Job Description: * ಇತ್ತೀಚೆಗೆ ಭಾರತ ಹಾಗೂ ಡೆನ್ಮಾರ್ಕ್ ದೇಶಗಳು ವರ್ಚುವಲ್ ಸಭೆಯ ಮೂಲಕ ಹಸಿರು ಇಂಧನಗಳ ಮೇಲೆ ಜಂಟಿ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಆರಂಭಿಸಲು ಒಪ್ಪಿಕೊಂಡಿವೆ. ಈ ಹಸಿರು ಕಾರ್ಯತಂತ್ರದ ಪಾಲುದಾರಿಕೆ - ಕ್ರಿಯಾ ಯೋಜನೆ 2020-2025 ಭಾಗವಾಗಿ ಒಪ್ಪಂದಕ್ಕೆ ಸಹಿ ಹಾಕಿವೆ. * ಭಾರತ-ಡೆನ್ಮಾರ್ಕ್ ದೇಶಗಳ ಒಪ್ಪಂದದ ಜೊತೆಗೆ ಜಂಟಿ ಸಮಿತಿಯು ರಾಷ್ಟ್ರೀಯ ಕಾರ್ಯತಂತ್ರದ ಆದ್ಯತೆಗಳು ಮತ್ತು ಎರಡು ದೇಶಗಳಲ್ಲಿನ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದವು. * ಭಾರತ-ಡೆನ್ಮಾರ್ಕ್ ಜಂಟಿ ಸಮಿತಿ ಸಭೆಯ ಈ ಮಿಷನ್-ಚಾಲಿತ ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಯೋಗವನ್ನು ವೃದ್ಧಿಪಡಿಸಲು ಸಮಿತಿಯು ಹೆಚ್ಚು ಒತ್ತನ್ನು ನೀಡುತ್ತದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಈ ಎರಡು ದೇಶಗಳು ಹಸಿರು ಕಾರ್ಯತಂತ್ರದ ಸಹಭಾಗಿತ್ವದ ಈ ಕ್ರಿಯಾ ಯೋಜನೆ 2020-2025 ಗೆ ಅನುಗುಣವಾಗಿ ಹವಾಮಾನ ಹಾಗೂ ನೀರು, ಶಕ್ತಿ, ತ್ಯಾಜ್ಯ, ಆಹಾರ ಇತ್ಯಾದಿಗಳ ಮೇಲೆ ಅಧಿಕ ಒತ್ತು ನೀಡಿವೆ ಎನ್ನಲಾಗಿದೆ. ಹಾಗೂ ಪಾಲುದಾರಿಕೆ ಅಭಿವೃದ್ಧಿಗಾಗಿ 3-4 ವೆಬ್‌ನಾರ್‌ಗಳನ್ನು ಆಯೋಜಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಹಾಗೆಯೇ ಹಸಿರು ಹೈಡ್ರೋಜನ್‌ನಂತಹ ಹಸಿರು ಇಂಧನಗಳಲ್ಲಿ ಪ್ರಸ್ತಾಪಗಳಿಗಾಗಿ ಕರೆಯನ್ನು ಉತ್ತೇಜಿಸಲು ಒಟ್ಟು ನೀಡಲು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ. * ಈ ಉಭಯ ದೇಶಗಳ ಸಮಿತಿಯು ನೀರು, ಶಕ್ತಿ ಸಂಶೋಧನೆ, ಸೈಬರ್-ಭೌತಿಕ ವ್ಯವಸ್ಥೆಗಳು ಹಾಗೂ ಜೈವಿಕ ಸಂಪನ್ಮೂಲಗಳ ಜೊತೆಗೆ ಮಾಧ್ಯಮಿಕ ಕೃಷಿ ಸೇರಿ ಹಲವಾರು ಕ್ಷೇತ್ರಗಳಲ್ಲಿ ಜಾರಿಯಲ್ಲಿರುವ ಯೋಜನೆಗಳ ಪ್ರಗತಿಯನ್ನು ಪರಿಶೀಲನೇ ಮಾಡಿದ್ದಾರೆ. * * ಭಾರತ-ಡೆನ್ಮಾರ್ಕ್ ಜಂಟಿ ಸಮಿತಿ ಸಭೆಯು ಸಹ-ಅಧ್ಯಕ್ಷತೆಯನ್ನು ವಹಿಸಿಕೊಂಡವರು : - ಪ್ರಸ್ತುತ ಕೆ. ವರ್ಷ್ಣೆ- ಸಲಹೆಗಾರ ಹಾಗೂ ಅಂತರರಾಷ್ಟ್ರೀಯ ಸಹಕಾರದ ಮುಖ್ಯಸ್ಥ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ. - ಸ್ಟೈನ್ ಜೋರ್ಗೆನ್ಸನ್- ಉನ್ನತ ಶಿಕ್ಷಣ ಮತ್ತು ವಿಜ್ಞಾನಕ್ಕಾಗಿ ಡ್ಯಾನಿಶ್ ಏಜೆನ್ಸಿಯ ಉಪ ನಿರ್ದೇಶಕರು. * ಭಾರತ-ಡೆನ್ಮಾರ್ಕ್ ನಡುವಿನ ಸಂಬಂಧ: ಈ ಹಿಂದೆ 1957 ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಡೆನ್ಮಾರ್ಕ್‌ಗೆ ಭೇಟಿ ಆ ಸಂಧರ್ಭದಲ್ಲಿ ಭಾರತ-ಡೆನ್ಮಾರ್ಕ್ ಸಂಬಂಧಗಳಿಗೆ ಅಡಿಪಾಯವನ್ನು ಹಾಕಿದರು. ಆಗಿನಿಂದ ಎರಡು ದೇಶಗಳು ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಸಹಕಾರದ ಆಧಾರದ ಸೌಹಾರ್ದ ಸಂಬಂಧವನ್ನು ಹಂಚಿಕೊಳ್ಳುತ್ತವೆ. * ಡೆನ್ಮಾರ್ಕ್ ದೇಶವು ನವದೆಹಲಿಯಲ್ಲಿ ತನ್ನ ರಾಯಭಾರ ಕಚೇರಿಯನ್ನು ಹೊಂದಿದೆ, ಹಾಗೂ ಭಾರತವು ಡೆನ್ಮಾರ್ಕ್ ಕೋಪನ್ ಹ್ಯಾಗನ್ ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಹೊಂದಿದೆ. * ಪ್ರಸ್ತುತ ಭಾರತದಲ್ಲಿ ವಿದೇಶಿ ಹೂಡಿಕೆದಾರರ ಪೈಕಿ ಡೆನ್ಮಾರ್ಕ್ ದೇಶವು 26 ನೇ ಸ್ಥಾನದಲ್ಲಿದೆ.