Job Description: * ಇತ್ತೀಚಿಗೆ ಲ್ಯಾನ್ಸೆಟ್ ಅಧ್ಯಯನವು ಆಂಟಿಮೈಕ್ರೊಬಿಯಲ್ ಪ್ರತಿರೋಧವು ಈಗ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಪ್ರಸ್ತುತ ಎಚ್‌ಐವಿ(HIV) ಹಾಗೂ ಮಲೇರಿಯಾವನ್ನು ರೋಗವನ್ನು ಮೀರಿಸಿದೆ. ಈ ಹಿಂದೆ 2019 ರಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧವು ಪ್ರಪಂಚದಾದ್ಯಂತ 1.27 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಲ್ಯಾನ್ಸೆಟ್ ಅಧ್ಯಯನ ತಿಳಿಸಿದೆ. ಇದರಿಂದ ಮೃತಪಟ್ಟವರು ಮಲೇರಿಯಾ ಹಾಗೂ HIV ಯಿಂದ ಸಾವನ್ನಪ್ಪಿದವರಿಗಿಂತ ಅಧಿಕವಾಗಿದೆ ಎಂದು ತಿಳಿಸಿದೆ. * * ಈ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಎಂದರೇ : ಇದೊಂದು ರೋಗಕ್ಕೆ ಕಾರಣವಾಗುವಂತಹ ಸೂಕ್ಷ್ಮಜೀವಿಗಳ ಬ್ಯಾಕ್ಟೀರಿಯಾ, ಈ ವೈರಸ್ ಔಷಧಿಗಳಿಗೆ ನಿರೋಧಕವಾಗುವ ಸ್ಥಿತಿಯಾಗಿದೆ. ಈ ಸೂಕ್ಷ್ಮಜೀವಿಯ ಪ್ರತಿರೋಧವು ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ತಿಳಿಸಿದೆ. ಈ ಸೂಕ್ಷ್ಮಜೀವಿಗಳು ಪ್ರತಿರೋಧವನ್ನು ಹೆಚ್ಚಿಸಿದಂತೆ ವೈದ್ಯರು ಡೋಸೇಜ್'ನ್ನು ಅಧಿಕವಾಗಿಸುತ್ತಾರೆ. ಇದರಲ್ಲಿರುವಂತಹ ಶಕ್ತಿಯುತ ಪ್ರಮಾಣಗಳು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ, ಹಾಗೂ ಮಾನವನ ದೇಹದಲ್ಲಿನ ಜೀವಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತವೆ, ಆಗ ದೇಹದಲ್ಲಿನ ಅಂಗಗಳು ಕ್ಷೀಣಿಸಲು ಆರಂಭಿಸುತ್ತವೆ. * ಪ್ರಸ್ತುತ ಕಡಿಮೆ ಹಾಗೂ ಮಧ್ಯಮ ಆದಾಯವನ್ನು ಹೊಂದಿರುವ ದೇಶಗಳು ಸೂಕ್ಷ್ಮಜೀವಿಗಳ ಪ್ರತಿರೋಧದಿಂದ ಹೆಚ್ಚು ಪ್ರಭಾವಶಾಲಿಯವಿವೆ. * ಈ ಹಿಂದೆ 2019 ರಲ್ಲಿ ಜಗತ್ತಿನಲ್ಲಿ ಸಂಭವಿಸಿರುವ 4.95 ಮಿಲಿಯನ್ ಸಾವುಗಳಲ್ಲಿ, ಸರಿ ಸುಮಾರು 1.27 ಸಾವುಗಳು ಈ ಆಂಟಿಮೈಕ್ರೊಬಿಯಲ್ ಪ್ರತಿರೋಧದಿಂದ ಸಂಭವಿಸಿವೆ ಎಂದು ಅಧ್ಯಯನ ತಿಳಿಸಿದೆ. ಹಾಗೂ ಮಲೇರಿಯಾದಿಂದ 640,000. ಮತ್ತು HIV ಯಿಂದ (ಏಡ್ಸ್) 860,000 ಸಾವುಗಳು ಸಂಭವಿಸಿವೆ ಎಂದು ಅಧ್ಯಯನವು ತಿಳಿಸಿದೆ. * ವಿಜ್ಞಾನಿಗಳು ಹಾಗೂ ಸಂಶೋಧಕರು ಸುಮಾರು 23 ವಿವಿಧ ರೀತಿಯ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಅಧ್ಯಯನ ಮಾಡಿದ್ದಾರೆ. ಅವುಗಳಲ್ಲಿ '6' ಮಾತ್ರ 3.57 ಮಿಲಿಯನ್ ಸಾವುಗಳಿಗೆ ಕಾರಣವಾಗಿರುವ ಬ್ಯಾಕ್ಟೀರಿಗಳಾಗಿವೆ. * ಸುಮಾರು 70% ಸಾವುಗಳು ಪ್ರತಿಜೀವಕಗಳ ವೈಫಲ್ಯದಿಂದಾಗಿ ಉಂಟಾಗಿವೆ. ಇವು ಫ್ಲೋರೋಕ್ವಿನೋಲೋನ್‌ಗಳನ್ನು ಒಳಗೊಂಡಿದ್ದವು. ಬೀಟಾ - ಲ್ಯಾಕ್ಟಮ್ಗಳು, etc. ಈ ಪ್ರತಿಜೀವಕಗಳನ್ನು ಸಾಮಾನ್ಯವಾಗಿ ಮಾನವನ ಮೂಳೆ ಸೋಂಕುಗಳು, ಉಸಿರಾಟದ ಸೋಂಕುಗಳು ಮತ್ತು ಮೂತ್ರದ ಸೋಂಕುಗಳಲ್ಲಿ ಸೂಚಿಸಲಾಗುತ್ತದೆ. * ಅಧಿಕವಾಗುತ್ತಿರುವ ಆಂಟಿಮೈಕ್ರೊಬಿಯಲ್ ಪ್ರತಿರೋಧಕ್ಕೆ ಕಾರಣ: ಸಾಮಾನ್ಯವಾಗಿ ಜನರು ಪ್ರತಿಜೀವಕ ಕೋರ್ಸ್'ನ್ನು ಪೂರ್ಣಗೊಳಿಸಲು ವಿಫಲವಾಗುತ್ತಿದ್ದಾರೆ. ಮತ್ತು ಜನರು ಒಂದು ಅಥವಾ ಎರಡು ದಿನಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಸ್ಥಗಿತಗೊಳಿಸುತ್ತಾರೆ, ಯಾವುದೇ ಒಬ್ಬ ವ್ಯಕ್ತಿಗೆ ಶೀತ ಮತ್ತು ಜ್ವರ ಬಂದರೆ ಪ್ರತಿಜೀವಕ ಕೋರ್ಸ್'ನ್ನು ಆರಂಭಿಸುತ್ತಾನೆ, ಆ ವ್ಯಕ್ತಿಯು '5' ದಿನಗಳವರೆಗೆ ಪ್ರತಿಜೀವಕಗಳನ್ನು ಸ್ವಿಕರಿಸಬೇಕಾಗುತ್ತದೆ. ಆ ವ್ಯಕ್ತಿಯು 2 ದಿನಗಳ ನಂತರ ಉತ್ತಮವಾಗುತ್ತಾನೆ. ಆದರೆ 2 ದಿನಗಳಲ್ಲಿ, ಕೆಲವೇ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಈ ಕಾರಣದಿಂದ ವ್ಯಕ್ತಿಯು ಅವನು ಉತ್ತಮವಾಗಿದ್ದಾನೆ. ಆದರೆ ಅವನ ದೇಹದಲ್ಲಿ ನಿಧಾನವಾಗಿ ಸಾಯುವ ಹೆಚ್ಚು ಬ್ಯಾಕ್ಟೀರಿಯಾಗಳಿವೆ, ಅಲ್ಲಿರುವಂತಹ ಎಲ್ಲಾ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಅವನು ಸಂಪೂರ್ಣವಾಗಿ ಈ ಕೋರ್ಸ್ ನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಕೋರ್ಸ್ ನ್ನು ನಿಲ್ಲಿಸಿದರೆ ಸಾಯುತ್ತಿರುವ ಬ್ಯಾಕ್ಟೀರಿಯಾಗಳಿಗೆ ಎರಡು ದಿನಗಳ ನಂತರ ಜೀವಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ. * 2050 ರ ವೇಳೆಗೆ ಈ ಆಂಟಿಮೈಕ್ರೊಬಿಯಲ್ ಪ್ರತಿರೋಧವು ಪ್ರತಿ ವರ್ಷವು '10' ಮಿಲಿಯನ್‌ ಗಿಂತಲೂ ಅಧಿಕ ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.