Job Description: * ಪ್ರಸ್ತುತ ಕೇಂದ್ರ ಏಷ್ಯಾ ಭಾಗದ ರಾಷ್ಟ್ರಗಳ ನಡುವೆ ಮುಂದಿನ '30' ವರ್ಷಗಳವರೆಗೆ ಪ್ರಾದೇಶಿಕ ಸಹಕಾರ ಹಾಗೂ ಸಮಗ್ರ ಸಹಭಾಗಿತ್ವಕ್ಕಾಗಿ ಬಾಂಧವ್ಯವನ್ನು ಬಲಿಷ್ಠಗೊಳಿಸಿಕೊಳ್ಳುವ ಅಗತ್ಯ ಈಗ ಒದಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. * ಇತ್ತೀಚಿಗೆ ಜನವರಿ. 25 ರಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರು ವರ್ಚುವಲ್ ಸಭೆ ಮೂಲಕ ಕೇಂದ್ರ ಏಷ್ಯಗಳ ರಾಷ್ಟ್ರಗಳ ಜೊತೆ 500 ಮಿಲಿಯನ್ ಡಾಲರ್ ನೆರವನ್ನು ಪ್ರಾದೇಶಿಕ ಮತ್ತು ವ್ಯವಹಾರಿಕ ಬಲವರ್ದನೆಗೆ ಘೋಷಣೆ ಮಾಡಿದ್ದಾರೆ. ಇದೀಗ ಭಾರತವು ಕೂಡ ಗಣರಾಜ್ಯೋತ್ಸವದ ನಂತರದ ದಿನವೇ ಕೇಂದ್ರ ಏಷ್ಯಾ ಭಾಗದ '5' ದೇಶಗಳ ನಡುವೆ ವರ್ಚುವಲ್ ಸಭೆಯನ್ನು ನಡೆಸಿದೆ. * ಭಾರತ ಆತಿಥೇಯ ವಹಿಸಿಕೊಂಡಿರುವ ವರ್ಚುವಲ್ ಶೃಂಗ ಸಭೆಯಲ್ಲಿ ಭಾಗಿಯಾಗಿರುವ ದೇಶಗಳು ಕಝಕಿಸ್ತಾನದ ಖಾಸೀಮ್-ಜೋಮಾರ್ಟ್ ಟೋಕಾಯೆವ್, ಉಜ್ಬೇಕಿಸ್ತಾನದ ಶಾವ್ಕತ್ ಮಿರ್ಜಿಯೊಯೆವ್, ತಜಿಕಿಸ್ತಾನದ ಎಮೋಮಾಲಿ ರಹಮಾನ್, ತುರ್ಕಮೆನಿಸ್ತಾನದ ಗುರ್ಬಂಗುಲಿ ಬರ್ಡಿಮುಹಮೆಡೋವ್ ಮತ್ತು ಕಿರ್ಗ್‍ಮೆನಿಸ್ತಾನದ ಸದಿರ್ ಜಪರೋವ್ ಈ ಎಲ್ಲ ನಾಯಕರು ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. * ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಈ ಶೃಂಗ ಸಭೆಯಲ್ಲಿ, ಮೋದಿ ಅವರು ಆಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದರು. ಸ್ಥಳೀಯ ಭದ್ರತೆ ಹಾಗೂ ಸ್ಥಿರತೆಗಾಗಿ ಪರಸ್ಪರ ಸಹಕಾರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ನಾವೆಲ್ಲರೂ ಪ್ರಾದೇಶಿಕ ಭದ್ರತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದೇವೆ ಎಂದು ಈ ಶೃಂಗ ಸಭೆಯಲ್ಲಿ ತಿಳಿಸಿದರು. * ಸದ್ಯ ಭಾರತೀಯ ಪ್ರಧಾನಿ ಮೋದಿ ಅವರು ಭಾರತದ ದೃಷ್ಠಿಕೋನದಲ್ಲಿ ನೆರೆಯ ದೇಶಗಳ ಜೊತೆಗಿನ ಬಾಂಧವ್ಯವನ್ನು ಉತ್ತಮವಾಗಿಡುವುದು ಹಾಗೂ ಅಲ್ಲಿನ ಸ್ಥಿರತೆಗೆ ಸಹಕಾರ ನೀಡುವ ನೀತಿಯನ್ನು ಪಾಲನೆ ಮಾಡುತ್ತಿದ್ದೇವೆ ಎಂದಿದ್ದಾರೆ. ನೆರೆಯ ದೇಶಗಳು ಪರಸ್ಪರ ಸಹಕಾರದ ವಿಷಯದಲ್ಲಿ ಸ್ಪಷ್ಟ ರೂಪುರೇಶೆ ಸಿದ್ಧಪಡಿಸಬೇಕು. ಜೊತೆಗೆ ವಿವಿಧ ಚರ್ಚೆಯ ನಂತರ ಸೌಹಾರ್ದತೆಗೆ ಸ್ಪಷ್ಟ ಚೌಕಟ್ಟು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು. * ಇದೀಗ ಈ ಶೃಂಗಸಭೆ ಸಾಂಕೇತಿಕವಾಗಿದೆ, ಕೇಂದ್ರ ಏಷ್ಯಾ ದೇಶಗಳ ಬದ್ಧತೆ ಪಾಲುದಾರಿಕೆಗೆ ಈ ಸಭೆ ನಾಂದಿ ಹಾಡಿದೆ ಎಂದು ತಿಳಿಸಿದ್ದಾರೆ. ಈ ಶೃಂಗದಲ್ಲಿ ಪಾಲ್ಗೊಂಡಿರುವ ರಾಷ್ಟ್ರಗಳ ಮುಖಂಡರು ಭಾರತೀಯ ಪ್ರಧಾನಿ ಮೋದಿ ಅವರ ಅಭಿಪ್ರಾಯಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.