Job Description: * ಇತ್ತೀಚಿಗೆ ಮಾರ್ನಿಂಗ್ ಕನ್ಸಲ್ಟ್ ಎಂಬ ರಾಜಕೀಯ ಗುಪ್ತಚರ ಸಂಸ್ಥೆಯು 13 ವಿಶ್ವ ನಾಯಕರ ಪಟ್ಟಿಯಲ್ಲಿ ನಡೆಸಿರುವ ಸಮೀಕ್ಷೆಯ ಪ್ರಕಾರ ಅತೀ ಹೆಚ್ಚು ಪ್ರಖ್ಯಾತಿಯನ್ನು ಪ್ರಡೆದುಕೊಂಡಿರುವ ಜಗತ್ತಿನ ಜನಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ನಂಬರ್ 01' ಸ್ಥಾನವನ್ನು ಪಡೆದಿದ್ದಾರೆ. * ಈ ಮಾರ್ನಿಂಗ್ ಕನ್ಸಲ್ಟ್ ಎಂಬ ರಾಜಕೀಯ ಗುಪ್ತಚರ ಸಂಸ್ಥೆಯು ಸರ್ವೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಶೇ.71 ರಷ್ಟು ರೇಟಿಂಗ್ ನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಈ ಸಮೀಕ್ಷೆಯ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅತ್ಯಂತ ಕಡಿಮೆ ರೇಟಿಂಗ್ ಪಡೆದುಕೊಂಡಿರುವ ಜನಪ್ರಿಯ ನಾಯಕರಾಗಿದ್ದಾರೆ. * ಮೆಕ್ಸಿಕೋ ಅಧ್ಯಕ್ಷ ಅಂಡ್ರೆಸ್ ಮ್ಯಾನುಯೆಲ್ ಲೊಪೆಜ್ ಓಬ್ರಾಡಾರ್ ಶೇ. 66 ರಷ್ಟು ರೇಟಿಂಗ್ ನ್ನು ಪಡೆದುಕೊಂಡು 2 ನೇ ಸ್ಥಾನದಲ್ಲಿದ್ದಾರೆ. ತದನಂತರ ಇಟಲಿ ಪ್ರಧಾನ ಮಂತ್ರಿ ಮಾರಿಯೊ ಡ್ರಾಘಿ ಅವರು ಶೇ. 60 ರಷ್ಟು ರೇಟಿಂಗ್'ನ್ನು ಪಡೆದುಕೊಂಡು 3 ನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇ. 43 ರಷ್ಟು ರೇಟಿಂಗ್'ನ್ನು ಪಡೆದು 6 ನೇ ಸ್ಥಾನದಲ್ಲಿದ್ದಾರೆ. ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೊ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಶೇ. 41 ರಷ್ಟು ರೇಟಿಂಗ್ ನ್ನು ಪಡೆದುಕೊಂಡು 7 ನೇ ಸ್ಥಾನದಲ್ಲಿದ್ದಾರೆ. * ಈ ಮಾರ್ನಿಂಗ್ ಕನ್ಸಲ್ಟ್ ಪ್ರಸ್ತುತ ವಿಶ್ವದಾದ್ಯಂತ ವಿವಿಧ ದೇಶಗಳ ನಾಯಕರ ಜನಪ್ರಿಯತೆಯ ಬಗ್ಗೆ ರೇಟಿಂಗ್'ಗಳನ್ನು ಟ್ರ್ಯಾಕ್ ಮಾಡುತ್ತದೆ. ಈ ಸಮಸ್ಥೆಯು ಒಟ್ಟಾರೆ 13 ದೇಶಗಳ ನಾಯಕರ ಜನಪ್ರಿಯತೆ ಬಗ್ಗೆ ಸಮೀಕ್ಷೆಯನ್ನು ನಡೆಸಿದೆ. * * ಈ ಸಮೀಕ್ಷೆಗೆ ಒಳ್ಳಪಟ್ಟಿರುವ ದೇಶಗಳು : ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಹಾಗೂ ಅಮೇರಿಕಾ ರಾಷ್ಟ್ರಗಳ ನಾಯಕರ ರೇಟಿಂಗ್ ಗಳನ್ನು ಟ್ರ್ಯಾಕ್ ಮಾಡಿದೆ. * ಈ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯನ್ನು ಈ ಹಿಂದೆ 2014 ರಲ್ಲಿ ಸ್ಥಾಪಿಸಲಾಗಿದೆ. ಇದೊಂದು ಖಾಸಗಿಯಾಗಿ ನಡೆಸುವ ಡೇಟಾ ಇಂಟೆಲಿಜೆನ್ಸ್ ಕಂಪನಿಯಾಗಿದೆ. ಈ ಸಂಸ್ಥೆಯನ್ನು 2018 ಮತ್ತು 2019 ರಲ್ಲಿ ಡೆಲಾಯ್ಟ್ ಉತ್ತರ ಅಮೇರಿಕಾದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕಂಪನಿಯಲ್ಲಿ ಒಂದಾಗಿದೆ ಎಂದಿದ್ದಾರೆ. ಸದ್ಯ ಈ ಕಂಪನಿಯು ಆನ್‌ಲೈನ್ ಸಮೀಕ್ಷೆ ಸಂಶೋಧನಾ ತಂತ್ರಜ್ಞಾನವನ್ನು ವಾಷಿಂಗ್ಟನ್, DC, ನ್ಯೂಯಾರ್ಕ್ ಸಿಟಿ, ಚಿಕಾಗೋ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಗಳಲ್ಲಿ ಪರಿಣತಿ ಹೊಂದಿರುವ ಸಂಸ್ಥೆಯಾಗಿದೆ. * ಪ್ರಸ್ತುತ ಈ ಮಾರ್ನಿಂಗ್ ಕನ್ಸಲ್ಟ್ ವ್ಯಾಪಾರ, ಮಾರುಕಟ್ಟೆ, ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲಿನ ಸಂಸ್ಥೆಗಳಿಗೆ ಜಾಗತಿಕ ಸಮೀಕ್ಷೆ ಸಂಶೋಧನಾ ಮಾಹಿತಿ, ಡೇಟಾ ಸೇವೆ ಹಾಗೂ ಸುದ್ದಿಗಳನ್ನು ನೀಡುತ್ತದೆ. ಈ ಕಂಪನಿಯ ಪ್ರತಿ ವರ್ಷ 40 ದೇಶಗಳಾದ್ಯಂತ 3,000 ಕಂಪನಿಗಳು, ಉತ್ಪನ್ನಗಳು ಮತ್ತು ವ್ಯಕ್ತಿಗಳನ್ನು ಟ್ರ್ಯಾಕ್ ಮಾಡುತ್ತದೆ.