Job Description: * ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾದ ಲಡಾಖ್'ನಲ್ಲಿ ವಾರ್ಷಿಕವಾಗಿ ನಡೆಯುವ ಸ್ಪಿಟುಕ್ ಗಸ್ಟರ್ ಹಬ್ಬಕ್ಕೆ ಅಧಿಕೃತವಾಗಿ ಚಾಲನೆಯನು ನೀಡಲಾಗಿದೆ. ಈ ಹಬ್ಬದಲ್ಲಿ ಲಡಾಖಿ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಪರಂಪರೆಯ ವಾರ್ಷಿಕ ಆಚರಣೆಯ ಹಿನ್ನಲೆಯಿಂದಾಗಿ ವರ್ಣರಂಜಿತ ಮಾಸ್ಕ್ ಡ್ಯಾನ್ಸ್ ನ್ನು ವೀಕ್ಷಣೆ ಮಾಡಲು ಸ್ಪಿಟುಕ್ ಮಠದಲ್ಲಿ ಅನೇಕ ಜನರು ಸೇರಿದ್ದರು. * ಈ ಸ್ಪಿಟುಕ್ ಮಠವು ಲೇಹ್'ನಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಲಡಾಖ ಈ ಉತ್ಸವನ್ನು ಸ್ಥಳೀಯವಾಗಿ ಚಾಮ್ಸ್ ಎಂದು ಕೆರೆಯಲಾಗುತ್ತದೆ. ಈ ಹಬ್ಬದಲ್ಲಿ ವರ್ಣರಂಜಿತ ಮಾಸ್ಕ್ ಡ್ಯಾನ್ಸ್ ಮಹಾಕಾಳ (ಗೊಂಬೋ), ಪಲ್ಡಾನ್ ಲಾಮೊ (ಶ್ರೀದೇವಿ), ಬಿಳಿ ಮಹಾಕಾಳ, ರಕ್ಷಕ ದೇವತೆಗಳ ವೇಷವನ್ನು ಧರಿಸಿ ಜನರಿಗೆ ಮನರಂಜನೆಯನ್ನು ನೀಡಲಾಗುತ್ತದೆ. ಹಾಗೂ ಮಾಸ್ಕ್ ಡ್ಯಾನ್ಸ್ ಸೆರ್ಸ್ಕಮ್‌ನೊಂದಿಗೆ ಉತ್ಸವ ಆರಂಭವಾಗಿದೆ. ಪ್ರಸ್ತುತ ಮಹಾಯಾನ ಬೌದ್ಧಧರ್ಮದ ಗೆಲುಕ್ಸ್‌ಪಾ ಪಂಥದ ಸಂಸ್ಥಾಪಕ ಜೆ ತ್ಸೊಂಗ್‌ಖಾಪಾ ಅವರು ದೊಡ್ಡ ತಂಗ್ಕಾ (ಚಿತ್ರಕಲೆ) ಹಬ್ಬದ ಸಮಯದಲ್ಲಿ ಪ್ರದರ್ಶನ ಮಾಡಿದರು. ಸುಮಾರು ಎರಡು ದಿನಗಳ ಈ ಉತ್ಸವವು ಸಮಾಜದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯವನ್ನು ತರುವ ಗುರಿಯನ್ನು ಹೊಂದಿದೆ ಎಂದು ಸ್ಪಿಟುಕ್ ಮಠದ ಚೋಕ್ಜಿ ಲಾಮಾ, ಪೂಜ್ಯ ಲೋಬ್ಜಾಂಗ್ ಲುಂಡಪ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಸನ್ಯಾಸಿಗಳು ಮುಂಚಿತವಾಗಿಯೇ ಮಾಸ್ಕ್ ಡ್ಯಾನ್ಸ್ ನ್ನು ಅಭ್ಯಾಸವನ್ನು ಮಾಡಿ ಹಬ್ಬಕ್ಕೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡುತ್ತಾರೆ. ಈ ಹಬ್ಬವು ಆರಂಭವಾಗುವ '7' ದಿನಗಳ ಮೊದಲು ಪ್ರಾರ್ಥನೆಯನ್ನು ಆರಂಭಿಸಲಾಗುತ್ತದೆ. ಈ ಹಬ್ಬ ಮುಕ್ತಾಯದ ನಂತರ ಈ ಪ್ರದೇಶದಲ್ಲಿನ ಕಠಿಣ ಚಳಿಗಾಲದ ಹವಾಮಾನವು ಬೆಚ್ಚಗಿರುತ್ತದೆ ಎಂದು ಅಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. * ಲಡಾಖ್‌ನ ವಿವಿಧ ಮಠಗಳಲ್ಲಿ ಗುಸ್ಟರ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಥಿಕ್ಸೆ, ಸ್ಪಿಟುಕ್, ಕೊರ್ಝೋಕ್ ಹಾಗೂ ಕರ್ಶಾ ಮುಂತಾದ ವಿವಿಧ ಮಠಗಳಲ್ಲಿ ಆಚರಣೆ ಮಾಡಲಾಗುತ್ತದೆ. ಗುಸ್ಟೋರ್ ಪದದ ಅರ್ಥವು ಟಿಬೆಟಿಯನ್ ಭಾಷೆಯಲ್ಲಿ ತ್ಯಾಗ ಎಂದರ್ಥ. ಲಡಾಖ್'ನ ಪ್ರದೇಶದಲ್ಲಿ ಈ ಹಬ್ಬವನ್ನು ಎರಡು ದಿನಗಳ ಕಾಲ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಈ ಹಬ್ಬವು ಸಂಗೀತ ಹಾಗೂ ಚಮ್ ನೃತ್ಯಗಳೊಂದಿಗೆ ಆಚರಣೆ ಮಾಡುತ್ತಾರೆ. * ಥಿಕ್ಸೆ ಗಸ್ಟರ್ ಹಬ್ಬ(Thikse Gustor Festival): ಥಿಕ್ಸೆ ಮಠದಲ್ಲಿ ಥಿಕ್ಸೆ ಗುಸ್ಟರ್ ಉತ್ಸವವನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ, ಇದು ಟಿಬೆಟಿಯನ್ ಕ್ಯಾಲೆಂಡರ್‌ನ 9ನೇ ತಿಂಗಳಿನ 17 ರಿಂದ 19 ನೇ ದಿನದವರೆಗೆ ಥಿಕ್ಸೆ ಗಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ. * ಕೊರ್ಜೋಕ್ ಗುಸ್ಟರ್ ಉತ್ಸವ(Korzok Gustor Festival): ಕೊರ್ಜೋಕ್ ಮೊನಾಸ್ಟರಿಯಲ್ಲಿ ಕೊರ್ಜೋಕ್ ಗುಸ್ಟರ್ ಉತ್ಸವವನ್ನು ಜುಲೈ ತಿಂಗಳಿನಲ್ಲಿ ಆಚರಿಸಲಾಗುತ್ತದೆ.ಈ ಹಬ್ಬವನ್ನು ಚಾಂಗ್-ಪಾ, ಟಿಬೆಟಿಯನ್ ಪ್ರಸ್ಥಭೂಮಿ ಅಲೆಮಾರಿ ಕುರುಬರು ಆಚರಿಸುತ್ತಾರೆ. * * ಕರ್ಷ ಗುಸ್ಟರ್ ಹಬ್ಬ(Karsha Gustor Festival) : ಟಿಬೆಟಿಯನ್ ಕ್ಯಾಲೆಂಡರ್‌ನ ಪ್ರಕಾರ 6ನೇ ಟಿಬೆಟಿಯನ್ ತಿಂಗಳ ಜುಲೈ ನ 27 ಮತ್ತು 28 ನೇ ದಿನದಂದು ಕರ್ಶಾ ಮಠದಲ್ಲಿ ಕರ್ಷ ಗುಸ್ಟರ್ ಉತ್ಸವವನ್ನು ಆಚರಣೆ ಮಾಡಲಾಗುತ್ತದೆ. * * ಸ್ಟೋನ್ಡೇ ಗಸ್ಟರ್ ಉತ್ಸವ(Stonday Gustor Festival) : ಸ್ಟೋಂಡೇ ಮೊನಾಸ್ಟರಿಯಲ್ಲಿ ಸ್ಟೊಂಡೆ ಗಸ್ಟರ್ ಉತ್ಸವವನ್ನು ಆಚರಿಸಲಾಗುತ್ತದೆ.