Job Description: * ಪ್ರಸ್ತುತ ಸಾರಥಿ ಮೊಬೈಲ್ ಅಪ್ಲಿಕೇಶನ್ ನ್ನು ಆರಂಭಿಸಿದ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI). ಈ ಅಪ್ಲಿಕೇಶನ್ ಭದ್ರತಾ ಮಾರುಕಟ್ಟೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಹೆಚ್ಚಾಗಿ ಹೂಡಿಕೆದಾರರಿಗೆ ಉಪಯೋಗವಾಗಲಿದೆ. * ಈ 'ಸಾರಥಿ' ಅಪ್ಲಿಕೇಶನ್ ಮ್ಯೂಚುಯಲ್ ಫಂಡ್‌ಗಳ, ಕೆಲಸ, ವ್ಯಾಪಾರ ಮತ್ತು ಇತ್ಯರ್ಥ, KYC ನ ಪ್ರಕ್ರಿಯೆಗಳು, ಹಾಗೂ ಮಾರುಕಟ್ಟೆಯಲ್ಲಾಗುವ ಬೆಳವಣಿಗೆಗಳ ಬಗೆಗಿನ ವಿವರಣೆಗಳನ್ನೂ ನೀಡುತ್ತದೆ. ಜೊತೆಗೆ ಈ ಅಪ್ಲಿಕೇಶನ್ ಕುಂದುಕೊರತೆಗಳಿಗೆ ಪರಿಹಾರವನ್ನು ಕಲ್ಪಿಸುವ ಕಾರ್ಯವಿಧಾನವನ್ನು ಹೊಂದಿದೆ. * ಈ 'ಸಾರಥಿ' ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಳಸಬಹುದಾಗಿದೆ. ಹಾಗೂ ಈ ಅಪ್ಲಿಕೇಶನ್ iOS ಮತ್ತು Android ಫೋನ್ ಬಳಕೆದಾರರಿಗೆ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಈ ಅಪ್ಲಿಕೇಶನ್ ಸ್ಥಳೀಯ ಭಾಷೆಗಳಲ್ಲಿಯೂ ಲಭ್ಯವಾಗಲಿದೆ ಎಂದು SEBI ತಿಳಿಸಿದೆ. * * ಈ ಅಪ್ಲಿಕೇಶನ್ ಆರಂಭಿಸಿರುವ ಉದ್ದೇಶ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವ ವೈಯಕ್ತಿಕ ಹೂಡಿಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಕಾರಣದಿಂದಾಗಿ ವೈಯಕ್ತಿಕ ಹೂಡಿಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಅಪ್ಲಿಕೇಶನ್ ಆರಂಭಿಸಲಾಗಿದೆ. * ಭದ್ರತಾ ಮಾರುಕಟ್ಟೆಗಳು ಇದೀಗ ಸೆಕ್ಯುರಿಟಿಗಳನ್ನು ಖರೀದಿಸುವ ಹಾಗೂ ಮಾರಾಟ ಮಾಡುವ ಮಾರುಕಟ್ಟೆಗಳಾಗಿವೆ. ಪ್ರಸ್ತುತ ಸೆಕ್ಯೂರಿಟಿಗಳು ಸಾರ್ವಜನಿಕ ಹಾಗೂ ಖಾಸಗಿ ಮಾರುಕಟ್ಟೆಗಳಲ್ಲಿ ಬಂಡವಾಳವನ್ನು ಸಂಗ್ರಹಿಸುವ ವ್ಯಾಪಾರ ಮಾಡಬಹುದಾದ ಹಣಕಾಸು ಸಾಧನಗಳಾಗಿವೆ. * ಸದ್ಯ ಭಾರತದಲ್ಲಿ ವೈಯಕ್ತಿಕ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 2020 ನೇ ವರ್ಷದಲ್ಲಿ ಅವರ ಪಾಲು 39% ಆಗಿತ್ತು. ಮತ್ತೇ 2021 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(NSE) ನೀಡಿರುವ ಮಾಹಿತಿಯ ಪ್ರಕಾರ 45% ಏರಿದೆ ಎಂದು ತಿಳಿಸಿದೆ. * ಪ್ರಸ್ತುತ ಬ್ಯಾಂಕ್‌ಗಳಲ್ಲಿನ ಬಡ್ಡಿ ದರಗಳು ಕಡಿಮೆಯಾಗುತ್ತಿವೆ. ಈ ಬ್ಯಾಂಕ್‌ಗಳಲ್ಲಿನ ಹೂಡಿಕೆಗಳಿಂದ ಬರುವ ಆದಾಯವು ತುಂಬಾ ಕಡಿಮೆಯಾಗಿದೆ. ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜನರು ಮನೆಯಲ್ಲಿ ಅತೀ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಕಾರಣಗಳಿಂದ ಭಾರತದಲ್ಲಿ ವೈಯಕ್ತಿಕ ಹೂಡಿಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. * * ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) : ಇದೊಂದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಭಾರತದಲ್ಲಿನ ಭದ್ರತೆಗಳು ಮತ್ತು ಸರಕು ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು 1988 ರ ಏಪ್ರಿಲ್. 12 ರಂದು ಸ್ಥಾಪಿಸಲಾಗಿದೆ. ಹಾಗೂ ಇದನ್ನು SEBI ಆಕ್ಟ್, 1992 ಮೂಲಕ 1992 ರ ಜನವರಿ. 30 ರಂದು ಶಾಸನಬದ್ಧ ಅಧಿಕಾರಗಳನ್ನು ನೀಡಲಾಯಿತು. * SEBI ನ ಪ್ರಧಾನ ಕಛೇರಿ ಮುಂಬೈ ನಗರದಲ್ಲಿದೆ. 'ಅಜಯ್ ತ್ಯಾಗಿ' ಅವರು ಪ್ರಸ್ತುತ ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.