Job Description: * ಪ್ರಸ್ತುತ ಟಾಟಾ ಸ್ಟೀಲ್ ಚೆಸ್‌ ಟೂರ್ನಿ ಚಾಲೆಂಜರ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಎರಿಗೈಸಿ. * ಭಾರತೀಯ ಅರ್ಜುನ್ ಎರಿಗೈಸಿ ಅವರು 12 ನೇ ಗೇಮ್‌ನಲ್ಲಿ ಜೆಕ್‌ ಗಣರಾಜ್ಯದ ಥಾಯ್‌ ಡೈ ವ್ಯಾನ್‌ ಗುಯೆನ್‌ ಎದುರು ಡ್ರಾ ಸಾಧಿಸಿಕೊಂಡರು. ಜಂಟಿಯಾಗಿ 2 ನೇ ಸ್ಥಾನ ಗಳಿಸಿದ ಜೆಕ್ ಆಟಗಾರನ ಜೊತೆ ಅರ್ಜುನ್‌ ಅವರು 15 ನಡೆಗಳಲ್ಲಿ ಡ್ರಾ ಮಾಡಿಕೊಳ್ಳಲು ಸಮ್ಮತಿನೀಡಿದರು. ಅರ್ಜುನ್ ಅವರು ಒಟ್ಟಾರೆ 9.5 ಪಾಯಿಂಟ್ಸ್ ಗಳನ್ನು ಕಲೆಹಾಕಿದ್ದಾರೆ. ಗುಯೆನ್ ಹಾಗೂ ಡೆನ್ಮಾರ್ಕ್‌ನ ಜೋನಸ್‌ ಬುಹ್ಲ್ ಜೆರೆ ಅವರು 08 ಪಾಯಿಂಟ್ಸ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. * ಭಾರತೀಯ ಅರ್ಜುನ್ ಎರಿಗೈಸಿ ಅವರು 12ನೇ ಗೇಮ್‌ನಲ್ಲಿ ಇದುವರೆಗೆ '7' ಗೇಮ್‌ಗಳನ್ನು ಗೆದ್ದುಕೊಂಡು, '5' ಗೇಮ್'ನಲ್ಲಿ ಡ್ರಾ ಸಾಧಿಸಿದ್ದಾರೆ. ಈ ಮೂಲಕ ಪ್ರಶಸ್ತಿ ಜಯಿಸಿ ಮುಂದಿನ ವರ್ಷದ ಟಾಟಾ ಸ್ಟೀಲ್‌ ಮಾಸ್ಟರ್ಸ್ ಗುಂಪಿಗೆ ಅರ್ಹತೆ ಪಡೆದುಕೊಂಡಿದ್ದಾರೆ. * ಭಾರತದ ಮೊತ್ತೊಬ್ಬ ಚೆಸ್ ಆಟಗಾರ ಸೂರ್ಯಶೇಖರ್ ಗಂಗೂಲಿ ಅವರು 5.5 ಪಾಯಿಂಟ್ ಗಳನ್ನು ಕಲೆಹಾಕಿ ಇದೀಗ 9 ನೇ ಸ್ಥಾನದಲ್ಲಿದ್ದಾರೆ. * ಪ್ರಸ್ತುತ ಅರ್ಜುನ್ ಅವರು ಈ ಟೂರ್ನಿಯ ಚಾಲೆಂಜರ್ಸ್ ವಿಭಾಗದಲ್ಲಿ ಗೆದ್ದ ಭಾರತದ 4 ನೇ ಆಟಗಾರರಾಗಿದ್ದಾರೆ. ಈ ಮೊದಲಿನ ಆಟಗಾರರು ಪೆಂಟಾಲ ಹರಿಕೃಷ್ಣ, ಬಿ.ಅದಿಬನ್‌, ವಿದಿತ್ ಗುಜರಾತಿ ಇವರು ಟೂರ್ನಿಯ ಚಾಲೆಂಜರ್ಸ್ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಭಾರತೀಯ ಅರ್ಜುನ್ ಅವರಿಗೆ ಗ್ರ್ಯಾಂಡ್‌ಮಾಸ್ಟರ್‌ ಶ್ರೀನಾಥ್ ನಾರಾಯಣನ್ ಅವರು ತರಬೇತಿಯನ್ನು ನೀಡಿದ್ದಾರೆ, ಹಾಗೂ ವಿಶ್ವನಾಥನ್ ಆನಂದ್ ಅವರು ಮಾರ್ಗದರ್ಶನವನ್ನು ನೀಡಿದ್ದಾರೆ. * ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಇಟಲಿಯ ಫ್ಯಾಬಿಯಾನೊ ಕಾರುವಾನ ಎದುರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿಕೊಂಡಿದ್ದಾರೆ. ಇದು ಇವರಿಗೆ ಲಭಿಸಿರುವ 8 ನೇ ಪ್ರಶಸ್ತಿಯಾಗಿದೆ. * ಭಾರತದ ವಿದಿತ್ ಗುಜರಾತಿ ಅವರು ಪಂದ್ಯದ 12 ನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಖರಿಯಾರ್‌ ಮಮೆದ್ಯಾರೊವ್ ವಿರುದ್ಧ ಸೋಲು ಕಂಡಿದ್ದಾರೆ. ಇದೀಗ ವಿದಿತ್ ಗುಜರಾತಿ ಅವರು ಭಾರತದ ಆಟಗಾರ ಪಾಯಿಂಟ್ಸ್ ಪಟ್ಟಿಯಲ್ಲಿ ಇದೀಗ 6 ನೇ ಸ್ಥಾನದಲ್ಲಿದ್ದಾರೆ. * ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022 ವಿಜೆಕೆ ಆನ್ ಜಿಎ 'ನಲ್ಲಿ ನಡೆಯುವ ವಾರ್ಷಿಕ ಚೆಸ್ ಪಂದ್ಯಾವಳಿಯ 84 ನೇ ಆವೃತ್ತಿಯಾಗಿದೆ.ಇತ್ತೀಚಿಗೆ ಇದನ್ನು ನೆದರ್ಲ್ಯಾಂಡ್ಸ್‌ನಲ್ಲಿ 2022 ರ 14 ಜನವರಿಯಿಂದ 30 ಜನವರಿರವರೆಗೆ ನಡೆಸಲಾಗಿದೆ. ನಾರ್ವೇಜಿಯನ್ GM ಮ್ಯಾಗ್ನಸ್ ಕಾರ್ಲ್ಸೆನ್ '6' ಗೇಮ್ ನಲ್ಲಿ ಜಯಿಸಿ ಹಾಗೂ 7 ಡ್ರಾಗಳೊಂದಿಗೆ ಮಾಸ್ಟರ್ಸ್ ವಿಭಾಗದಲ್ಲಿ 9.5/13 ಗಳಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ 8 ನೇ ಬಾರಿಗೆ ಪಂದ್ಯಾವಳಿಯನ್ನು ಗೆದ್ದು ಬೀಗಿದ್ದಾರೆ. * ಪ್ರಸ್ತುತ ಭಾರತದ GM ಅರ್ಜುನ್ ಎರಿಗೈಸಿ ಚಾಲೆಂಜರ್ಸ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿ, 10.5/13 ಅಂಕಗಳೊಂದಿಗೆ ಗೆದ್ದ ಬೀಗಿದ್ದಾರೆ.