Job Description: * ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022 ರ ಫೆಬ್ರವರಿ. 1 ರಂದು ಕೇಂದ್ರ ಬಜೆಟ್ 2022-23 ನ್ನು ಮಂಡಿಸಿದರು. ಬಜೆಟ್ ಆರ್ಥಿಕ ಬೆಳವಣಿಗೆ, ಇಂಧನ ಪರಿವರ್ತನೆ, ಡಿಜಿಟಲ್ ಆರ್ಥಿಕತೆಗೆ ಉತ್ತೇಜನ, ಹವಾಮಾನ ಕ್ರಮ, ತಂತ್ರಜ್ಞಾನ ಅಭಿವೃದ್ಧಿ, ಖಾಸಗಿ ಹೂಡಿಕೆಯಲ್ಲಿ ಜನಸಂದಣಿಯನ್ನು ಕೇಂದ್ರೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * * ಪ್ರಸ್ತುತ ಪ್ರಧಾನ ಮಂತ್ರಿ ಗತಿ ಶಕ್ತಿ : 20,000 ಕೋಟಿ ರೂ. ಗಳ ಯೋಜನೆಯನ್ನು 25,000 ಕಿ.ಮೀ.ಗೆ ವಿಸ್ತರಿಸಲಾಗುವುದು. ಹಾಗೂ ಮುಂಬರುವ ಮೂರು ವರ್ಷಗಳಲ್ಲಿ 100 PM ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. * ರಾಜ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುವದು, ಹಾಗೂ ಈ ಸಾಲವು ಬಡ್ಡಿರಹಿತ ಸಾಲಗಳಾಗಿವೆ. ಪ್ರಧಾನ ಮಂತ್ರಿ ಗತಿ ಶಕ್ತಿ ಹೂಡಿಕೆಗಳು ಹಾಗೂ ಇನ್ನಿತರ ಉತ್ಪಾದಕ ಹೂಡಿಕೆಗಳಿಗೆ ರಾಜ್ಯಗಳು ಈ ಸಾಲವನ್ನು ಬಳಕೆ ಮಾಡಿಕೊಳ್ಳಬಹುದು. * ಮಲ್ಟಿ ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ಪಿಪಿಪಿ ಮಾದರಿಯ ಮೂಲಕ ನಾಲ್ಕು ಸ್ಥಳಗಳಲ್ಲಿ ಆರಂಬಿಸಲಾಗುವದು. * * PM eVIDYA : ಇದು ಒನ್ ಕ್ಲಾಸ್ ಒನ್ ಟಿವಿ ಚಾನೆಲ್ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಪ್ರಸ್ತುತ ಈ ಟಿವಿ ಚಾನೆಲ್ ಕಾರ್ಯಕ್ರಮವು 1 ರಿಂದ 12ನೇ ತರಗತಿವರೆಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುವದು ಎಂದು ತಿಳಿಸಲಾಗಿದೆ. * MSP (Minimum Support Prices) ಕನಿಷ್ಠ ಬೆಂಬಲ ಬೆಲೆಯ ನೇರ ಪಾವತಿಯ ಸಲುವಾಗಿ ಸಚಿವರು 2.37 ಲಕ್ಷ ಕೋಟಿ ರೂ.ಗಳು. ಈ ಹಿಂದೆ 2021-22 ರಲ್ಲಿ ಸುಮಾರು 1208 ಲಕ್ಷ ಟನ್‌ಗಳಷ್ಟು ಗೋಧಿ, ಹಾಗೂ ಸುಮಾರು 163 ಲಕ್ಷ ಟನ್‌ಗಳಷ್ಟು ಭತ್ತವನ್ನು ಸಂಗ್ರಹಿಸಲಾಗಿದೆ. * ಹೆಚ್ಚಿನ ಶಕ್ತಿಯ ದಕ್ಷತೆಯ ಮಾಡ್ಯೂಲ್‌ನ ತಯಾರಿಕೆಗಳಿಗಾಗಿ PLI ಗಾಗಿ ರೂ. 19,500 ನಿಗದಿಪಡಿಸಲಾಗಿದೆ. ಇದನ್ನು 2030 ರ ವೇಳೆಗೆ ಭಾರತವು ತನ್ನ ಸೌರ ಶಕ್ತಿಯ ಗುರಿ 280 GW ನ್ನು ತಲುಪಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ಸುಮಾರು 400 ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗುವದು ಎಂದು ತಿಳಿಸಿದ್ದಾರೆ. * ಸದ್ಯ ಮೈಕ್ರೋ ಹಾಗೂ ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ನ್ನು ನವೀಕರಿಸಲಾಗುತ್ತದೆ. ಹಾಗೂ 2 ಲಕ್ಷ ಕೋಟಿ ಹೆಚ್ಚುವರಿ ಸಾಲ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 2023 ರ ಮಾರ್ಚ್ ವರೆಗೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ. * ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸುಮಾರು 60,000 ಮನೆಗಳನ್ನು ಫಲಾನುಭವಿಗಳಾಗಿ ನೀಡಲಾಗುವದು. ಅದಕ್ಕಾಗಿ 48,000 ಕೋಟಿ ಮೀಸಲಿಡಲಾಗಿದೆ ಎಂದಿದ್ದಾರೆ. * ಆರ್ಥಿಕ ಸೇರ್ಪಡೆಗಾಗಿ ಸುಮಾರು 1.5 ಲಕ್ಷ ಅಂಚೆ ಕಚೇರಿಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗಳು ಬರಲಿವೆ ಎಂದಿದ್ದಾರೆ. * * ತೆರಿಗೆ(TAX) : - ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು 10% ರಿಂದ 14% ಕ್ಕೆ ಏರಿಕೆಮಾಡಲಾಗುವದು. ಇದರಿಂದಾಗಿ ಸಾಮಾಜಿಕ ಭದ್ರತೆಯ ಪ್ರಯೋಜನಗಳಿಗೆ ಸಹಾಯವಾಗಲಿದೆ. - ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಗೆ 30% ತೆರಿಗೆ ವಿಧಿಸಲಾಗುತ್ತದೆ. - ಕಾರ್ಪೊರೇಟ್ ಸರ್ಚಾರ್ಜ್ 12% ರಿಂದ 7% ಕ್ಕೆ ಇಳಿಕೆ ಮಾಡಲಾಗುವದು. - ವಜ್ರದ ಮೇಲಿನ ಕಸ್ಟಮ್ಸ್ ಸುಂಕ 5% ಕ್ಕೆ ಇಳಿಕೆ ಮಾಡಲಾಗುವದು. - ದೀರ್ಘಾವಧಿಯ ಬಂಡವಾಳ ಲಾಭಗಳಿಗೆ 15% ತೆರಿಗೆ ವಿಧಿಸಲಾಗುವುದು.