Job Description: * ಇದೀಗ ಬಾರ್ಡರ್ ಸೆಕ್ಯುರಿಟಿ ಫೋರ್ಸ್(BSF) ಆಪರೇಷನ್ ಸರ್ದ್ ಹವಾವನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಅಡಿಯಲ್ಲಿ, BSF ಪಾಕಿಸ್ತಾನ ದೇಶದ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲಿದೆ, ಸಾಮಾನ್ಯವಾಗಿ ಈ ಕಾರ್ಯಾಚರಣೆಯನ್ನು ರಾಜಸ್ಥಾನದ ಗಡಿಯಲ್ಲಿ ಅದರಲ್ಲೂ ವಿಶೇಷವಾಗಿ ಜೈಸಲ್ಮೇರ್ ಪ್ರದೇಶದಲ್ಲಿ ಆರಂಭಿಸಲಾಗಿದೆ. ಇದೊಂದು ನಿಯಮಿತ ವಾರ್ಷಿಕ ವ್ಯಾಯಾಮವಾಗಿದೆ, ಹಾಗೂ ಇದನ್ನು ಜನವರಿ ತಿಂಗಳಲ್ಲಿ ಆರಂಭಿಸಲಾಗುತ್ತದೆ. * ಈ ಆಪರೇಷನ್ 'ಸರ್ದ್ ಹವಾ'ವನ್ನು ಚಳಿಗಾಲದಲ್ಲಿ ನಡೆಸಲಾಗುತ್ತದೆ, ಹಾಗೂ ಆಪರೇಷನ್ 'ಗರಂ ಹವಾ'ವನ್ನು ಬೇಸಿಗೆಯಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಗಡಿಯಲ್ಲಿನ ಒಳನುಸುಳುವಿಕೆಯನ್ನು ನಿಯಂತ್ರಿಸಲು ಕೈಗೊಳ್ಳುವ ಕಾರ್ಯಾಚರಣೆಗಳಾಗಿವೆ. ಪ್ರಸ್ತುತ ಚಳಿಗಾಲದಲ್ಲಿನ ದಟ್ಟವಾದ ಮಂಜು ಗಡಿ ಪ್ರದೇಶದಲ್ಲಿ ದೃಷ್ಟಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಈ ಪರಿಸ್ಥಿತಿಯು ಭಯೋತ್ಪಾದಕರಿಗೆ ಗಡಿಯನ್ನು ದಾಟಲು ಹೆಚ್ಚು ಅನುಕೂಲಕರವಾಗಿರುತ್ತದೆ. ಈ ಕಾರಣದಿಂದಾಗಿ ಚಳಿಗಾಲದ ಋತುವಿನಲ್ಲಿ ಭದ್ರತಾ ಪಡೆಗಳು ಎಚ್ಚರವಾಗಿರುವುದು ಅತ್ಯಗತ್ಯವಾಗಿದೆ. ಇದೇ ಕಾರಣಗಳಿಂದಾಗಿ BSF ಚಳಿಗಾಲದಲ್ಲಿ ಆಪರೇಷನ್ 'ಸರ್ದ್ ಹವಾ' ನಡೆಸುತ್ತದೆ. * BSF ಪಡೆಯು 2022 ರ ಜನವರಿ. 23 ಮತ್ತು ಜನವರಿ. 28 ರ ನಡುವೆ ಆಪರೇಷನ್ ಸರ್ದ್ ಹವಾ ನಡೆಸಲಾಗುವುದು ಎಂದು ತಿಳಿಸಿದೆ. ಈ ಕಾರ್ಯಾಚರಣೆಯು ಗಣರಾಜ್ಯೋತ್ಸವಕ್ಕೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸುವ ಸಲುವಾಗಿ ಆರಂಭಿಸಲಾಗುತ್ತದೆ. * BSF ನ ಆಪರೇಷನ್ 'ಸರ್ದ್ ಹವಾ' ಅಧಿಕಾರಿಗಳು ಹಾಗೂ ಸಿಬ್ಬಂದಿ ಗಡಿಯನ್ನು ಮುಚ್ಚುತ್ತಾರೆ. ಹಾಗೂ ಆಗಾಗ ಗಸ್ತು ತಿರುಗುತ್ತಾರೆ. ಈ ಸಂದರ್ಭದಲ್ಲಿ ಗುಪ್ತಚರ ಇಲಾಖೆಯನ್ನು ಸಕ್ರಿಯವಾಗಿ ಇರಿಸಲಾಗುತ್ತದೆ. ಈ ಕಾರ್ಯಾಚರಣೆಯ ಭಾಗವಾಗಿ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರ ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸ್ ಠಾಣೆಗಳ ಸಮೀಪವಿರುವ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ, ಮತ್ತು ಜವಾನರು ಒಂಟೆಗಳು, ಫುಟ್ ಪಾಯಿಂಟ್ ಟ್ರೆಕ್ಕಿಂಗ್‌ನಲ್ಲಿ ಗಡಿ ಪ್ರದೇಶಗಳನ್ನು ಮೇಲ್ವಿಚಾರಣೆಯನ್ನು ಹಮ್ಮಿಕೊಳ್ಳುತ್ತಾರೆ. ಇದಷ್ಟೇ ಅಲ್ಲದೇ ಪಾದಚಾರಿ ಮಾರ್ಗವಾಗಿ ಒಳನುಸುಳುವವರನ್ನು ಸಹ ಪರಿಶೀಲನೆ ಮಾಡುತ್ತಾರೆ. * * BSF ನ ಆಪರೇಷನ್ ಗರಂ ಹವಾ : ಈ ಕಾರ್ಯಾಚರಣೆಯನ್ನು ಬೇಸಿಗೆ ಕಾಲದಲ್ಲಿ ರಾಜಸ್ಥಾನದಲ್ಲಿ ನಡೆಸಲಾಗುತ್ತದೆ. ಈ ಕಾರ್ಯಾಚರಣೆಯನ್ನು ಗಡಿ ಭದ್ರತಾ ಪಡೆಗಳು ನಡೆಸುತ್ತವೆ. ಇದನ್ನು ಮೇ ಅಥವಾ ಜೂನ್ ತಿಂಗಳಿನಲ್ಲಿ ಶಾಖದ ಅಲೆಗಳು ವಿಪರೀತವಾಗಿದ್ದ ಸಂಧರ್ಭಗಳಲ್ಲಿ ನಡೆಸಲಾಗುತ್ತದೆ. ನಡೆಯುತ್ತದೆ. * ಪ್ರಸ್ತುತ BSF ನ ಆಪರೇಷನ್ ಗರಂ ಹವಾ ಮತ್ತು ಆಪರೇಷನ್ ಸರ್ದ್ ಹವಾ ಕಾರ್ಯಾಚರಣೆಗಳನ್ನು ನಡೆಸುವದರಿಂದ ಗಡಿ ಭದ್ರತಾ ಪಡೆ ಮತ್ತು ಅದರ ಚಟುವಟಿಕೆಗಳನ್ನು ಬಲಪಡಿಸಲು ಸಹಾಯವಾಗಿವೆ.