Job Description: * ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. * ಪ್ರಸ್ತುತ ಕೇಂದ್ರ ಸರ್ಕಾರವು ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆಯ ಜೊತೆಗೆ ವಿಲೀನಗೊಳಿಸಲು ನಿರ್ಧಾರವನ್ನು ಕೈಗೊಂಡಿದೆ. * ಭಾರತ ದೇಶವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನಲೆಯಿಂದ, ಇದೇ ಸಮಯದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯವಾದ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಇದೇ 2022 ರ ಜನವರಿ. 23 ರಂದು ನೇತಾಜಿ ಅವರ ಜನ್ಮದಿನಾಚರಣೆಯ ದಿನದಂದು ಹೊಲೊಗ್ರಾಮ್ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * ಈ ಇಂಡಿಯಾ ಗೇಟ್'ನಲ್ಲಿ ನಿರ್ಮಾಣವಾಗುವ ನೇತಾಜಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿಯು ಸುಮಾರು 28 ಅಡಿ ಎತ್ತರ ಹಾಗೂ 6 ಅಡಿ ಅಗಲ ವಿರಲಿದೆ ಎನ್ನಲಾಗಿದೆ. * ಈ ಹಿಂದೆ 1972 ರಲ್ಲಿ ಇಂಡಿಯಾ ಗೇಟ್‌ನಲ್ಲಿ ನಿರ್ಮಾಣಮಾಡಿರುವ 'ಅಮರ್ ಜವಾನ್ ಜ್ಯೋತಿ'ಯನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ, ಇದೀಗ ಅಮರ್ ಜವಾನ್ ಜ್ಯೋತಿ'ಯನ್ನು "ರಾಷ್ಟ್ರೀಯ ಯುದ್ಧ ಸ್ಮಾರಕ"ದಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದಿದ್ದಾರೆ. ಪ್ರಸ್ತುತ ಈ 'ಅಮರ್ ಜವಾನ್ ಜ್ಯೋತಿ'ಯ 1971 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದ ವೀರ ಸೈನಿಕರ ಸವಿ ನೆನಪಿಗಾಗಿ ನಿರ್ಮಿಸಲಾಗಿದೆ. ಇದೀಗ ಭಾರತ-ಪಾಕಿಸ್ತಾನ ಈ ಯುದ್ಧವು 50 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಿಂದಾಗಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಪ್ರಸ್ತುತ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯು ಇದೇ ಗಣರಾಜ್ಯೋತ್ಸವದ ಆಚರಣೆಯ ಮೊದಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರವಾಗಿ ಅಲ್ಲಿ ಪ್ರಜ್ವಲಿಸಲಿದೆ. * ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷವು ಆಕ್ಷೇಪವನ್ನು ವ್ಯಕ್ತಪಡಿಸಿದೆ. * ಅಮರ್ ಜವಾನ್ ಜ್ಯೋತಿ: ಇದೊಂದು 1971 ರ ಇಂಡೋ-ಪಾಕಿಸ್ತಾನ ಯುದ್ಧದ ನಂತರ ಭಾರತೀಯ ಸಶಸ್ತ್ರ ಪಡೆಗಳ ಸಮಯದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ನಿರ್ಮಿಸಿರುವ ಭಾರತೀಯ ಸ್ಮಾರಕವಾಗಿದೆ. ಈ 'ಅಮರ್ ಜವಾನ್ ಜ್ಯೋತಿ'ಯು ಅಮೃತಶಿಲೆಯ ಪೀಠವನ್ನು ಹೊಂದಿದೆ. ಈ 'ಅಮರ್ ಜವಾನ್' ಸ್ಮಶಾನದ ಎಲ್ಲಾ ನಾಲ್ಕು ಬದಿಗಳಲ್ಲಿ ಚಿನ್ನದ ಲೇಪನ ಮಾಡಲಾಗಿದೆ, ಹಾಗೂ ಮೇಲ್ಭಾಗದಲ್ಲಿ, L1A1 ಸ್ವಯಂ-ಲೋಡಿಂಗ್ ರೈಫಲ್ ಅದರ ಬ್ಯಾರೆಲ್ ಮೇಲೆ ಸ್ಥಾಪಿಸಲಾಗಿದೆ. * ಈ ಸ್ಮಾರಕವನ್ನು ಎರಡು ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. - ಮೊದಲಬಾರಿ ಡಿಸೆಂಬರ್ 1971 ರಲ್ಲಿ ನಿರ್ಮಿಸಲಾಯಿತು, ಹಾಗೂ ಇದನ್ನು ಮತ್ತೇ 1972 ರಲ್ಲಿ ಇಂದಿರಾ ಗಾಂಧಿಯವರು ನವ ದೆಹಲಿಯ ರಾಜ್‌ಪಥ್‌ನಲ್ಲಿ ಇಂಡಿಯಾ ಗೇಟ್ ಅಡಿಯಲ್ಲಿ ಉದ್ಘಾಟಿಸಿದರು. - ಎರಡನೆಯಬಾರಿ ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಹುತಾತ್ಮರನ್ನು ಅವರ ಹೆಸರುಗಳ ಜೊತೆಗೆ ಅವರಿಗೆ ಗೌರವಿಸಲು ರಾಷ್ಟ್ರೀಯ ಯುದ್ಧ ಸ್ಮಾರಕದ ಅಡಿಯಲ್ಲಿ ಸ್ಥಾಪನೆ ಮಾಡಲಾಗಿದೆ. ಹಾಗೂ "ಸುವರ್ಣ ಅಕ್ಷರಗಳಲ್ಲಿ" ಬರೆಯಲಾಗಿದೆ. ಇದನ್ನು ಪ್ರಧಾನಿ ಮೋದಿ ಅವರು 2019 ರ ಫೆಬ್ರವರಿ. 25 ರಂದು 'ಅಮರ್ ಜವಾನ್ ಜ್ಯೋತಿ'ಯನ್ನು ಬೆಳಗಿಸುವ ಮೂಲಕ ಉದ್ಘಾಟಣೆಯನ್ನು ನೆರವೇರಿಸಿದ್ದರು. * ಇತ್ತೀಚಿಗೆ 2022 ರ ಜನವರಿ. 21 ರಂದು ಈ 'ಅಮರ್ ಜವಾನ್ ಜ್ಯೋತಿ'ಯನ್ನು 'ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸಲಾಗಿದೆ.