Job Description: * ಪ್ರಸ್ತುತ ದೇಶದಾದ್ಯಂತದ ಪ್ರಯಾಣಕ್ಕೆ ಅತ್ಯುತ್ತಮವಾಗಿರುವ ವಿಶ್ವದ ಅಗ್ರ 10 ದೇಶಗಳ ಸೂಚ್ಯಂಕ ಪಟ್ಟಿಯಲ್ಲಿ ಭಾರತ ದೇಶ ಸ್ಥಾನಪಡೆದಿದೆ. ಪ್ರಸ್ತುತ ಜಗತ್ತಿನ 118 ದೇಶಗಳ ಸೂಚ್ಯಂಕ ಸಮೀಕ್ಷೆಯಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು ಎಂದು ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಸ್ಥೆ ತಿಳಿಸಿದೆ. * ಪ್ರಸ್ತುತ ರಸ್ತೆ ಮೂಲಕ ಪ್ರವಾಸ ನಡೆಸಲು ಯೋಜನೆ ಹಾಕಿಕೊಂಡವರಿಗೆ ಅಗತ್ಯವಾಗಿರುವ ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ, ವನ್ಯಜೀವಿಗಳು, ಪ್ರಾಕೃತಿಕ ಭೂದೃಶ್ಯಗಳ ವ್ಯಾಪ್ತಿ, ಕಾಸ್ಮೊಪೊಲಿಟನ್ ನಗರಗಳ ಸಂಖ್ಯೆ, ರಸ್ತೆಗಳ ಗುಣಮಟ್ಟ, ಇಂಧನ ದರ, ಪ್ರವಾಸಿಗರ ವಸತಿ ವ್ಯವಸ್ಥೆಯ ಬಾಡಿಗೆ ದರ ಇನ್ನು ಹೀಗೆ ಹಲವು ಅಂಶಗಳ ಆಧಾರದ ಮೇಲೆ ಈ ಸೂಚ್ಯಂಕವನ್ನು ಸಿದ್ದಪಡಿಸಲಾಗಿದೆ. * ಇದೀಗ ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಸ್ಥೆ ತಯಾರಿಸಿರುವ ಈ ಪಟ್ಟಿಯಲ್ಲಿ ಅಮೇರಿಕ ದೇಶವು ಅಗ್ರಸ್ಥಾನವನ್ನು ಪಡೆದಿದೆ, ನಂತರದ ಸ್ಥಾನಗಳಲ್ಲಿ ಮೆಕ್ಸಿಕೊ, ಕೆನಡಾ ಹಾಗೂ ಮಲೇಶ್ಯಾ ದೇಶಗಳಿವೆ. ಭಾರತ ದೇಶವು ಕೂಡ ಅಗ್ರ 10 ನೇ ಸ್ಥಾನಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. * ಪ್ರಸ್ತುತ ಆಯಾ ದೇಶದಲ್ಲಿರುವ ಆಕರ್ಷಣೀಯ ತಾಣಗಳು, ಭೂಗಾತ್ರ, ಕಶೇರುಕ ಜಾತಿಗಳ ಸಂಖ್ಯೆ, ಬೀಚ್, ಗಾರ್ಡನ್'ಗಳ ಪ್ರಾಕೃತಿಕ ಸವಲತ್ತುಗಳು, ಮಳೆಕಾಡುಗಳು, ಅರಣ್ಯಗಳು, ಬೆಟ್ಟಗುಡ್ಡಗಳು, ಮರುಭೂಮಿಗಳು, ಹಿಮನದಿಗಳು, ಕಾಡುಗಳು ಮತ್ತು ಅತ್ಯುತ್ತಮ ನಗರಗಳ ಸಂಖ್ಯೆಯನ್ನು ಆಧರಿಸಿ ಈ ಸೂಚ್ಯಂಕವನ್ನು ತಯಾರಿಸಲಾಗಿದೆ. * ಪ್ರಸ್ತುತ ಭಾರತದಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪ್ರೇಕ್ಷಣೀಯ ಸ್ಥಳದ ಪಟ್ಟಿಯಲ್ಲಿ ಸರಿ ಸುಮಾರು 40 ಸ್ಥಳಗಳಿವೆ. ಹಾಗೂ 1,900 ವಿಧದ ತಳಿಗಳ ಜೀವಿಗಳಿವೆ ಅಲ್ಲದೇ ವಿಶ್ವದ 100 ಅತ್ಯುತ್ತಮ ಮೆಟ್ರೋ ನಗರಗಳ ಪಟ್ಟಿಯಲ್ಲಿರುವ ಭಾರತದ 'ಮುಂಬೈ ಹಾಗೂ ದಿಲ್ಲಿ' ನಗರಗಳಿವೆ. ಇವೆಲ್ಲದರ ಜೊತೆಗೆ ಭಾರತದ ರಸ್ತೆಗಳ ಗುಣಮಟ್ಟ, ಅಲ್ಲಿನ ಇಂಧನ ದರ ಹಾಗೂ ಅಲ್ಲಿನ ವಾಸ್ತವ್ಯಕ್ಕೆ ಸರಾಸರಿ ವಾರದ ಬಾಡಿಗೆ ದರ 13,000 ರೂ.ಗಿಂತ ಕಡಿಮೆಯಾಗಿರುವುದು ಭಾರತ ವಿಶ್ವದ ಅಗ್ರ 10 ದೇಶಗಳ ಸಾಲಿನಲ್ಲಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ. * ಪ್ರಯಾಣ ಹಾಗೂ ಪ್ರವಾಸೋದ್ಯಮ ಸ್ಪರ್ಧಾತ್ಮಕತೆಯ ವರದಿಯನ್ನು ಈ ಹಿಂದೆ 2007 ರಲ್ಲಿ ವರ್ಲ್ಡ್ ಎಕನಾಮಿಕ್ ಫೋರಮ್ ಪ್ರಕಟಿಸಿದೆ. ಈ 2007 ರ ವರದಿಯು ಪ್ರಕಾರ 124 ಪ್ರಮುಖ ಹಾಗೂ ಉದಯೋನ್ಮುಖ ಆರ್ಥಿಕತೆಗಳನ್ನು ಒಳಗೊಂಡಿವೆ. ಮತ್ತೇ 2008 ರ ವರದಿಯು ಪ್ರಕಾರ 130 ದೇಶಗಳನ್ನು ಒಳಗೊಂಡಿದೆ. ಹಾಗೂ 2009 ರ ವರದಿಯು ಪ್ರಕಾರ 133 ದೇಶಗಳು ಹಾಗೂ 2011 ರ ವರದಿಯು ಪ್ರಕಾರ 139 ದೇಶಗಳಿಗೆ ವಿಸ್ತರಿಸಲಾಗಿದೆ. * ಪ್ರಯಾಣ ಸೂಚ್ಯಂಕವು ಪ್ರವಾಸಿ ತಾಣವಾಗಿ ದೇಶದ ಆಕರ್ಷಣೆಯಗಿಂತ ಅಧಿಕವಾಗಿ ವೈಯಕ್ತಿಕ ದೇಶಗಳ ಪ್ರವಾಸ ಹಾಗೂ ಪ್ರವಾಸೋದ್ಯಮ ಉದ್ಯಮದಲ್ಲಿ ವ್ಯಾಪಾರವನ್ನು ವೃದ್ಧಿಪಡಿಸಲು ಅಗ್ಯತವಿರುವ ಅಂಶಗಳ ಮಾಪನವಾಗಿದೆ. ಪ್ರಯಾಣ ಹಾಗೂ ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದ ಪ್ರಕಾರ ಆಯ್ದ ರಾಷ್ಟ್ರಗಳನ್ನು ವರದಿಯು ಸಂಗ್ರಹಿಸಲಾಗುತ್ತದೆ, ಅಲ್ಲದೇ ಉಪಸೂಚ್ಯಂಕದಲ್ಲಿ ನಿರ್ದಿಷ್ಟ ದೇಶದ ಕಾರ್ಯಕ್ಷಮತೆಯನ್ನು 1 ರಿಂದ 6 ರವರೆಗೆ ಸ್ಕೋರ್ ನೀಡಲಾಗುತ್ತದೆ. ಒಟ್ಟಾರೆ ಸೂಚ್ಯಂಕವು ಮುಖ್ಯವಾಗಿ ಮೂರು ಉಪಸೂಚ್ಯಂಕಗಳಿಂದ ರಚಿಸಲಾಗಿದೆ. ಅವುಗಳು : 1) ನಿಯಂತ್ರಕ ಚೌಕಟ್ಟು, 2) ವ್ಯಾಪಾರ ಪರಿಸರ ಮತ್ತು ಮೂಲಸೌಕರ್ಯ, 3) ಮಾನವ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಸಂಪನ್ಮೂಲಗಳು. * ಪ್ರವಾಸೋದ್ಯಮ ಮಂಡಳಿಯು ಕೊನೆಯ ಪ್ರಯಾಣ ಹಾಗೂ ಪ್ರವಾಸೋದ್ಯಮ ಸ್ಪರ್ಧಾತ್ಮಕ ವರದಿಯನ್ನು 2019 ರಲ್ಲಿ ಪ್ರಕಟಿಸಲಾಗಿದೆ.