Job Description: * ಇದೀಗ ಕೇಂದ್ರ ಸಂಪುಟವು 2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾಲದ ಕಂತುಗಳನ್ನೂ ಮರು ಪಾವತಿ ಅವಧಿ ವಿಸ್ತರಣೆ ಮಾಡಿ ಗ್ರಾಹಕರಿಗೆ ನೆರವು ನೀಡಿರುವ ಹಿನ್ನಲೆಯಿಂದಾಗಿ SBI ಗೆ ಸುಮಾರು 973.74 ಕೋಟಿ ರೂ. ಪರಿಹಾರ ನೀಡಲು ತೀರ್ಮಾನಿಸಿದೆ. * ಪ್ರಸ್ತುತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಈ ಪರಿಹಾರದ ಮೊತ್ತದಲ್ಲಿ SBI ಸೇರಿದಂತೆ ಇತರ ಬ್ಯಾಂಕ್‌ಗಳಿಗೂ ಪರಿಹಾರ ಸಿಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಹೇಳಿದ್ದಾರೆ. * ಪ್ರಸ್ತುತ ನಿಗದಿತ ಸಾಲ ಪಡೆದ ಗ್ರಾಹಕರಿಗೆ ಬಡ್ಡಿ ಪಾವತಿಸಲು ಸಹಾಯವಾಗುವ ನಿಟ್ಟಿನಲ್ಲಿ 5,500 ಕೋಟಿ ರೂ. ಮೊತ್ತವನ್ನು ಸರ್ಕಾರ ಒದಗಿಸಿದೆ. ಈ ಪೈಕಿ 4,626.93 ಕೋಟಿ ರೂ.ಗಳನ್ನು 2020-21 ನೇ ಸಾಲಿನಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಪರಿಹಾರ ಮೊತ್ತದಿಂದ 2020 ರ ಮಾರ್ಚ್.1 ರಿಂದ ಆಗಸ್ಟ್. 31 ರ ಅವಧಿಯಲ್ಲಿ ನೀಡಲಾಗಿರುವ ಸಾಮಾನ್ಯ ಬಡ್ಡಿ ಮತ್ತು ಚಕ್ರಬಡ್ಡಿ ನಡುವಿನ ವ್ಯತ್ಯಾಸ ಪರಿಹರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. * * ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) : ಇದೊಂದು ಭಾರತೀಯ ಬಹುರಾಷ್ಟ್ರೀಯ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಹಾಗೂ ಹಣಕಾಸು ಸೇವೆಗಳ ಶಾಸನಬದ್ಧ ಸಂಸ್ಥೆಯಾಗಿದೆ. ಇದು ತನ್ನ ಪ್ರಧಾನ ಕಚೇರಿಯನ್ನು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಹೊಂದಿದೆ. SBI ವಿಶ್ವದ 43ನೇ ಅತೀ ದೊಡ್ಡ ಬ್ಯಾಂಕ್ ಮತ್ತು ಫಾರ್ಚೂನ್ ಗ್ಲೋಬಲ್ 2020ರ ವಿಶ್ವದ ಅತಿ ದೊಡ್ಡ ನಿಗಮಗಳ 500 ಪಟ್ಟಿಯಲ್ಲಿ 221ನೇ ಸ್ಥಾನದಲ್ಲಿದೆ, ಹಾಗೂ ಈ ಪಟ್ಟಿಯಲ್ಲಿರು ಭಾರತೀಯ ಏಕೈಕ ಬ್ಯಾಂಕ್ ಇದಾಗಿದೆ. * ಪ್ರಸ್ತುತ ಈ ಸಾರ್ವಜನಿಕ ವಲಯದ ಬ್ಯಾಂಕ್ ಹಾಗೂ ಸ್ವತ್ತುಗಳ ಮೂಲಕ 23% ಮಾರುಕಟ್ಟೆ ಪಾಲನ್ನು ಹಾಗೂ ಒಟ್ಟು ಸಾಲ ಮತ್ತು ಠೇವಣಿ ಮಾರುಕಟ್ಟೆಯ 25% ಪಾಲನ್ನು ಹೊಂದಿದ ಭಾರತದ ಅತಿದೊಡ್ಡ ಬ್ಯಾಂಕ್ ಇದಾಗಿದೆ. * ಸದ್ಯ ಈ SBI ಬ್ಯಾಂಕ್ ಸರಿ ಸುಮಾರು 2,50,000 ಉದ್ಯೋಗಿಗಳನ್ನು ಒಳಗೊಂಡಿದೆ, ಹಾಗೂ ಭಾರತದಲ್ಲಿ 5ನೇ ಅತಿ ದೊಡ್ಡ ಉದ್ಯೋಗವನ್ನು ಒದಗಿಸಿರುವ ಬ್ಯಾಂಕ್ ಆಗಿದೆ. * ಈ ಹಿಂದೆ 1806 ರಲ್ಲಿ ಬ್ಯಾಂಕ್ ಆಫ್ ಕಲ್ಕತ್ತಾದಿಂದ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಸ್ಥಾಪನೆ ಮಾಡಲಾಗಿದೆ, ಇದೊಂದು ಭಾರತೀಯ ಅತ್ಯಂತ ಹಳೆಯ ವಾಣಿಜ್ಯ ಬ್ಯಾಂಕ್ ಆಗಿದೆ. ಪ್ರಸ್ತುತ ಬ್ಯಾಂಕ್ ಆಫ್ ಮದ್ರಾಸ್ ಬ್ರಿಟಿಷ್ ಇಂಡಿಯಾದ ಇತರ ಎರಡು ಪ್ರೆಸಿಡೆನ್ಸಿ ಬ್ಯಾಂಕ್‌ಗಳಾಗಿರುವ ಬ್ಯಾಂಕ್ ಆಫ್ ಕಲ್ಕತ್ತಾ ಹಾಗೂ ಬ್ಯಾಂಕ್ ಆಫ್ ಬಾಂಬೆ, ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾವನ್ನು ರಚಿಸಲು ಆ ಎರಡು ಬ್ಯಾಂಕ್'ಗಳನ್ನೂ ವಿಲೀನಗೊಳಿಸಲಾಯಿತು. ಆ ಸಂಧರ್ಭದಲ್ಲಿ ಅಂದರೆ 1955 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವಾಗಿ ಹೊರಹೊಮ್ಮಿತು. * ಈ SBI ಬ್ಯಾಂಕ್ ಒಟ್ಟಾರೆಯಾಗಿ ತನ್ನ 200 ವರ್ಷಗಳ ಇತಿಹಾಸದ ಅವಧಿಯಲ್ಲಿ ಸುಮಾರು '20' ಬ್ಯಾಂಕುಗಳ ವಿಲೀನ ಮತ್ತು ಸ್ವಾಧೀನಪಡೆಸಿಕೊಂಡು ರೂಪುಗೊಂಡಿದೆ. * ಈ ಹಿಂದೆ 1955 ರಲ್ಲಿ ಭಾರತ ಸರ್ಕಾರವು ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಹಾಗೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 60% ಪಾಲನ್ನು ಪಡೆದುಕೊಂಡು ಅದನ್ನೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಿತು.