Job Description: * ದಕ್ಷಿಣ ಭಾರತದಲ್ಲೇ ಪ್ರಥಮವಾಗಿ ಕೇರಳ ರಾಜ್ಯದ ಕಾಸರಗೋಡಿನಲ್ಲಿ ವಿಶೇಷ ಪ್ರಯತ್ನದ ಅಡಿಯಲ್ಲಿ ರಬ್ಬರ್ ಡ್ಯಾಂ(ಅಣೆಕಟ್ಟು) ಸಿದ್ಧಗೊಂಡಿದೆ. * ಸಾಮಾನ್ಯವಾಗಿ ನಿರ್ಮಾಣ ಮಾಡುವ ಕಿಂಡಿ ಅಣೆಕಟ್ಟುಗಳಿಗೆ ಬೇಸಿಗೆಸಮಯದಲ್ಲಿ ಹಲಗೆ ಅಳವಡಿಸಲಾಗುತ್ತದೆ, ಹಾಗೂ ಮಣ್ಣು-ಮರಳು ತುಂಬುವುದು ಇನ್ನಿತರ ಜಂಜಾಟಗಳಿರುತ್ತವೆ. ಒಂದು ವೇಳೆ ದಿಢೀರ್ ಮಳೆ ಬಂದರೆ ಏನು ಮಾಡಲು ಸಾಧ್ಯವಿಲ್ಲದೆ ಹೂಳು ತುಂಬುವ ಸಮಸ್ಯೆಗಳಿರುತ್ತವೆ. ಆದರೆ ರಬ್ಬರ್ನಿಂದ ನಿರ್ಮಿಸಲಾಗಿರುವ ಅಣೆಕಟ್ಟು ಹೊಸ ತಂತ್ರಜ್ಞಾನದಿಂದ ಒಳಗೊಂಡಿದೆ. * ಸಮಾನ್ಯ ಜನರಿಗೆ ನೀರಿನ ಅವಶ್ಯಕತೆ ಈದ್ದರೆ ನಿರ್ಮಿಸಲಾಗಿರುವ ರಬ್ಬರ್ ಟ್ಯೂಬ್ಗೆ ನೀರು ಅಥವಾ ಗಾಳಿ ತುಂಬಿಸಿ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಬಹುದಾಗಿದೆ. ಹಾಗೂ ಎತ್ತರವನ್ನೂ ಬೇಕಾದಷ್ಟು ನಿರ್ಧರಿಸಬಹುದು, ಹಾಗೂ ಹೂಳು ತುಂಬುವ ಅಪಾಯವು ಇರುವದಿಲ್ಲ ಎಂದು ತಿಳಿಸಿದ್ದಾರೆ. * ಪ್ರಸ್ತುತ ಚೀನಾ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಈ ರಬ್ಬರ್ ಆಣೆಕಟ್ಟು ತಂತ್ರಜ್ಞಾನವು ವ್ಯಾಪಕವಾಗಿ ಹರಡಿದೆ, ಇದೀಗ ಈ ತಂತ್ರಜ್ಞಾನವು ಭಾರತದಲ್ಲಿಯೂ ಗಮನ ಸೆಳೆಯುತ್ತಿದೆ. ಇದೀಗ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಮೇಘಾಲಯ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ತಂತ್ರಜ್ಞಾನವು ಈಗಾಗಲೆ ನಿರ್ವಣಗೊಂಡು ಯಶಸ್ಸು ಕಂಡಿದೆ. * ಪ್ರಸ್ತುತ ದಕ್ಷಿಣ ಭಾರತದ ಪೈಕಿ ತಮಿಳುನಾಡಿನ ಉದಕಮಂಡಲದಲ್ಲಿ ಪ್ರಾಯೋಗಿಕವಾಗಿ ನಿರ್ಮಾಣಮಾಡಲಾಗಿತ್ತು. ಆದರೆ ಮೊದಲ ಬಾರಿ ಈ ರಬ್ಬರ್ ಅಣೆಕಟ್ಟುನ್ನು ಕೇರಳದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಕೇರಳದ '5' ಜಿಲ್ಲೆಗಳಲ್ಲಿ ಈ ರಬ್ಬರ್ ಡ್ಯಾಂ ನಿರ್ವಣಕ್ಕೆ ಯೋಜನೆ ರೂಪಿಸಿದ್ದಾರೆ. ಮೊದಲನೆಯ ಹಂತದಲ್ಲಿ ಕೇರಳ ರಾಜ್ಯದ ಕಾಸರಗೋಡಿನ ಪನತ್ತಡಿ ಪಂಚಾಯಿತಿಯಲ್ಲಿ ಈ ರಬ್ಬರ್ ಡ್ಯಾಂ ನಿರ್ಮಾಣವಾಗಿದೆ. ಸುಮಾರು 1.5 ಮೀಟರ್ನಿಂದ 2.5 ಮೀ. ಎತ್ತರದವರೆಗೆ ಈ ರಬ್ಬರ್ ಡ್ಯಾಂ ನಿರ್ವಿುಸಬಹುದಾಗಿದೆ. * ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡಿನ ಪನತ್ತಡಿ ಮಾನಡ್ಕ ಸಮೀಪದ ಕೋಳಿಚ್ಚಾಲ್ ರಸ್ತೆಯ ತೋಡಿಗೆ ತಿಮ್ಮಂಚಾಲ್ ಎಂಬಲ್ಲಿ ಸುಮಾರು 48 ಲಕ್ಷ ರೂ. ವೆಚ್ಚದಲ್ಲಿ ಈ ರಬ್ಬರ್ ಡ್ಯಾಂ ನಿರ್ವಿುಸಲಾಗಿದೆ. ಇದನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಲ್ಲಿ 2.5 ಮೀ. ಎತ್ತರ, 10 ಮೀ. ಅಗಲದಲ್ಲಿ ನಿರ್ಮಿಸಲಾಗಿದೆ. ಈ ರಬ್ಬರ್ ಡ್ಯಾಂ ಮೂಲಕ ಆ ಪ್ರದೇಶದಲ್ಲಿ ಯಾವುದೇ ಸೋರಿಕೆಯಿಲ್ಲದೆ 400 ಮೀ.ವರೆಗೂ ನೀರು ಶೇಖರಣೆಗೊಳ್ಳುತ್ತಿದೆ. ಈ ನೀರನ್ನು ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗಿದೆ. * * ರಬ್ಬರ್ ಡ್ಯಾಂ ನಿರ್ಮಾಣ : ಈ ಡ್ಯಾಂ ನಿರ್ಮಿಸುತ್ತಿರುವ ಜಗದಲ್ಲಿ ತಳಭಾಗಕ್ಕೆ ಕಾಂಕ್ರೀಟ್ ಅಳವಡಿಸಿ ಸಮತಟ್ಟುಗೊಳಿಸಿಕೊಂಡು, ನಂತರ ತೋಡಿನ ಎರಡೂ ಬದಿಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿಕೊಂಡು, ವಿಶೇಷವಾಗಿ ನಿರ್ವಿುಸಿದ ರಬ್ಬರ್ ಟ್ಯೂಬ್ಗಳನ್ನು ಆ ಜಗದಲ್ಲಿ ಇರಿಸಿ ಆ ಟ್ಯೂಬ್'ಗಳ ಮೇಲೆ ದಪ್ಪದ ರಬ್ಬರ್ ಹಾಳೆಯನ್ನು ವ್ಯವಸ್ಥಿತವಾಗಿ ಅಳವಡಿಸಲಾಗುತ್ತದೆ. * ಈ ಅಣೆಕಟ್ಟಿನಲ್ಲಿ ನೀರುನ್ನು ನಿಲ್ಲಿಸುವಾಗ ಅಲ್ಲಿರುವ ಟ್ಯೂಬ್ಗೆ ಗಾಳಿ ಅಥವಾ ನೀರು ತುಂಬಿಸಿ, ನೀರನ್ನು ನಿಲ್ಲಿಸಬಹುದು, ಒಂದು ವೇಳೆ ನೀರು ಬೇಡವೆಂದರೆ ಟ್ಯೂಬ್ನಿಂದ ನೀರು ಅಥವಾ ಗಾಳಿಯನ್ನು ಹೊರಹಾಕಿ ನೀರನ್ನು ಆ ಡ್ಯಾಂ ನಿಂದ ಹೊರಹಾಕಬಹುದು. * ಸಾಮಾನ್ಯ ಕೃಷಿಕರಿಗೆ ಈ ರಬ್ಬರ್ ಡ್ಯಾಂ ನ್ನು ನಿರ್ವಿುಸಿಕೊಳ್ಳುವುದು ಖರ್ಚಿನ ದೃಷ್ಟಿಯಿಂದ ಕಷ್ಟ. ಆದರೆ ಕೇರಳ ಸರ್ಕಾರವು ಈ ತಂತ್ರಜ್ಞಾನವನ್ನು ರೂಪಿಸಲು ಕೃಷಿಕರಿಗೆ ನೆರವಾಗಬೇಕು ಎನ್ನಲಾಗಿದೆ.