Job Description: * ಪ್ರಸ್ತುತ ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದೇಶದಲ್ಲಿನ ಕ್ಷಿಪ್ರ ಕಾರ್ಯಪಡೆಯ ಯೋಧರು ದೌರ್ಜನ್ಯ, ಹಿಂಸೆ, ನ್ಯಾಯೇತರ ಹತ್ಯೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ, ಹಾಗೂ ಇವರ ಬಗ್ಗೆ ನಂಬಲು ಅರ್ಹವಾಗಿರದ ಪುರಾವೆಗಳಿರುವು ಕಾರಣದಿಂದ ಈ ಯೋಧರ ತುಕಡಿಯ ವಿಶ್ವದ ಯಾವುದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಶಾಂತಿಪಾಲನಾ ಪಡೆಯಲ್ಲಿ ಸೇರಿಸಬಾರದು ಎಂದು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. * ಇತ್ತೀಚಿಗೆ 12 ಮಾನವ ಹಕ್ಕು ಸಂಘಟನೆಗಳು ಈ ರಾಪಿಡ್ ಆಕ್ಷನ್ ಬೆಟಾಲಿಯನ್(RAB) ಪಡೆಯ ದೌರ್ಜನ್ಯಕ್ಕೆ ಪುರಾವೆ ನೀಡುವ ದಾಖಲೆಗಳನ್ನೂ ಒಳಗೊಂಡಿರುವ ಮಾಹಿತಿಯನ್ನು ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿ 'ಜೀನ್ ಪಿಯರೆ ಲಕ್ರೋಯಿಕ್ಸ್‌' ಅವರಿಗೆ ಪತ್ರದ ಮೂಲಕ ಮಾಹಿತಿಯ್ನನು ರವಾನಿಸಿವೆ. ಸದ್ಯ ಈ RAB ನಲ್ಲಿ ಕಾರ್ಯನಿರ್ವಹಿಸಿದ ಯೋಧರನ್ನು ಶಾಂತಿಪಾಲನಾ ಪಡೆಯಲ್ಲಿ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ತೀವ್ರ ಆತಂಕವನ್ನು ಸೃಷ್ಟಿಸುತ್ತಿದ್ದೆ. ಈ ಹಿಂದೆ 2014 ರಲ್ಲಿ ರಚನೆಯಾದ ಈ ತುಕಡಿಯ ವಿರುದ್ಧ ನ್ಯಾಯೇತರ ಹತ್ಯೆ, ಚಿತ್ರಹಿಂಸೆ, ಬಲವಂತದ ನಾಪತ್ತೆ ಆರೋಪಗಳು ನಿರಂತರವಾಗಿ ಕೇಳಿಬರುತ್ತಿರುವದರಿಂದ ಇದೀಗ ಇವರನ್ನು ಶಾಂತಿಪಾಲನಾ ಪಡೆಯಿಂದ ನಿಷೇಧಿಸಬೇಕು ಎಂದು ಮಾನವ ಹಕ್ಕು ಸಂಘಟನೆಗಳು ಆಗ್ರಹಿಸಿವೆ. * ಇದೀಗ RAB ಯೋಧರ ಬಗ್ಗೆ ಪ್ರವೆಗಳು ಲಭ್ಯವಿದ್ದ ಕಾರಣ ಇದೀಗ ವಿಶ್ವಸಂಸ್ಥೆ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಮಾನವ ಹಕ್ಕು ಸಂಘಟನೆಯ ಅಧ್ಯಕ್ಷ ಕೆರ್ರೀ ಕೆನಡಿ ಅವರು ತಿಳಿಸಿದ್ದಾರೆ. ಪ್ರಸ್ತುತ ವಿಶ್ವಸಂಸ್ಥೆಯ 2012 ರ ವಿಶ್ವಸಂಸ್ಥೆ ನೀತಿಯನ್ನು ಅನ್ವಯಿಸಿ ಶಾಂತಿಪಾಲನಾ ಪಡೆಯ ಸಿಬಂದಿಯ ಆಯ್ಕೆ ಮಾಡಬೇಕು ಎಂದಿದ್ದಾರೆ. ಇದೀಗ ಬಾಂಗ್ಲಾದೇಶದ RAB ಪಡೆಯಗಳು ಮಾನವ ಹಕ್ಕು ದೌರ್ಜನ್ಯ ನಡೆಸಿರುವ ಬಗ್ಗೆ ಲಭ್ಯವಿರುವ ಪುರಾವೆ ಹೊಂದಿರುವ ಘಟಕಗಳನ್ನು ತಕ್ಷಣದಿಂದಲೇ ಶಾಂತಿಪಾಲನಾ ಪಡೆಯಿಂದ ನಿಷೇಧಿಸಬೇಕು ಮಾನವ ಹಕ್ಕು ಸಂಘಟನೆಗಳು ಆಗ್ರಹಿಸಿವೆ. * *ರಾಪಿಡ್ ಆಕ್ಷನ್ ಬೆಟಾಲಿಯನ್ (RAB) : ಇದೊಂದು ಬಾಂಗ್ಲಾದೇಶದ ಪೋಲೀಸ್‌ನ ಗಣ್ಯ ಅಪರಾಧ-ವಿರೋಧಿ ಮತ್ತು ಭಯೋತ್ಪಾದನಾ ವಿರೋಧಿ ಘಟಕವಾಗಿದೆ. ಸದ್ಯ ಈ ಘಟವು ಬಾಂಗ್ಲಾದೇಶ ಪೋಲಿಸ್, ಬಾಂಗ್ಲಾದೇಶ ಸೇನೆ, ಬಾಂಗ್ಲಾದೇಶ ನೌಕಾಪಡೆ, ಬಾಂಗ್ಲಾದೇಶ ವಾಯುಪಡೆ, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ, ಬಾಂಗ್ಲಾದೇಶ ನಾಗರಿಕ ಸೇವೆ ಹಾಗೂ ಬಾಂಗ್ಲಾದೇಶ ಅನ್ಸಾರ್ ಸದಸ್ಯರನ್ನು ಒಳಗೊಂಡಿದೆ. * ರಾಪಿಡ್ ಆಕ್ಷನ್ ಬೆಟಾಲಿಯನ್'ನ್ನು 2004 ರ ಮಾರ್ಚ್. 26 ರಂದು ರಾಪಿಡ್ ಆಕ್ಷನ್ ಟೀಮ್ ಆಗಿ ರಚಿಸಲಾಗಿದೆ. ಹಾಗೂ ಇದು ತನ್ನ ಕಾರ್ಯಾಚರಣೆಯನ್ನು 2004 ರ ಏಪ್ರಿಲ್. 14 ರಂದು ಆರಂಭಿಸಿದೆ. * ಮಾನವ ಹಕ್ಕುಗಳ ಸಂಘಟನೆಗಳು ಈ ರಾಪಿಡ್ ಆಕ್ಷನ್ ಬೆಟಾಲಿಯನ್ ವಿರುದ್ಧ ಬಲವಂತದ ನಾಪತ್ತೆಯ ಆರೋಪವನ್ನು ಮಾಡಿವೆ.