Job Description: * ಪ್ರಸ್ತುತ ಈ ಬಾರಿಯ ICC ಕ್ರೀಡಾ ಸ್ಪೂರ್ತಿ ಪ್ರಶಸ್ತಿಯನ್ನು ನ್ಯೂಜಿಲ್ಯಾಂಡ್ ಕ್ರಿಕೆಟಿಗ ಡ್ಯಾರಲ್ ಮಿಚೆಲ್ ಗೆ ICC ನೀಡಿದೆ. ಈ ಹಿಂದೆ ಅಬುಧಾಬಿಯಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇವರು ಸಿಂಗಲ್ ರನ್ ಓಡಲು ನಿರಾಕರಿಸಿದ ಹಿನ್ನಲೆಯಿಂದಾಗಿ ಡ್ಯಾರಲ್ ಮಿಚೆಲ್'ಗೆ ಪ್ರಶಸ್ತಿ ನೀಡಲಾಗಿದೆ. * ಪ್ರಸ್ತುತ ವರ್ಷದ ಕ್ರೀಡಾ ಸ್ಪೂರ್ತಿ ಪ್ರಶಸ್ತಿಯನ್ನು ಈ ಹಿಂದೆ ಡೇನಿಯಲ್ ವೆಟ್ಟೋರಿ, ಬ್ರೆಂಡನ್ ಮೆಕಲಮ್ ಮತ್ತು ಕೇನ್ ವಿಲಿಯಮ್ಸನ್ ಅವರ ಪಡೆದುಕೊಂಡಿದ್ದರು. ಇದೀಗ ಡ್ಯಾರಲ್ ಮಿಚೆಲ್ ಅವರು ಈ ಪ್ರಶಸ್ತಿಯನ್ನು ಪಡೆದ 4 ನೇ ನ್ಯೂಜಿಲೆಂಡ್ ಆಟಗಾರರಾಗಿದ್ದಾರೆ. * * ಡ್ಯಾರಲ್ ಜೋಸೆಫ್ ಮಿಚೆಲ್ : ಅವರು ನ್ಯೂಜಿಲೆಂಡ್ ಕ್ರಿಕೆಟಿಗ, ಇವರು ದೇಶೀಯ ಕ್ರಿಕೆಟ್‌ನಲ್ಲಿ ಕ್ಯಾಂಟರ್ಬರಿಯನ್ನು ಪ್ರತಿನಿಧಿಸುತ್ತಾರೆ ಹಾಗೂ ರಾಷ್ಟ್ರೀಯ ತಂಡಕ್ಕಾಗಿ ಆಡುತ್ತಾರೆ. * ಇವರು 2018-19 ವರ್ಷದಲ್ಲಿ ಉತ್ತರ ಜಿಲ್ಲೆಗಳೊಂದಿಗೆ ಒಪ್ಪಂದವನ್ನು ಪಡೆದುಕೊಂಡರು. ನಂತರ 2019 ರ ಜನವರಿಯಲ್ಲಿ ಭಾರತ ವಿರುದ್ಧದ ಅವರ ಸರಣಿಗಾಗಿ ನ್ಯೂಜಿಲೆಂಡ್‌ನ ಟ್ವೆಂಟಿ 20 ಇಂಟರ್ನ್ಯಾಷನಲ್ ತಂಡದಲ್ಲಿ ಇವರನ್ನು ಸೇರಿಸಲಾಯಿತು. ಇವರು 2019 ರ ಫೆಬ್ರವರಿ. 06 ರಂದು ಭಾರತದ ವಿರುದ್ಧ ನ್ಯೂಜಿಲೆಂಡ್‌ ತಂಡಕ್ಕಾಗಿ ತಮ್ಮ T20I ಚೊಚ್ಚಲ ಪಂದ್ಯವನ್ನು ಆಡಿದರು. ಮತ್ತೇ ಮಿಚೆಲ್ ಅವರು 2021 ರ ICC ಪುರುಷರ T20 ವಿಶ್ವಕಪ್‌ಗಾಗಿ ನ್ಯೂಜಿಲೆಂಡ್‌ನ ತಂಡದಲ್ಲಿ ಸೇರಿದರು ಆಗ ಇಂಗ್ಲೆಂಡ್ ವಿರುದ್ಧದ ತಂಡದ ಸೆಮಿ-ಫೈನಲ್‌ನಲ್ಲಿ ಇವರು ಔಟಾಗದೆ 72 ರನ್ ಗಳನ್ನೂ ಕಲೆ ಹಾಕಿದ್ದರು, ಆಗ ಆ ಪಂದ್ಯವನ್ನು ನ್ಯೂಜಿಲೆಂಡ್ ತಂಡವು '5' ವಿಕೆಟ್‌ಗಳಿಂದ ಜಯಸಾಧಿಸಿತು. ಆಗ ಮಿಚೆಲ್ ಅವರು ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು.