿಯಾಗಿದೆ ಎನ್ನಲಾಗಿದೆ. ಈ ಕಾವೇರಿ ಕೂಗು ಅಭಿಯಾನದ ಸಹಾಯದಿಂದ ಸುಮಾರು 1.25 ಲಕ್ಷ ರೈತರು ಮರ ಆಧಾರಿತ ಕೃಷಿ ಪದ್ದತಿಗೆ ಬದಲಾಗಿದ್ದಾರೆ. ಇದರಿಂದಾಗಿ ಅವರ ಕೃಷಿ ಇಳುವರಿ ಹಾಗೂ ಆದಾಯ ಹೆಚ್ಚಾಗಿದೆ. ಇತ್ತೀಚಿಗಷ್ಟೇ ಮಾತನಾಡಿದ ನಟಿ ಜೂಹಿ ಚಾವ್ಲಾ ಅವರು ಈ ಯಶಸ್ಸು ದೇಶಾದ್ಯಂತ ವಿಸ್ತರಣೆ ಮಾಡಬೇಕು ಎಂದಿದ್ದಾರೆ. * ಇತ್ತೀಚಿಗೆ ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಲಯಂ ಮೇವಾಣಿ ಎಂಬ ಗ್ರಾಮದಲ್ಲಿ ರೈತರ ಜೊತೆಯಲ್ಲಿ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಜೂಹಿ ಚಾವ್ಲಾ ಅವರು ಬರ(ನೀರಿನ ಅಭಾವ) ಅಥವಾ ವೈಯಕ್ತಿಕ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಲು ರೈತರು ತಮ್ಮ ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಸಿದ್ಧರಾಗಿದ್ದರು, ಆದರೆ ಅಲ್ಲಿನ ಅನೇಕ ರೈತರು ಕಾವೇರಿ ಕೂಗು ಅಭಿಯಾನದ ಸಹಾಯದಿಂದ ಮರ ಆಧಾರಿತ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. * ಪ್ರಸ್ತುತ ಈ ಕಾವೇರಿ ಕೂಗು ಅಭಿಯಾನದ ರೂವಾರಿಯಾಗಿರುವ ಸದ್ಗುರು ಅವರಿಗೆ ಅಲ್ಲಿನ ರೈತರು ಧನ್ಯವಾದವನ್ನು ತಿಳಿಸಿದ್ದಾರೆ. ಹಾಗೂ ಅವರು ನನ್ನ(ನಟಿ ಜೂಹಿ ಚಾವ್ಲಾ) ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಮರಗಳನ್ನು ನೆಡಿ ಎಂದು ಕೇಳಿಕೊಂಡಿದ್ದರು. ಈ ಮನವಿಗೆ ಅವರ ಅಭಿಮಾನಿಗಳು, ಮಿತ್ರರು 30 ಸಾವಿರ ಸಸಿಗಳನ್ನು ನೆಡಲು ಹಣವನ್ನು ಸಂಗ್ರಹಿಸಿದ್ದರು. ಈ ಕಾರಣದಿಂದಾಗಿ ಕಾವೇರಿ ಕೂಗಿಗಾಗಿ 1 ಲಕ್ಷ ಸಸಿಗಳನ್ನು ನೆಡುವುದಕ್ಕೆ ಹಣ ಸಂಗ್ರಹಿಸುವ ಕೆಲಸ ನಡೆದಿದೆ ಎಂದಿದ್ದಾರೆ. * ಕಳೆದ ಎರಡು ವರ್ಷಗಳಲ್ಲಿ ಈ ಕಾವೇರಿ ಕೂಗು ಅಭಿಯಾನದಡಿಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿನ ರೈತರು ಸುಮಾರು 2.1 ಕೋಟಿ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ.