Job Description: * ಇತ್ತೀಚಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯು ಒಡಿಶಾ ಕರಾವಳಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ತಿಳಿದು ಬಂದಿದೆ. ಈ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ನಿಯಂತ್ರಣ ವ್ಯವಸ್ಥೆ ಹಾಗೂ ಹೊಸ ತಂತ್ರಜ್ಞಾನಗಳನ್ನೂ ಒಳಗೊಂಡಿದೆ, ಇದೀಗ ಈ ಕ್ಷಿಪಣಿಯನ್ನು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಉಡಾವಣಾ ಪ್ಯಾಡ್-III ನಿಂದ ಉಡಾವಣೆ ಮಾಡಲಾಗಿದೆ ಎಂದಿದ್ದಾರೆ. * DRDO ಅಭಿವೃದ್ಧಿಪಡಿಸಿರುವ ಈ ಬ್ರಹ್ಮೋಸ್‌ ಕ್ಷಿಪಣಿಯನ್ನು ಭೂಮಿ, ಆಕಾಶ ಹಾಗೂ ಸಮುದ್ರ ಮಟ್ಟದಿಂದು ಉಡಾವಣೆ ಮಾಡಬಹುದಾಗಿದೆ. ಪ್ರಸ್ತುತ ವಿಶ್ವದ ಶಬ್ದಾತೀತ ವೇಗದ ಕ್ಷಿಪಣಿಗಳಲ್ಲಿ, ಈ ಬ್ರಹ್ಮೋಸ್ ಕ್ಷಿಪಣಿಯ ಕೂಡ ಒಂದು. * ಸಮುದ್ರ ಮಟ್ಟದಿಂದ ಉಡಾವಣೆ ಮಾಡಬಹುದಾದ ಈ ಬ್ರಹ್ಮೋಸ್‌ ಕ್ಷಿಪಣಿಯು ಈ ಹಿಂದೆ 2014 ರಲ್ಲಿ ಭಾರತೀಯ ನೌಕಾಪಡೆಗೆ ಸೇರಿಕೊಂಡಿದೆ. ಪ್ರಸ್ತುತ ಈ ಬ್ರಹ್ಮೋಸ್ ಕ್ಷಿಪಣಿಯನ್ನು ರಷ್ಯಾ ದೇಶದ ಪಿ-800 ಕ್ಷಿಪಣಿ ಮಾದರಿಯಲ್ಲಿಯೇ ಅಭಿವೃದ್ಧಿ ಪಡಿಸಲಾಗಿದೆ. * * ಬ್ರಹ್ಮೋಸ್ : ಇದು ಭಾರತ ಹಾಗೂ ರಷ್ಯಾ ದೇಶಗಳಲ್ಲಿ ಎರಡು ನದಿಗಳ ಹೆಸರನ್ನು ಸೇರಿಸಿ ಈ ಕ್ಷಿಪಣಿಗೆ ಬ್ರಹ್ಮೋಸ್ ಎಂದು ಹೆಸರಿಸಿದ್ದಾರೆ. ಇದು ಭೂಮಿ ಹಾಗೂ ಸಮುದ್ರ ಮಟ್ಟದಿಂದ ಉಡಾವಣೆಯಾಗುವ ಕ್ಷಿಪಣಿಯಾಗಿದೆ, ಈ ಬ್ರಹ್ಮೋಸ್ ಕ್ಷಿಪಣಿಯನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ ಅದೀಗ ಯಶಸ್ವಿಯಾಗಿದೆ. * ಈ ಬ್ರಹ್ಮೋಸ್ ಸೂಪರ್ ಸಾನಿಕ ಕ್ರೂಸ್ ಕ್ಷಿಪಣಿಯ ಸಬ್ ಮರೀನ್, ಹಡಗು, ಏರ್ ಕ್ರಾಫ್ಟ್ ಅಥವಾ ಭೂಮಿಯ ಮೇಲ್ಮೈಯಿಂದ ಉಡಾವಣೆ ಮಾಡಿದರೆ ಇದು 400 ಕಿ.ಮೀ. ಹೆಚ್ಚು ದೂರ ಸಾಗುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿ ಇದಾಗಿದೆ. ಸದ್ಯದಲ್ಲೇ ಈ ಕ್ಷಿಪಣಿ ಸಾಮರ್ಥ್ಯವನ್ನು 800 ಕಿ.ಮೀಗೆ ಹೆಚ್ಚಿಸಿ ಪರೀಕ್ಷಿಸಲಾಗುವದು ಎಂದು DRDO ತಿಳಿಸಿದೆ. * ಭಾರತ ಹಾಗೂ ರಷ್ಯಾ ದೇಶಗಳು ಜಂಟಿಯಾಗಿ ಈ ಬ್ರಹ್ಮೋಸ್ ಸೂಪರ್ ಸಾನಿಕ ಕ್ರೂಸ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿವೆ.