Job Description: * ಪ್ರಸ್ತುತ ಶ್ರೀಲಂಕಾ ಸರ್ಕಾರವು ವಿವಾದಾತ್ಮಕ ಭಯೋತ್ಪಾದನಾ ನಿಗ್ರಹ ಕಾನೂನಿಗೆ ತಿದ್ದುಪಡಿ ತರಲು ಸಿದ್ಧವಾಗಿದೆ. ಈ ಕಾನೂನಿನ ಮೂಲಕ ಭಯೋತ್ಪಾದನೆಗೆ ಸಂಬಂಧಪಟ್ಟಿರುವ ವ್ಯಕ್ತಿಗಳನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸುವ ಸಂಪೂರ್ಣ ಅಧಿಕಾರವನ್ನು ಅಲ್ಲಿನ ಪೊಲೀಸರಿಗೆ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ. * ಇತ್ತೀಚಿಗೆ ಶ್ರೀಲಂಕಾ ಸರ್ಕಾರವು ಭಯೋತ್ಪಾದನಾ ನಿಗ್ರಹ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ, ಎಂದು ಗೆಜೆಟ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. * ಈ ಭಯೋತ್ಪಾದನಾ ನಿಗ್ರಹ ಕಾಯ್ದೆಯುನ್ನು 1979 ರಲ್ಲಿ ಜಾರಿಗೆ ತರಲಾಗಿದೆ, ಇದೀಗ ಆ ಕಾಯ್ದೆಗೆ ತಿದ್ದುಪಡಿ ತರಲಾಗುವದು ಎಂದು ತಿಳಿಸಿದೆ. ತಿದ್ದುಪಡಿಯ ನಂತರ ಯಾವುದೇ ಒಬ್ಬ ವ್ಯಕ್ತಿಯು ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಆ ವ್ಯಕ್ತಿಯುನ್ನು ವಾರಂಟ್‌ ರಹಿತವಾಗಿ ಬಂಧಿಸಲು ಹಾಗೂ ವಿಚಾರಣೆ ನಡೆಸಲು ಈ ಕಾಯ್ದೆಯು ಪೊಲೀಸರಿಗೆ ಅಧಿಕಾರ ನೀಡಲಿದೆ ಎಂದಿದ್ದಾರೆ. ಆದರೆ ಬಂಧಿಸಲಾಗಿರುವ ವ್ಯಕ್ತಿಯು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ ಸಂಪರ್ಕಿಸಿ ಪರಿಹಾರವನ್ನು ಪಡೆಯಲು ಅವಕಾಶವನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * 1978 ರ ಭಯೋತ್ಪಾದನೆ ತಡೆ ಕಾಯಿದೆ ಇದೊಂದು ಶ್ರೀಲಂಕಾದಲ್ಲಿನ ಒಂದು ಕಾನೂನಾಗಿದೆ. ಈ ಕಾಯಿದೆ ಅಡಿಯಲ್ಲಿ ಶಂಕಿತರನ್ನು ಹುಡುಕಲು, ಬಂಧಿಸಲು ಪೊಲೀಸರಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಈ ಕಾಯಿದೆಯನ್ನು ಮೊದಲು 1979 ರಲ್ಲಿ J. R. ಜಯವರ್ಧನೆ ಅಧ್ಯಕ್ಷತೆಯಲ್ಲಿ ತಾತ್ಕಾಲಿಕ ಕಾನೂನಾಗಿ ಜಾರಿಗೆ ತರಲಾಗಿತ್ತು, ನಂತರ ಇದನ್ನು 1982 ರಲ್ಲಿ ಶಾಶ್ವತ ಕಾನೂನಾಗಿ ಜಾರಿಗೆ ತರಲಾಗಿದೆ. * ಶ್ರೀಲಂಕಾದ ಈ ಕಾಯಿದೆಯ ಅಡಿಯಲ್ಲಿ, ಸಚಿವರು ಯಾವುದೇ ಕಾನೂನುಬಾಹಿರ ಚಟುವಟಿಕೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಅಥವಾ ಕಾಳಜಿ ವಹಿಸಿದ್ದಾರೆ ಎಂದು ಅನುಮಾನಿಸಲು ಸಚಿವರು ಕಾರಣವನ್ನು ಹೊಂದಿದ್ದರೆ ಆಗ 18 ತಿಂಗಳವರೆಗೆ ವ್ಯಕ್ತಿಯನ್ನು ಬಂಧಿಸಬಹುದಾಗಿದೆ. ಹಾಗೂ ಕಾನೂನುಬಾಹಿರ ಚಟುವಟಿಕೆಯು ಪೋಸ್ಟರ್‌ಗಳನ್ನು ಗೋಡೆಗಳ ಮೇಲೆ ಅಂಟಿಸುವುದನ್ನು ಸಹ ಒಳಗೊಂಡಿರುತ್ತದೆ ಮತ್ತು ಮರಣದಂಡನೆಗೆ ಗುರಿಯಾಗುತ್ತದೆ. * ಈ ಕಾಯಿದೆ ಅಡಿಯಲ್ಲಿ ದೇಶದ ಸಾಮಾನ್ಯ ಕಾನೂನುಗಳಿಗೆ ತಿಳಿದಿಲ್ಲದ ಅಪರಾಧಗಳನ್ನು ಸಹ ಪರಿಚಯಿಸಲಾಯಿತು. ಉದಾಹರಣೆಗೆ: ಯಾವುದೇ ಒಬ್ಬ ವ್ಯಕ್ತಿಗೆ ಭಯೋತ್ಪಾದಕ ಇರುವಿಕೆಯ ಬಗ್ಗೆ ತಿಳಿದಿದ್ದರೆ ಹಾಗೂ ಅಂತಹ ವ್ಯಕ್ತಿಯು ಪೊಲೀಸರಿಗೆ ತಿಳಿಸಲು ವಿಫಲವಾದರೆ, ಆ ವ್ಯಕ್ತಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯ ಶಿಕ್ಷಾರ್ಹ ಅಪರಾಧವನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಭಯೋತ್ಪಾದಕನು ಯಾವುದೇ ವ್ಯಕ್ತಿಯೊಂದಿಗೆ ರಾತ್ರಿಯ ಸಮಯವನ್ನು ಕಳೆದರೆ ಅಂತಹ ವ್ಯಕ್ತಿಯು ಆಶ್ರಯ ನೀಡಿದ್ದಾನೆ ಎಂದು ತಪ್ಪಿತಸ್ಥನಾಗಿರುತ್ತಾನೆ, ಗರಿಷ್ಠ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ಕಾಯಿದೆ ತಿಳಿಸುತ್ತದೆ.