Job Description: * ಪ್ರಸ್ತುತ ಬೆಂಗಳೂರು ಹಾಗೂ ಮಂಗಳೂರು ನಗರವನ್ನು ಸಂಪರ್ಕಿಸುವ ದ್ವಿಪಥವಿರುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆಯನ್ನು 1200 ಕೋಟಿ ರೂ.ಗಳ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಲಾಗಿದೆ. * NHAI ವತಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿಕೆ ನೀಡಿದ್ದಾರೆ. * ಈ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆಯು ಮಳೆಗಾಲದ ಸಮಯದಲ್ಲಿ ಬಳಸುವದು ಬಹಳ ಕಷ್ಟಕರವಾಗಿರುತ್ತದೆ ಈ ಹಿನ್ನಲೆಯಿಂದಾಗಿ ಈ ದ್ವಿಪಥ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಹಾಗೂ ಈ ಬೆಂಗಳೂರು ಹಾಗೂ ಮಂಗಳೂರಿನ NH 75 ನ್ನು ಸಂಪೂರ್ಣ ಮಾರ್ಗ ಏಕರೀತಿಯ ಚತುಷ್ಪಥ ರಸ್ತೆಯಾಗಲಿದೆ ಎಂದು ತಿಳಿಸಿದ್ದಾರೆ. * ಈ ಶಿರಾಡಿ ಘಾಟ್ ಹೆದ್ದಾರಿ ರಸ್ತೆಯು ಕರ್ನಾಟಕ ರಾಜ್ಯದ ಜೀವನಾಡಿಯಾಗಿದೆ. ಇದೀಗ ರಾಜ್ಯ ಸರ್ಕಾರವು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಿದೆ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. * * ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI): ಇದು ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ, ಇದನ್ನು 1988 ರ ರಸ್ತೆ ಆಕ್ಟ್ ಪ್ರಕಾರ 1995 ರಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಸ್ಥೆಯು ಭಾರತದಲ್ಲಿರು 1,32,499 ಕಿ.ಮೀ.ಗಳಲ್ಲಿ 50,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ ಈ ಸಂಸ್ಥೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ನೋಡಲ್ ಏಜೆನ್ಸಿಯಾಗಿದೆ, ಹಾಗೂ ಹೆದ್ದಾರಿಗಳ ಉಪಗ್ರಹ ಮ್ಯಾಪಿಂಗ್‌ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯೊಂದಿಗೆ NHAI ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. * NHAI ಸಂಸ್ಥೆಯು ಹಲವಾರು ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆಯ ಜವಾಬ್ದಾರಿಯನ್ನು ಹೊಂದಿದೆ. ಉತ್ತರ ಪ್ರದೇಶ ಕೇಡರ್‌ನ ನಿವೃತ್ತ IAS ಅಧಿಕಾರಿ 'ಯೋಗೇಂದ್ರ ನರೇನ್' ಅವರು ಈ ಹಿಂದೆ 1988 ರಲ್ಲಿ NHAI ನ ಮೊದಲ ಅಧ್ಯಕ್ಷರಾಗಿದ್ದರು. *ಈ ಹಿಂದೆ 2015 ರ ಸೆಪ್ಟೆಂಬರ್. 29 ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಸುಸ್ಥಿರ ಪರಿಸರ ಹಾಗೂ ಅಂತರ್ಗತ ಬೆಳವಣಿಗೆಗಾಗಿ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಹಸಿರು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು, ಭಾರತ ಸರ್ಕಾರವು ಹಸಿರು ಹೆದ್ದಾರಿಗಳು [ಪ್ಲಾಂಟೇಶನ್‌ಗಳು, ಟ್ರಾನ್ಸ್‌ಪ್ಲಾಂಟೇಶನ್‌ಗಳು, ಸೌಂದರ್ಯೀಕರಣ ಮತ್ತು ನಿರ್ವಹಣೆ] ನೀತಿ - 2015 ನ್ನು ಪ್ರಕಟಿಸಿದೆ. * ಪ್ರಸ್ತುತ ಹಸಿರು ಹೆದ್ದಾರಿ ವಿಭಾಗವು - ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ಅಡಿಯಲ್ಲಿ ಒಂದು ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳ ಜಾಲದಲ್ಲಿ ರಸ್ತೆ ಬದಿಯ ತೋಟಗಳನ್ನು ಯೋಜಿಸುವ, ಹಾಗೂ ಅನುಷ್ಠಾನಗೊಳಿಸುವ ಕಾರ್ಯವನ್ನು ವಹಿಸಲಾಗಿದೆ, ಇದರಿಂದಾಗಿ ತೋಟಗಳ ವಲಯದಲ್ಲಿ ಒಂದು ಲಕ್ಷ ನೇರ ಉದ್ಯೋಗಗಳು ಸೃಷ್ಟಿಸುತ್ತವೆ ಎಂದು ತಿಳಿಸಿದ್ದಾರೆ.