Job Description: * ಇತ್ತೀಚಿಗೆ ಅಮೇರಿಕಾ ವೈದ್ಯರು ಈ ಬಾರಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದ್ದಾರೆ. ಇದೊಂದು ಇವರ ಸಾಧನೆಗೆ ಹೊಸ ಮೈಲಿಗಲ್ಲಾಗಿದೆ. * ಪ್ರಸ್ತುತ ಯುನೈಟೆಡ್ ಸ್ಟೇಟ್ ನ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. * ಪ್ರಸ್ತುತ ಅಮೆರಿಕಾದಲ್ಲಿನ 57 ವರ್ಷದ ಜಿಮ್ ಪಾರ್ಸನ್ಸ್ ಕಳೆದ ವರ್ಷ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು, ನಂತರ ಅವರ ಮೆದುಳು ಡೆಡ್ ಆಗಿದೆ ಎಂದು ಅಮೇರಿಕಾ ವೈದ್ಯರು ಹೇಳಿದ್ದರು. ಇದೀಗ ಈ ಜಿಮ್ ಪಾರ್ಸನ್ಸ್ ರವರ ಕುಟುಂಬದ ಒಪ್ಪಿಗೆಯನ್ನು ಪಡೆದು ಆ ರೋಗಿಗೆ ತಳೀಯವಾಗಿ ಮಾರ್ಪಡಿಸಿರುವ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ. ಈ ಕಸಿಯ ಪ್ರಕ್ರಿಯೆ ಪೂರ್ಣಗೊಂಡ ನಂತರ ಆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ ಎಂದು ತಿಳಿಸಿದ್ದಾರೆ. * ಈ ಮೊದಲು ಅಮೇರಿಕಾದ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರು ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸಿ ಆ ವ್ಯಕ್ತಿಯ ಪ್ರಾಣ ಉಳಿಸಿದ್ದರು. ಅಲ್ಲಿನ ವೈದ್ಯರು ತಳೀಯವಾಗಿ ಮಾರ್ಪಡಿಸಿರುವ ಹಂದಿಯ ಹೃದಯವನ್ನು ಅಮೇರಿಕಾ ಪ್ರಜೆ ಬೆನೆಟ್ ಡೇವಿಡ್‌ಗೆ ಯಶಸ್ವಿಯಾಗಿ ಕಸಿ ಮಾಡಿದ್ದರು. * ಈ ಹಿಂದಿನಿಂದಲೂ ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ಸಂಶೋಧನೆ ಚಲನೆಯಲ್ಲಿತ್ತು. ಇದೀಗ ಅಮೇರಿಕಾದ ಪ್ರಜೆಗಳಾಗಿರುವ ಜಿಮ್ ಪಾರ್ಸನ್ಸ್ ಹಾಗೂ ಬೆನೆಟ್ ಡೇವಿಡ್ ಗೆ ಕ್ರಮವಾಗಿ ಕಸಿ ಮಾಡಿದ ನಂತರ ಹಂದಿಗಳ ಮೂತ್ರಪಿಂಡ ಹಾಗೂ ಹೃದಯವು ಸರಿಯಾಗಿ ಕೆಲಸ ಆರಂಭಿಸಿದರೆ ಇದೊಂದು ವೈದ್ಯಕೀಯ ಲೋಕದಲ್ಲಿ ಸಾಧನೆಯೇ ಮೈಲುಗಲ್ಲಾಗಲಿದೆ ಎಂದು ತಿಳಿಸಿದ್ದಾರೆ. * ಸದ್ಯ ದಾನಿಗಳ ಅಂಗಾಂಗಗಳ ಕೊರತೆಯ ಇರುವ ಸಂಧರ್ಭದಲ್ಲಿ ವೈದ್ಯರು ಹುರಿದುಂಬಿಸಿದಾಗ ಹಂದಿಯಿಂದ ಮನುಷ್ಯನಿಗೆ ಹೃದಯ ಕಸಿ ಮಾಡುವಿಕೆಯ ಯಶಸ್ಸನ್ನು ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. * ಅಮೇರಿಕಾ ವೈದ್ಯರು ತಿಳಿಸಿರುವ ಮಾಹಿತಿಯ ಪ್ರಕಾರ, ಸದ್ಯ ಅಂಗಾಂಗ ದಾನಕ್ಕಾಗಿ 100,000 US ನಾಗರಿಕರು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.