Job Description: * ಪ್ರಸ್ತುತ ಭಾರತೀಯ ಕೇಂದ್ರ ಸರ್ಕಾರವು ಇದೀಗ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿರುವ ಹಿನ್ನಲೆಯಿಂದಾಗಿ ಪಾಕಿಸ್ತಾನ ಮೂಲದ '35'ಯೂಟ್ಯೂಬ್ ಚಾನೆಲ್‌ ಗಳನ್ನು ಸೇರಿದಂತೆ 7 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿದೆ. * ಈ ಹಿಂದೆ 2021 ನೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ "ಭಾರತ ವಿರೋಧಿ" ಅಂಶವನ್ನು ಪ್ರಸಾರ ಮಾಡಿರುವ ಕಾರಣದಿಂದಾಗಿ ಕೇಂದ್ರ ಸಚಿವಾಲಯವು 20 ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು. * ಇತ್ತೀಚಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ 'ಅಪೂರ್ವ ಚಂದ್ರ' ಅವರು ಸುದ್ದಿವಾಹಿನಿಗಳ ಜೊತೆ ಮಾತನಾಡಿ, ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿಯುವ 'ಈ ಎಲ್ಲ ಖಾತೆಗಳು ಪಾಕಿಸ್ತಾನ ದೇಶಕ್ಕೆ ಸೇರಿವೆ ಎಂದಿದ್ದಾರೆ. ಪಾಕಿಸ್ತಾನದ ಈ ಎಲ್ಲ ಯೂಟ್ಯೂಬ್ ಚಾನೆಲ್‌ಗಳು ಭಾರತದ ಯುದ್ಧಕ್ಕೆ ಸಂಬಂಧಪಟ್ಟಿರುವಂತೆ ನಕಲಿ ಅಂಶಗಳನ್ನು ಹಂಚಿಕೊಂಡಿವೆ. ಇದೀಗ ಈ ಎಲ್ಲ ಯೂಟ್ಯೂಬ್ ಚಾನೆಲ್‌ಗಳು ಹಾಗೂ ಖಾತೆಗಳಿಂದ ಪೋಸ್ಟ್ ಮಾಡಿರುವ ಮಾಹಿತಿಯು ಸರಿ ಸುಮಾರು 130 ಕೋಟಿ ವೀಕ್ಷಣೆಗಳನ್ನು ಪಡೆದಿವೆ ಎನ್ನಲಾಗಿದೆ. * ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿರುವ 'ವಿಕ್ರಮ್ ಸಹಾಯ್' ಅವರು ತಿಳಿಸಿರುವ ಪ್ರಕಾರ, ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿರುವ ಎಲ್ಲ ಯೂಟ್ಯೂಬ್ ಚಾನೆಲ್‌ಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಐಟಿ ನಿಯಮಗಳ ಪ್ರಕಾರ ಕ್ರಮವನ್ನು ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರವು 35 ಯೂಟ್ಯೂಬ್ ಚಾನೆಲ್‌ಗಳು, 02 ಟ್ವಿಟರ್ ಖಾತೆಗಳು, 02 ಇನ್‌ಸ್ಟಾಗ್ರಾಮ್ ಖಾತೆಗಳು, 02 ವೆಬ್‌ಸೈಟ್‌ಗಳು ಹಾಗೂ 01 ಒಂದು ಫೇಸ್‌ಬುಕ್ ಖಾತೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. * ಪಾಕಿಸ್ತಾನದ ಈ ಎಲ್ಲ ಸಾಮಾಜಿಕ ಜಾಲತಾಣಗಳ ಬಗ್ಗೆ ಭಾರತ ಸರ್ಕಾರದ ಗುಪ್ತಚರ ಸಂಸ್ಥೆಯು ಮಾಹಿತಿಯನ್ನು ನೀಡಿದೆ, ಈ ಹಿನ್ನಲೆಯಿಂದಾಗಿ ಅವುಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ. * ಈ ಎಲ್ಲ ಸಾಮಾಜಿಕ ಜಾಲತಾಣಗಳು ಒಟ್ಟಾರೆ 1.2 ಕೋಟಿ ಚಂದಾದಾರರನ್ನು ಹೊಂದಿ ಸುಮಾರು 130 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ. ಇದೀಗ ಸಚಿವಾಲಯವು ಎಲ್ಲ ಮಾಹಿತಿಗಳನ್ನು ಖಚಿತಪಡಿಸಿಕೊಳ್ಳತ್ತಿದೆ ಎನ್ನಲಾಗಿದೆ. * * ಇದೀಗ ಕೇಂದ್ರ ಸರ್ಕಾರವು ನಿಷೇಧಿಸಿರುವ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸಲ್ಪಡುತ್ತಿವೆ ಎಂದಿದ್ದಾರೆ. ಅವುಗಳು : ಖಬರ್ ವಿತ್ ಫ್ಯಾಕ್ಟ್ಸ್, ಗ್ಲೋಬಲ್ ಟ್ರುತ್, ಇನ್ಫರ್ಮೇಶನ್ ಹಬ್, ಅಪ್ನಿ ದುನ್ಯಾ ಟಿವಿ ಹಾಗೂ ಬೋಲ್ ಮೀಡಿಯಾ ಟಿವಿ ಯೂಟ್ಯೂಬ್, ಇನ್ನು ಹೀಗೆ ಹಲವು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ಜೊತೆಗೆ '2' ವೆಬ್‌ಸೈಟ್‌ "whiteproductions.com.pk" ಹಾಗೂ "dnowmedia.com" ಗಳ ಮೇಲೆ ನಿಷೇಧ ಹೇರಲಾಗಿದೆ ಎಂದಿದ್ದಾರೆ.