Job Description: * ಪ್ರಸ್ತುತ ಶ್ರೀಲಂಕಾ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಕೊರತೆ ಸಮಸ್ಯೆಯ ಪರಿಹಾರಕ್ಕಾಗಿ ಭಾರತೀಯ ಮೂಲದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಿಂದ ಸುಮಾರು 40,000 ಮೆಟ್ರಿಕ್ ಟನ್ ತೈಲವನ್ನು ಖರೀದಿಸಲು ಶ್ರೀಲಂಕಾ ರಾಷ್ಟ್ರವು ನಿರ್ಧರಿಸಿದೆ. * ಇದೀಗ ಶ್ರೀಲಂಕಾ ಸರ್ಕಾರವು ತೈಲ ಖರೀದಿ ಬಗ್ಗೆ ಭಾರತ ಸರ್ಕಾರದ ಜೊತೆ ಮಾತುಕತೆ ನಡೆಸಲಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಗಮಿನಿ ಲೊಕುಗೆ ಅವರು ತಿಳಿಸಿದರು. * ಭಾರತ ಮೂಲದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ಈ ಹಿಂದೆ 2002 ರಿಂದ ಶ್ರೀಲಂಕಾದಲ್ಲಿ ಕಾರ್ಯಾಚರಿಸುತ್ತಿದೆ. * ಇದೀಗ ಭಾರತೀಯ IOCL ಕಂಪನಿಯಿಂದ ತೈಲ ಖರೀದಿಗೆ ಸಂಸತ್ತಿನಲ್ಲಿ ಒಪ್ಪಿಗೆ ಸಿಕ್ಕಿದೆ, ಈ ಹಿನ್ನಲೆಯಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ನ್ನು ತಲಾ 40,000 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಶ್ರೀಲಂಕಾ ರಾಷ್ಟ್ರ ಖರೀದಿಸಲಿದೆ. * * ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) : ಇದೊಂದು ಭಾರತೀಯ ಸರ್ಕಾರಿ ನಿಗಮವಾಗಿದೆ. ಈ ನಿಗಮವು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಲೀಕತ್ವದಲ್ಲಿದೆ, ಹಾಗೂ ಇದರ ಪ್ರಧಾನ ಕಛೇರಿಯು ನವದೆಹಲಿಯಲ್ಲಿದೆ. ಈ ಸರ್ಕಾರಿ ನಿಗಮವು 2021 ರ ಹೊತ್ತಿಗೆ ವಿಶ್ವದ ಅತಿದೊಡ್ಡ ನಿಗಮಗಳ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ 212 ನೇ ಸ್ಥಾನದಲ್ಲಿದೆ. ಹಾಗೂ 2020-21 ರ ಆರ್ಥಿಕ ವರ್ಷದಲ್ಲಿ 6.1 ಶತಕೋಟಿ ರೂ. ನಿವ್ವಳ ಲಾಭದೊಂದಿಗೆ ದೇಶದಲ್ಲೇ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ನಿಗಮವಾಗಿದೆ. * ಇಂಡಿಯನ್ ಆಯಿಲ್ ಈ ಸರ್ಕಾರಿ ನಿಗಮವು ಶ್ರೀಲಂಕಾ (ಲಂಕಾ IOC), ಮಾರಿಷಸ್ (ಇಂಡಿಯನ್ ಆಯಿಲ್ (ಮಾರಿಷಸ್) ಲಿಮಿಟೆಡ್), ಹಾಗೂ ಮಧ್ಯಪ್ರಾಚ್ಯ (IOC ಮಿಡಲ್ ಈಸ್ಟ್ FZE) ನಲ್ಲಿ ತನ್ನ ಅಂಗಸಂಸ್ಥೆಗಳನ್ನು ಹೊಂದಿದೆ. * ಈ IOCL 2017–18 ರಲ್ಲಿ 21,346 ಕೋಟಿ ರೂ. ಗಳ ದಾಖಲೆಯ ಲಾಭವನ್ನು ಗಳಿಸಿದೆ. 2020 ರ ಫೆಬ್ರವರಿಯಲ್ಲಿ ಈ ಕಂಪನಿಯು ದಿನಕ್ಕೆ 140,000 ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಲು ರಷ್ಯಾದ ತೈಲ ಕಂಪನಿ ರಾಸ್ನೆಫ್ಟ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿತು. * ಈ ನಿಗಮದ ತೈಲ ಮಾರಾಟವು 2021 ರ ಜನವರಿ. 26 ರವರೆಗೆ ದಿನಕ್ಕೆ 410,000 ಬ್ಯಾರೆಲ್‌ಗಳ ತೈಲದ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ನೋಂದಾಯಿಸಲಾಗಿತ್ತು. ಡೆಲೆಕ್, ಕತಾರ್ ಪೆಟ್ರೋಲಿಯಂ, ಸೌದಿ ಅರಾಮ್ಕೊ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಹಾಗೂ ನ್ಯಾಷನಲ್ ಇರಾನಿಯನ್ ಆಯಿಲ್ ಕಂಪನಿಗಳ ಜೊತೆಗೆ ಒಪ್ಪಂದಗಳಿಗೆ ಸಹಿ ಹಾಕಿತ್ತು, ಹಾಗೂ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದೆ.