Job Description: * ಪ್ರಸ್ತುತ ಆಸ್ಟ್ರೇಲಿಯಾದ ಕ್ರಿಕೆಟಿಗರಾದ 'ಡಾರ್ಸಿ ಬ್ರೌನ್'(Darcie Brown)ಅವರನ್ನು ವರ್ಷದ ಯುವ ಕ್ರಿಕೆಟಿಗ(Young Cricketer) ಎಂದು ಬೆಟ್ಟಿ ವಿಲ್ಸನ್ ಹೆಸರಿಸಿದೆ. * ಕ್ರಿಕೆಟರ್ಸ್ ಅಸೋಸಿಯೇಷನ್ (CA) ಹಾಗೂ ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ACA) ಪೀರ್-ವೋಟ್ ದೇಶೀಯ ಹಾಗೂ ವರ್ಷದ ಯುವ ಕ್ರಿಕೆಟಿಗ ಪ್ರಶಸ್ತಿಗಳ ವಿಜೇತರ ಹೆಸರನ್ನು ಘೋಷಣೆ ಮಾಡಿದೆ. * 18 ವರ್ಷ ವಯಸ್ಸಿನ ಡಾರ್ಸಿ ಬ್ರೌನ್ ಕ್ರಿಕೆಟ್‌ನಲ್ಲಿ ಅತ್ಯಂತ ರೋಮಾಂಚಕಾರಿ ವೇಗದ ಬೌಲಿಂಗ್ ಪ್ರತಿಭೆಯಾಗಿ ಮಿಂಚಿದ್ದಾರೆ. ಡಾರ್ಸಿ ಬ್ರೌನ್ ಅವರು 2020 ರ ಅಕ್ಟೋಬರ್'ನಲ್ಲಿ ಮಹಿಳೆಯರ ಬಿಗ್ ಬ್ಯಾಷ್ ಲೀಗ್, 06 ಹಬ್ ಸಮಯದಲ್ಲಿ ತನ್ನ ಹೈಸ್ಕೂಲ್ ಪೂರ್ಣಗೊಳಿಸಿದ್ದಾರೆ. ಇವರು ಮೊದಲ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ ಈ ಹಿನ್ನಲೆಯಿಂದಾಗಿ ಇವರನ್ನು ಭವಿಷ್ಯದ ತಾರೆ ಎಂದು ಘೋಷಣೆ ಮಾಡಿದ್ದಾರೆ. * ಪುರುಷರ ವಿಭಾಗದಲ್ಲಿ ಟಿಮ್ ವಾರ್ಡ್ ಬ್ರಾಡ್ಮನ್ ಅವರನ್ನು ವರ್ಷದ ಯುವ ಕ್ರಿಕೆಟಿಗ ಎಂದು ಹೆಸರಿಸಲಾಗಿದೆ. ಈ ಪ್ರಶಸ್ತಿಯು ಅವರ ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಕ್ರಿಕೆಟ್‌'ನಲ್ಲಿ ತೋರಿರುವ ಅತ್ಯುತ್ತಮ ಪ್ರದರ್ಶನ ಶಕ್ತಿಗೆ ಸಾಕ್ಷಿಯಾಗಿದೆ. ಸದ್ಯ ಇವರು ಸಿಡ್ನಿ ಪ್ರೀಮಿಯರ್ ಕ್ರಿಕೆಟ್ ಕ್ಲಬ್ ಪರಮಟ್ಟಾ ಪರವಾಗಿ ಆಡುತ್ತಿರುವ ಕ್ರಿಕೆಟಿಗ ಆಗಿದ್ದಾರೆ. ಕಳೆದ ವರ್ಷ ಅಂದರೆ 2021 ರ ಏಪ್ರಿಲ್ ನಲ್ಲಿ ಮಾರ್ಷ್ ಶೆಫೀಲ್ಡ್ ಶೀಲ್ಡ್‌ನಲ್ಲಿ ವಾರ್ಡ್‌ನ '6' ಪಂದ್ಯಗಳಲ್ಲಿ 46 ರ ಸರಾಸರಿಯಲ್ಲಿ ಸುಮಾರು 506 ರನ್‌ಗಳನ್ನು ಕಲೆಹಾಕಿ ಡ್ರಾ ಮಾಡಿಕೊಂಡಿವೆ, ಈ ಪಂದ್ಯಗಳಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ ಮೊದಲ ಶತಕ ಹಾಗೂ '3' ಅರ್ಧ ಶತಕಗಳು ಬಾರಿಸಿದ್ದಾರೆ. * ಬೆಟ್ಟಿ ರೆಬೆಕಾ ವಿಲ್ಸನ್: ಇವರು ಶ್ರೇಷ್ಠ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಅವರು ಈ ಹಿಂದೆ 1947-48 ಹಾಗೂ 1957-58 ರ ನಡುವೆ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಬೆಟ್ಟಿ ರೆಬೆಕಾ ವಿಲ್ಸನ್ ಅವರು ಉತ್ತಮ ಬಲಗೈ ಬ್ಯಾಟಿಂಗ್ ಹಾಗೂ ಉತ್ತಮ ಆಫ್ ಸ್ಪಿನ್ ಬೌಲರ್ ಜೊತೆಗೆ ಅತ್ಯುತ್ತಮ ಫೀಲ್ಡರ್ ಆಗಿದ್ದರು. * ಈ ಹಿಂದೆ 1948 ರಲ್ಲಿ 2 ನೇ ಮಹಾಯುದ್ಧವು ಬೆಟ್ಟಿ ರೆಬೆಕಾ ವಿಲ್ಸನ್ ಅವರ ಟೆಸ್ಟ್ ಪಂದ್ಯಗಳನ್ನು ವಿಳಂಬಗೊಳಿಸಿತು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಇವರು '90' ರನ್ ಕಲೆಹಾಕಿದ್ದರು. ಹಾಗೂ 1949 ರಲ್ಲಿ ತನ್ನ 2 ನೇ ಟೆಸ್ಟ್‌ ಪಂದ್ಯದಲ್ಲಿ, ಇಂಗ್ಲೆಂಡ್ ವಿರುದ್ಧ '111' ರನ್'ಗಳನ್ನೂ ಕಲೆಹಾಕಿದ್ದರು, ಇವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಶತಕ ಬಾರಿಸಿದ ಮೊದಲ ಆಸ್ಟ್ರೇಲಿಯನ್ ಮಹಿಳೆಯಾಗಿದ್ದಾರೆ. * ಬೆಟ್ಟಿ ರೆಬೆಕಾ ವಿಲ್ಸನ್ ತಮ್ಮ ವೃತ್ತಿಜೀವನದಲ್ಲಿ ಆಡಿರುವ 11 ಟೆಸ್ಟ್ ಪಂದ್ಯಗಳಲ್ಲಿ 57.46 ಸರಾಸರಿಯಲ್ಲಿ 862 ರನ್ ಗಳನ್ನೂ ಕಲೆಹಾಕಿದ್ದಾರೆ, ಹಾಗೂ 68 ವಿಕೆಟ್ ಗಳನ್ನೂ ಪಡೆದಿದ್ದಾರೆ. * ಬೆಟ್ಟಿ ರೆಬೆಕಾ ವಿಲ್ಸನ್ ಅವರು 1985 ರಲ್ಲಿ, ಆಸ್ಟ್ರೇಲಿಯಾದ ಸ್ಪೋರ್ಟಿಂಗ್ ಹಾಲ್ ಆಫ್ ಫೇಮ್‌ಗೆ ಸೇರಿರುವ ಮೊದಲ ಮಹಿಳಾ ಕ್ರಿಕೆಟಿಗ ಇವರಾಗಿದ್ದಾರೆ. 1985–86ರಲ್ಲಿ ಅಂಡರ್-21 ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಚಾಂಪಿಯನ್‌ಶಿಪ್ ನ್ನು ಬೆಟ್ಟಿ ವಿಲ್ಸನ್ ಶೀಲ್ಡ್ ಎಂದು ಮರುನಾಮಕರಣ ಮಾಡಲಾಗಿದೆ. ಹಾಗೂ 1996-97 ರಲ್ಲಿ ಅಂಡರ್-21 ವಯೋಮಿತಿಯನ್ನು ಅಂಡರ್-19 ಎಂದು ಬದಲಾವಣೆ ಮಾಡಲಾಯಿತು. * ವಿಲ್ಸನ್ ಅವರನ್ನು 2015 ರಲ್ಲಿ ICC ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳಲಾಯಿತು. ಮತ್ತೇ 2017 ರಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು.