Job Description: * ಮುಂಬೈನ ನೌಕಾನೆಲೆಯಲ್ಲಿನ ಭಾರತೀಯ ನೌಕೆ INS ರಣವೀರ್ ನಲ್ಲಿ ಸ್ಫೋಟ ಸಂಭವಿಸಿದೆ, ಈ ಸ್ಫೋಟ ಮೂರು ಜನ ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ನೌಕಾಪಡೆಯು ಮಾಹಿತಿ ನೀಡಿದೆ. * ಈ INS ರಣವೀರ್ ನನ್ನು 2021 ರ ನವೆಂಬರ್'ನಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕ್ರಾಸ್ ಕೋಸ್ಟ್ ಕಾರ್ಯಾಚರಣೆಗಾಗಿ ಇದನ್ನು ನಿಯೋಜಿಸಲಾಗಿತ್ತು ಹಾಗೂ ಶೀಘ್ರದಲ್ಲೇ ಇದು ಬೇಸ್ ಪೋರ್ಟ್‌ಗೆ ಮರಳಬೇಕಿತ್ತು. ಈ ಅವಘಡ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ಭಾರತೀಯ ನೌಕಾಪಡೆ ತನಿಖೆ ನಡೆಸಲು ಆದೇಶ ನೀಡಿದೆ. * ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾದ ಐದು ರಜಪೂತ ವರ್ಗದ ವಿಧ್ವಂಸಕ ನೌಕೆಗಳಲ್ಲಿ, ಈ INS ರಣವೀರ್ ಕೂಡ ಒಂದಾಗಿದೆ, ಇದು 4ನೇ ವಿಧ್ವಂಸಕ ನೌಕೆಯಾಗಿದೆ. ಈ INS ರಣವೀರ್'ನನ್ನು 1986 ರ ಅಕ್ಟೋಬರ್. 28 ರಂದು ಸೇವೆಗೆ ನಿಯೋಜಿಸಲಾಗಿತ್ತು. ಈ INS ರಣವೀರ್ ನೌಕೆಯನ್ನು ಮೈಕೋಲೈವ್ ಶಿಪ್‌ಯಾರ್ಡ್ ಬಿಲ್ಡರ್ ಕಂಪನಿ ನಿರ್ಮಿಸಿದೆ. * ಈ ಹಿಂದೆ 2008 ರಲ್ಲಿ 15 ನೇ ಸಾರ್ಕ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳಿಗೆ ಭದ್ರತೆಯನ್ನು ಕಲ್ಪಿಸುವನಿಟ್ಟಿನಲ್ಲಿ ಈ INS ರಣವೀರ್, ಹಾಗೂ INS ಮೈಸೂರು ನೌಕೆಗಳನ್ನು ಶ್ರೀಲಂಕಾದ ಪ್ರಾದೇಶಿಕ ಜಲಪ್ರದೇಶದ ಹೊರಗೆ ನಿಯೋಜಿಸಲಾಗಿತ್ತು. * ಈ INS ರಣವೀರ್ ನೌಕೆಯು ಮತ್ತೇ 2015 ರ ಮೇ. 22–26 ರಂದು INS ಶಕ್ತಿಯ ಜೊತೆಗೂಡಿ ಸಿಂಗಾಪುರಕ್ಕೆ ಭೇಟಿ ನೀಡಿತು. ಹಾಗೂ ಅದೇ ವರ್ಷದಲ್ಲಿ ಅಂದರೆ 2015 ರ ಮೇ. 31 - ಜೂನ್. 4 ರಂದು INS ರಣವೀರ್ INS ಶಕ್ತಿಯೊಂದಿಗೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ಬಂದರು ಕರೆ ಮಾಡಲಾಯಿತು. ಆಗ ಇದರ ಕ್ಯಾಪ್ಟನ್ ಜಸ್ವಿಂದರ್ ಸಿಂಗ್ ವಹಿಸಿಕೊಂಡಿದ್ದರು. * ಇತ್ತೀಚಿಗೆ 2022 ರ ಜನವರಿ. 18 ರಂದು ಮುಂಬೈನ ನೌಕಾ ನೌಕಾನೆಲೆಯಲ್ಲಿ ಹಡಗಿನ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿ '3' ಸಾವುಗಳು ಹಾಗೂ '11' ಜನರಿಗೆ ಗಾಯಗಳು ಸಂಭವಿಸಿದ್ದವು.