Job Description: * ಪ್ರಸ್ತುತ ಕೇಂದ್ರ ಸರ್ಕಾರವು ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಅವಧಿಯನ್ನು ಮುಂದಿನ '3' ವರ್ಷಗಳ ವರೆಗೆ ಅಂದರೆ 2025 ರ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. * ಇದೀಗ ಕೇಂದ್ರ ಸಚಿವ ಸಂಪುಟವು 2025 ರ ಮಾರ್ಚ್. 31 ವರೆಗೆ ಈ ಆಯೋಗದ ಅವಧಿ ವಿಸ್ತರಣೆಯಾಗಿದೆ ಎಂದು ತಿಳಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿರುವ ಪ್ರಕಾರ '3' ವರ್ಷಗಳ ಅವಧಿಗೆ ಸುಮಾರು 43.68 ಕೋಟಿ ರೂ. ಖರ್ಚಾಗಲಿದೆ ಎಂದು ತಿಳಿಸಿದ್ದಾರೆ. ಹಾಗೂ ಕೇಂದ್ರದ ಈ ನಿರ್ಣಯದಿಂದ ಸಫಾಯಿ ಕರ್ಮಚಾರಿಗಳು ಪ್ರಮುಖ ಫಲಾನುಭವಿಗಳಾಗಿ ಬೆಳೆಯಲಿದ್ದಾರೆ ಎಂದಿದ್ದಾರೆ. * 2021 ರ ಡಿಸೆಂಬರ್. 31 ರವೆರೆಗೆ ಎಂಎಸ್ ಕಾಯ್ದೆ ಸಮೀಕ್ಷೆಯ ಪ್ರಕಾರ 58,098 ಮಂದಿ ಮ್ಯಾನುಯಲ್ ಸ್ಕ್ಯಾವೆಂಜರ್'ಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. * * ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗ (National Commission for Safai Karamcharis) NCSK : ಇದೊಂದು ತಾತ್ಕಾಲಿಕ ಶಾಸನಬದ್ಧವಲ್ಲದ ಸಂಸ್ಥೆಯಾಗಿದೆ, ಪ್ರಸ್ತುತ ಭಾರತದಲ್ಲಿರುವ ಸಫಾಯಿ ಕರ್ಮಚಾರಿಗಳು ಅಥವಾ ತ್ಯಾಜ್ಯ ಸಂಗ್ರಹಕಾರರು ಪರಿಸ್ಥಿತಿಗಳನ್ನು ಈ ಸಂಸ್ಥೆಯು ತನಿಖೆ ಮಾಡುತ್ತದೆ, ಹಾಗೂ ಆ ತನಿಖೆಯ ವಿವರವನ್ನು ಭಾರತ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡುತ್ತದೆ. * NCSK ಸಂಸ್ಥೆಯನ್ನು ACT, 1993 ರ ಅಡಿಯಲ್ಲಿ '3' ವರ್ಷಗಳ ಅವಧಿಗೆ ಶಾಸನಬದ್ಧ ಸಂಸ್ಥೆಯಾಗಿ ಈ ಹಿಂದೆ 1994 ರ ಆಗಸ್ಟ್. 12 ರಂದು ಸ್ಥಾಪಿಸಲಾಗಿದೆ. ಹಾಗೂ ಇದನ್ನು 2004 ರ ಫೆಬ್ರವರಿ ವರೆಗೆ, ಸಂಬಂಧಿತ ಕಾಯಿದೆ ಅವಧಿ ಮುಗಿಯುವವರೆಗೆ ಮುಂದುವರೆಸಲಾಗಿದೆ. ಈ ಸಂಸ್ಥೆಯು 1994 ಮತ್ತು 2004 ರ ನಡುವೆ ಶಾಸನಬದ್ಧ ಸಂಸ್ಥೆಯಾಗಿದೆ. 2004 ರಿಂದ ಇದನ್ನು ಹಲವಾರು ಬಾರಿ ಪುನರುಜ್ಜೀವನಗೊಳಿಸಲಾಗಿದೆ, ಇತ್ತೀಚಿಗೆ 2022 ರ ಮಾರ್ಚ್. 31 ರ ವರೆಗೆ ವಿಸ್ತರಣೆ ಮಾಡಲಾಗಿದೆ. * ಈ ಸಂಸ್ಥೆಯ ಸಫಾಯಿ ಕರ್ಮಚಾರಿಗಳಿಗೆ ವಿವಿಧ ಯೋಜನೆಗಳ ಅನುಷ್ಠಾನಗಳ ಬಗ್ಗೆ ಅಧ್ಯಯನ ಮಾಡುತ್ತದೆ, ಹಾಗೂ ಅದರ ಮೌಲ್ಯಮಾಪನ ಹಾಗೂ ಮೇಲ್ವಿಚಾರಣೆ ಮಾಡುವದರ ಜೊತೆಗೆ ಕುಂದುಕೊರತೆಗಳಿಗೆ ಪರಿಹಾರವನ್ನೂ ಕಲ್ಪಿಸುತ್ತದೆ. * ಪ್ರಸ್ತುತ ಮನ್ಹರ್ ವಲ್ಜಿಭಾಯಿ ಝಾಲಾ ಅವರು ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದಾರೆ.