Job Description: * ಇತ್ತೀಚಿಗೆ ಶಿಕ್ಷಣ ಸಚಿವಾಲಯವು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಶಿಕ್ಷಣದ ನಷ್ಟದ ಬಗ್ಗೆ ತಿಳಿಯಲು 2021 ರ ನವೆಂಬರ್ ನಲ್ಲಿ ಸಮೀಕ್ಷೆಯನ್ನು ನಡೆಸಿದೆ. ಪ್ರಸ್ತುತ ಆಂಧ್ರ ಪ್ರದೇಶ ರಾಜ್ಯದ ಮೂರು ಜಿಲ್ಲೆಗಳು ಮತ್ತು ತಮಿಳುನಾಡು ರಾಜ್ಯದ 16 ಜಿಲ್ಲೆಗಳು ಭಾರೀ ಮಳೆಯಿಂದಾಗಿ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆ ರಾಜ್ಯಗಳಲ್ಲಿ ಉಳಿದಿರುವ ಎಲ್ಲಾ ಜಿಲ್ಲೆಗಳು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವು. * ಈ ಸಮೀಕ್ಷೆಯನ್ನು 'ರಾಷ್ಟ್ರೀಯ ಸಾಧನೆ ಸಮೀಕ್ಷೆ' ಎಂದು ಕರೆಯಲಾಗಿದೆ. ಈ ಸಮೀಕ್ಷೆಯನ್ನು ಜಿಲ್ಲಾ ಮಟ್ಟದ ಸಂಯೋಜಕರ ಸಹಾಯದಿಂದ ಯಸ್ಸವಿಯಾಗಿ ನಡೆಸಲಾಗಿದೆ ಎಂದಿದ್ದಾರೆ. ಈ ಮೊದಲು 2017 ರಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಆಗ ಫಲಿತಾಂಶಗಳನ್ನು ಪ್ರತ್ಯೇಕ ಜಿಲ್ಲೆಗಳಿಗೆ ವರದಿ ಕಾರ್ಡ್‌ಗಳಾಗಿ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಹಾಗೂ ಎಲ್ಲಾ ಜಿಲ್ಲೆಯ ಡೇಟಾವನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಗ್ರಹಿಸಲಾಗಿತ್ತು. ಸರ್ಕಾರವು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಕಲಿಕೆಯ ಅಡಚಣೆಗಳನ್ನು ಗುರುತಿಸಲು ಹಾಗೂ ಅವುಗಳಿಗೆ ಪರಿಹಾರದ ಕ್ರಮಗಳನ್ನು ಕೈಗೊಳ್ಳಲು ಸರಿ ಸುಮಾರು 1.23 ಲಕ್ಷ ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ. ಈ ಹಿಂದೆ 2020 ರ ಫೆಬ್ರವರಿಯಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ನಂತರ ದಿನಗಳಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ದೇಶದಲ್ಲಿ ಈ ಡಿಜಿಟಲ್ ವಿಭಜನೆಯು ಮಕ್ಕಳ ಶೈಕ್ಷಣಿಕ ಫಲಿತಾಂಶಗಳ ಮೇಲೆ ಭಾರಿ ಪರಿಣಾಮಗಳನ್ನು ಉಂಟುಮಾಡಿದೆ ಎಂದು ತಿಳಿಸಲಾಗಿದೆ. * ಈ ಸಮೀಕ್ಷೆಯ ಚೌಕಟ್ಟನ್ನು NCERT ರಚಿಸಿದೆ. - ಈ ಸಮೀಕ್ಷೆಯ ಪ್ರಕಾರ ತರಗತಿ III ರಲ್ಲಿ ಸರಿ ಸುಮಾರು 6,37,867 ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ ಅಥವಾ ಆನ್‌ಲೈನ್ ತರಗತಿಗಳನ್ನು ಸ್ವೀಕರಿಸುವ ನಿರೀಕ್ಷೆ ಇತ್ತು. ಆದರೆ, 5,40,325 ಜನ ಮಾತ್ರ ತರಗತಿಗಳಿಗೆ ಹಾಜರಾಗಿದ್ದರು. - 5 ನೇ ತರಗತಿಯಲ್ಲಿ 6,29,870 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ನಿರೀಕ್ಷೆ ಇತ್ತು. ಆದರೆ 5,45,910 ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಿದ್ದರು. - 8 ನೇ ತರಗತಿಯಲ್ಲಿ ಸುಮಾರು 11,74,609 ವಿದ್ಯಾರ್ಥಿಗಳು ತರಗಳಿಗೆ ಹಾಜರಾಗುವ ನಿರೀಕ್ಷೆ ಇತ್ತು. ಆದರೆ 10,54,437 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು. - 10 ನೇ ತರಗತಿಯಲ್ಲಿ ಸುಮಾರು 13,44,539 ವಿದ್ಯಾರ್ಥಿಗಳು ತರಗಳಿಗೆ ಹಾಜರಾಗುವ ನಿರೀಕ್ಷೆ ಇತ್ತು. ಆದರೆ 12,59,758 ಮಂದಿ ಹಾಜರಾಗಿದ್ದರು. ಈ ಸಮೀಕ್ಷೆಯನ್ನು ನಡೆಸುತ್ತಿರುವ ಸಂಧರ್ಭಗಳಲ್ಲಿ ಪ್ರಾಥಮಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಒಟ್ಟಾರೆ ಭಾಗವಹಿಸುವಿಕೆ - 3 ನೇ, 5 ನೇ, 8 ನೇ, 10 ನೇ ತರಗತಿಯಲ್ಲಿ ಒಟ್ಟಾರೆ 37,86,885 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ನಿರೀಕ್ಷೆ ಇತ್ತು. ಆದರೆ ಸುಮಾರು 34,00,430 ವಿದ್ಯಾರ್ಥಿಗಳು ಹಾಜರಾಗಿದ್ದರು. ಎಂದು ಈ ಸಮೀಕ್ಷೆ ತಿಳಿಸಿದೆ.