Job Description: * ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರು ಸಿದ್ಧಗಂಗಾ ಮಠದಲ್ಲಿ ದಾಸೋಹ ದಿನಕ್ಕೆ ಚಾಲನೆ ನೀಡಿದರು. ಇದೀಗ ಭಾರತೀಯ ಪರಂಪರೆಯಾಗಿರುವ ಅನ್ನ, ಅಕ್ಷರ, ವಿದ್ಯೆ, ಎಂಬ ತ್ರಿವಿಧ ದಾಸೋಹವನ್ನು ಸಿದ್ಧಗಂಗಾ ಮಠವು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದೆ ಎಂದು ತಿಳಿಸಿದ್ದಾರೆ. * ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ಧಗಂಗಾ ಮಠದಲ್ಲಿ ದಾಸೋಹ ದಿನದ ಅಂಗವಾಗಿ ಮಕ್ಕಳಿಗೆ ಊಟ ನೀಡುವ ಮೂಲಕ ದಾಸೋಹ ದಿನಕ್ಕೆ ಚಾಲನೆ ನೀಡಲಾಯಿತು. * ಪ್ರಸ್ತುತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಯೋಜನೆಗೆ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೊತೆಗೆ ರಾಜ್ಯದಲ್ಲಿ ಆಶ್ರಯ ದಾಸೋಹ ನೀಡುವ ಸಲುವಾಗಿ 5,000 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ದಾಸೋಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. * ನಡೆದಾಡುವ ದೇವರು ಎಂದು ಪ್ರಖ್ಯಾತಿ ಪಡೆದಿರುವ ಶಿವಕುಮಾರ ಸ್ವಾಮಿಜಿ ಅವರು 1907 ರ ಏಪ್ರಿಲ್. 01 ರಂದು ಜನಿಸಿ - 2019 ರ ಜನವರಿ 21 ರಂದು ನಿಧನರಾಗಿದ್ದಾರೆ. ಇವರೊಬ್ಬ ಭಾರತೀಯ ಮಾನವತಾವಾದಿ, ಆಧ್ಯಾತ್ಮಿಕ ನಾಯಕ ಮತ್ತು ಶಿಕ್ಷಣತಜ್ಞ. ಅವರು ವೀರಶೈವ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು. ಶಿವಕುಮಾರ ಸ್ವಾಮಿಜಿ ಅವರು ಈ ಹಿಂದೆ 1930 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿನ ಸಿದ್ದಗಂಗಾ ಮಠವನ್ನು ಸೇರಿದರು, ನಂತರದ ದಿನಗಳಲ್ಲಿ ಅಂದರೆ 1941 ರಿಂದ ಸಿದ್ದಗಂಗಾ ಮಠದ ಮುಖ್ಯ ದರ್ಶಕರಾದರು. ನಂತರದ ದಿನಗಳಲ್ಲಿ ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಶಿವಕುಮಾರ ಸ್ವಾಮಿಜಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ನಡೆದಾಡುವ ದೇವರು ಕರೆಯುತ್ತಿದ್ದರು. * ಭಾರತ ಸರ್ಕಾರವು ಈ ಹಿಂದೆ 2015 ರಲ್ಲಿ ಇವರಿಗೆ ಭಾರತದ 3 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿತ್ತು. * ಶಿವಕುಮಾರ ಸ್ವಾಮಿಜಿ ಅವರ ಮಾನವೀಯ ಕಾರ್ಯವನ್ನು ಗುರುತಿಸಿ, ಈ ಹಿಂದೆ 1965 ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಸಾಹಿತ್ಯದ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವವನ್ನು ಅರ್ಪಿಸಿತ್ತು. ಮತ್ತೇ ಕರ್ನಾಟಕ ಸರ್ಕಾರವು 2007 ರಲ್ಲಿ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಸ್ವಾಮಿಯವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. * ಮತ್ತೇ 2017 ರಲ್ಲಿ ಕರ್ನಾಟಕ ಸರ್ಕಾರವು ಹಾಗೂ ಶಿವಕುಮಾರ ಸ್ವಾಮಿಜಿ ಅವರ ಅನುಯಾಯಿಗಳು ಅವರ ಸಮಾಜ ಸೇವೆಗಾಗಿ ಅವರಿಗೆ ಭಾರತ ರತ್ನವನ್ನು ನೀಡಬೇಕೆಂದು ಕೋರಿಕೊಂಡಿದ್ದರು.