Job Description: * ಪ್ರಸ್ತುತ 2022 ರ ಲಾರೆಸ್ ವರ್ಲ್ಡ್ ಬ್ರೇಕ್‌ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ, ಈ ಹಿಂದೆ ಟೋಕಿಯೋ ಒಲಿಂಪಿಕ್'ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಭಾರತೀಯ ನೀರಜ್ ಚೋಪ್ರಾ ಅವರು ಆಯ್ಕೆಯಾಗಿದ್ದಾರೆ. ಇವರ ಜೊತೆ ಜೊತೆಗೆ ಎಮ್ಮಾ ರಾಡುಕಾನು, ಡೇನಿಯಲ್ ಮೆಡ್ವೆಡೆವ್, ಪೆಡ್ರಿ, ಯುಲಿಮಾರ್ ರೋಜಾಸ್, ಅರಿಯಾರ್ನೆ ಟಿಟ್ಮಸ್, ಸೇರಿ ಒಟ್ಟು '6' ಜನರು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. * ಇದೀಗ ನೀರಜ್ ಚೋಪ್ರಾ ಅವರು ಈ ಪ್ರಶಸ್ತಿಗೆ ಭಾಜನರಾದ ಭಾರತದ 3 ನೇ ಕ್ರೀಡಾಪಟು ಆಗಿದ್ದಾರೆ. ಈ ಹಿಂದೆ 2019 ರಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು 2000-2020 ರ ಲಾರೆಸ್ ಸ್ಪೋರ್ಟಿಂಗ್ ಮೂಮೆಂಟ್ ಪ್ರಶಸ್ತಿಯನ್ನು ಗೆದ್ದ ನಂತರ ಈ ಲಾರೆಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಇದೀಗ ನೀರಜ್ ಚೋಪ್ರಾ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವ 3ನೇ ಭಾರತೀಯ ಅಥ್ಲೀಟ್ ಆಗಿದ್ದಾರೆ. * ಈಸಮಿತಿಯು ವರ್ಷದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ'ಗೆ ಪ್ರತಿ '7' ವಿಭಾಗಗಳಲ್ಲಿ ನಾಮನಿರ್ದೇಶಿತರನ್ನು ಆಯ್ಕೆ ಮಾಡಿದೆ. ಸಾರ್ವಕಾಲಿಕ 71 ಶ್ರೇಷ್ಠ ಕ್ರೀಡಾ ಸಾಧಕರು ಸೇರಿದಂತೆ ವಿಶ್ವದ ಅಂತಿಮ ಕ್ರೀಡಾ ತೀರ್ಪುಗಾರರ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿ ಮತದಾನ ಮಾಡಲಿದೆ, ನಂತರ ಏಪ್ರಿಲ್‌ನಲ್ಲಿ ವಿಜೇತರನ್ನು ಘೋಷಣೆ ಮಾಡುತ್ತದೆ. * ಪ್ರಸ್ತುತ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಇಬ್ಬರು ಭಾರತೀಯರು, ನೀರಜ್ ಚೋಪ್ರಾ ಹಾಗೂ ಮತ್ತೊಬ್ಬರು ಈ ಹಿಂದೆ 2008 ರಲ್ಲಿ ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದಿರುವ ಅಭಿನವ್ ಬಿಂದ್ರಾ. * ವರ್ಷದ ಬ್ರೇಕ್‌ಥ್ರೂಗಾಗಿ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್: ಪ್ರಸ್ತುತ 2007 ರ ನಂತರದ ಹೊಸ ಕ್ರೀಡಾ ಪಟುಗಳಿಗೆ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ ಎಂದು ಕರೆಯಲಾಗುತ್ತದೆ. ಈ ಪ್ರಶಸ್ತಿಯು ಒಂದು ಪ್ರಮುಖ ಸಾಧನೆಯನ್ನು ಮಾಡಿದ ವ್ಯಕ್ತಿಗಳು ಅಥವಾ ತಂಡಗಳ ಸಾಧನೆಗಳನ್ನು ಗೌರವಿಸುವ ವಾರ್ಷಿಕ ಪ್ರಶಸ್ತಿಯಾಗಿದೆ. ಈ ಹಿಂದೆ ಇದನ್ನು ಮೊದಲು 2000 ರಲ್ಲಿ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ಸಮಯದಲ್ಲಿ ನೀಡಲಾದ ಏಳು ಘಟಕ ಪ್ರಶಸ್ತಿಗಳಲ್ಲಿ ಒಂದಾಗಿತ್ತು. ಈ ಲಾರೆಸ್ ಸ್ಪೋರ್ಟ್ ಫಾರ್ ಗುಡ್ ಫೌಂಡೇಶನ್‌ನಿಂದ ಪ್ರಶಸ್ತಿಯ ಮೊದಲ ಸಮಾರಂಭವನ್ನು 2000 ರ ಮೇ. 25 ರಂದು ಮಾಂಟೆ ಕಾರ್ಲೋದಲ್ಲಿ ನಡೆಸಲಾಗಿದೆ, ಆ ಸಂಧರ್ಭದಲ್ಲಿ ಈ ಸಭೆಯನ್ನು ಉದ್ದೇಶಿಸಿ ನೆಲ್ಸನ್ ಮಂಡೇಲಾ ಅವರು ಭಾಷಣ ಮಾಡಿದ್ದರು. ಈ ಪ್ರಶಸ್ತಿಯು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ ಹಾಗೂ ಇದನ್ನು 'ಆಸ್ಕರ್'ಗೆ ಸಮಾನವಾದ ಕ್ರೀಡಾ ಪ್ರಶಸ್ತಿ ಎಂದು ಕರೆಯಲಾಗುತ್ತದೆ. * ಈ ಪ್ರಶಸ್ತಿಯನ್ನು ಪ್ರತಿ ವರ್ಷ ವಿಭಿನ್ನ ವೈಯಕ್ತಿಕ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ. ಇಲ್ಲಿಯವರೆಗೆ ಈ ಪ್ರಶಸ್ತಿಯನ್ನು '4' ಮಹಿಳೆಯರು, '16' ಪುರುಷರಿಗೆ ನೀಡಲಾಗಿದೆ, ಹಾಗೂ '8' ತಂಡಗಳನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿಸಲಾಗಿದೆ.